ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗಾಂಧಿ ಮೀಟರ್ರು‍

ನನಗೊಬ್ಬ ಸರ್ದಾರ್ಜಿ ಸ್ನೇಹಿತ ಇದ್ದಾನೆ. ಹರ್ಪ್ರೀತ್ ಅಂತ. ನಾಲ್ಕು ತಿಂಗಳ ಹಿಂದೆ ಅವನ ಮನೆಯವರು ಬನ್ನೇರುಘಟ್ಟದಾಚೆಯ ಗೊಟ್ಟಿಗೇರೆ ಎಂಬಲ್ಲಿ ಹೊಸ ಮನೆಯೊಂದರಲ್ಲಿ ವಾಸಿಸ ತೊಡಗಿದರು. ಅಂದಿನಿಂದ ದಿನ ಬೆಳಗಾದರೆ ಅವನದೊಂದೇ ಗೋಳು. ಆಟೋಗಳು ಅವನ ಮನೆಗೆ ಬರೊದಿಲ್ಲ ಅಂತ. ಹಾಗೂ ಹೀಗು ಕಾಡಿ ಬೇಡಿದ ನಂತರ ಬಂದವರು ಮನ ಬಂದಂತೆ ಬಾಡಿಗೆ ಕೇಳುತ್ತಾರೆ. ಜಯನಗರ ೯ನೆ ಬ್ಲಾಕಿಂದ ಅಲ್ಲಿಗೆ ಇಪ್ಪತ್ತೈದು ರೂಪಾಯಿ ಮೀಟರಿನಲ್ಲಿ ಆದರೂ ನೂರೈವತ್ತರ ಕೆಳಗೆ ಯಾರು ಬರಲ್ಲವಂತೆ. ಈ ಆಟೊ ಚಾಲಕರ ಸುಲಿಗೆಯಿಂದ ಬೇಸತ್ತ ಅವನು ಹೊಸ ಕಾರನ್ನು ಕಾದಿರಿಸಿಯೇ ಬಿಟ್ಟ. ಬಿಡಿ, ಈ ಕಥೆಗೂ ಅವನ ಕಾರಿಗೂ ಸಂಬಂಧವಿಲ್ಲ.

ಸರಿಯಾದ ಕನ್ನಡ ಪದ

ಕನ್ನಡದಲ್ಲಿ ಹ್ರುದಯ ಅಥವ ಹ್ರಿದಯ ಎ೦ದು ಬರೆಯಬೇಕೆ? ಸರಿಯಾಗಿ ಬರೆಯುವುದು ಹೇಗೆ೦ದು ದಯವಿಟ್ಟು ಯಾರಾದರೂ ತಿಳಿಸುವಿರಾ? ನಾನು ಬರಹ ೬.೦ ಉಪಯೋಗಿಸುತ್ತೇನೆ.  ಅದೇ ರೀತಿ ಸ್ರಿಷ್ಟಿ, ಮ್ರಿದು, ಇತ್ಯಾದಿ ಪದಗಳನ್ನು ಬರೆಯುವಾಗಲೂ ಕೀ ಬೋರ್ಡನ್ನು ಹೇಗೆ ಉಪಯೋಗಿಸ
ಬೇಕೆ೦ದು ನನಗೆ ಗೊತ್ತಿಲ್ಲ.  ದಯವಿಟ್ಟು ತಿಳಿಸಿ. 

ಒಂದು ಪಿಗ್ಗಿನ ಕತೆ!

ಈಚೆಗೆ ಕನ್ನಡಪ್ರಭ ದ ಛಾಯಾಂಕಣವೊಂದರಲ್ಲಿ ತಾಯಿ ಹಂದಿ ತನ್ನ ಮುದ್ದುಮರಿಗಳಿಗೆ ಹಾಲುಣಿಸುತ್ತಿರುವ ಚಿತ್ರ ನೋಡಿದೊಡನೆಯೇ ನನ್ನ ಅತ್ಯಂತ ಮೆಚ್ಚಿನ ಇಂಗ್ಲಿಷ್ ಲೇಖಕ ಚಾರ್ಲ್ಸ್ ಲ್ಯಾಂಬ್ ನೆನಪಾದ.

ಕಾನೂನು ಉಲ್ಲಂಘಿಸಲು ಕಾನೂನು ಪದವಿ

(ಬೊಗಳೂರು ಸಂದರ್ಶನ ಬ್ಯುರೋದಿಂದ)
ಬೊಗಳೂರು, ಜೂ.3- ಕಾನೂನನ್ನು ಉಲ್ಲಂಘಿಸಿಯೇ ಜನ್ಮ ತಾಳಿದ್ದ ಮತ್ತು ಕಾನೂನು ಉಲ್ಲಂಘನೆಗಾಗಿಯೇ ಈ ಲೋಕದಲ್ಲಿ ಅವತಾರವೆತ್ತಿದ ಬಿಹಾರದ ಸಂಸದ ಶಹಾಬುದ್ದೀನ್ ಕಾನೂನು ಪದವಿ "ಗಿಟ್ಟಿಸಿ"ಕೊಂಡ ಹಿನ್ನೆಲೆಯಲ್ಲಿ ಆತನನ್ನು ಬೊಗಳೆ ರಗಳೆಗಾಗಿ ಮಾತನಾಡಿಸಲಾಯಿತು.

ಎಲ್ಲರಿಗೂ ನನ್ನ ನಮಸ್ಕಾರಗಳು

ನಾನು ಸಂಪದದ ಹೊಸ ಸದಸ್ಯ. ನಾನು ಸಾಫ಼್ಟ್-ವೇರ್ ನಲ್ಲಿ ಕೆಲಸ ಮಾಡುತ್ತೇನೆ. ಇಂದು ಐ.ಇ.೬.೦ ನಲ್ಲಿ ಕನ್ನಡ ಅಕ್ಶರಗಳು ಒಳ್ಳೇ ಮುತ್ತಿನಂತೆ ಹೊಳೆಯುತ್ತಿರೋದನ್ನ ನೋಡಿ ನಾನು ಯಾಕೆ ಕನ್ನಡದಲ್ಲಿ ಕನ್ನಡಿಗರೊಂದಿಗೆ ಇಂಟರ್-ನೆಟ್ ಎಂಬ ಮಾಯಾಜಾಲದಲ್ಲಿ ಅನಿಸಿಕೆಗಳನ್ನು ಹಂಚಿಕೊಳ್ಳಬಾರದು? ಅನಿಸಿತಾದ್ದರಿಂದ ಸಂಪದಕ್ಕೆ ಸೇರಿದೆ.

ವಧು ಪರೀಕ್ಷೆ?

ಅಜ್ಜ ಮೊಮ್ಮಗನನ್ನು ಕೇಳುತ್ತಾನೆ : ನೀನು ಮದುವೆಯಾಗುವ ಹುಡುಗಿ ಏನು ಓದಿದ್ದಾಳೆ?
ಮೊಮ್ಮಗ: ಎ೦.ಎಸ್ಸಿ. ಸೋಷಿಯಾಲಜಿ
ಅಜ್ಜ: ಏನು ಕೆಲಸ?
ಮೊಮ್ಮಗ: ಇನ್ನೂ ಕೆಲಸ ಸಿಕ್ಕಿಲ್ಲ
ಅಜ್ಜ: ಅವಳ ವಿದ್ಯೆಗೆ ಏನು ಕೆಲಸ ಸಿಕ್ಕ ಬಹುದು?
ಮೊಮ್ಮಗ: ಕಾಲೇಜಿನಲ್ಲಿ ಪ್ರಾಧ್ಯಾಪಕಳು, ಇಲ್ಲವೇ ಸಮಾಜ ಕಲ್ಯಾಣ ಇಲಾಖೆಯಲ್ಲಿ, ಅದೂ ಇಲ್ಲದಿದ್ದರೆ ಸ್ವತಹ ಸಮಾಜ ಪರಿವರ್ತನ ಕಾರ್ಯಗಳನ್ನು ಮಾಡಬಹುದು.
ಅಜ್ಜ: ಅ೦ದರೆ, ಸಮಾಜ ಸೇವೆ ಅನ್ನು.
ಮೊಮ್ಮಗ: ಒ೦ದು ತರಹ ಹೌದು.
ಅಜ್ಜ: ಖ೦ಡಿತ ಆ ಹುಡುಗಿಯನ್ನು ಮದುವೆಯಾಗ ಬೇಡ.
ಮೊಮ್ಮಗ: ಯಾಕಜ್ಜ?
ಅಜ್ಜ: ಇನ್ನೇನಪ್ಪಾ? ಸಮಾಜ ಸೇವೆ ಅ೦ದರೆ, ಆ ಲಲಿತಾ೦ಬನ ತರಹ (ಸಿಲ್ಲಿ ಲಲ್ಲಿ ಪ್ರಭಾವ)  ಕಸ ಗುಡಿಸುವುದು ಮತ್ತು ಮೋರಿ ತೊಳೆಯುವುದು ತಾನೆ?