ಕಾಲದ ಅರಿವು.
- Read more about ಕಾಲದ ಅರಿವು.
- 4 comments
- Log in or register to post comments
ಕಳೆದ ತಿಂಗಳು ಮಂಗಳೂರಿನ ಸಾಹಿತ್ಯಕೇಂದ್ರದಿಂದ ಎಸ್.ಎಲ್. ಭೈರಪ್ಪನವರ ಹೊಸಪುಸ್ತಕ "ಆವರಣ" ಕೊಂಡುಕೊಂಡೆ. ಓದುತ್ತಾ ಹೋದಂತೆ ಪುಸ್ತಕ ನನ್ನ ಮನಸ್ಸನ್ನೆ ಆವರಿಸಿಕೊಂಡಿತು. ಇನ್ನೂ ಓದಿ ಮುಗಿದಿಲ್ಲ.
ಹಸಿ 'ಮೈ'ಗಳ
ಹಸೆಮಣೆಗೇರಿಸಿ
ಬೆಸುಗೆಯ ಒಸಗೆಯ
ಮುಗಿಸಿದರು, ಹರಸಿದರು
'ಹಸಿರಾಗಿರಿ' ಎಂದು
ಮೊಸರಾಗಿ ಕಂಡ ಬೆಸುಗೆ
ಕೆಸರಾಯ್ತು ಕಾಣಾ ಭರತೇಶ!
-----
ಬೆಸುಗೆ = ಮದುವೆ ( ಗಂಡು ಹೆಣ್ಣನ್ನು ಬೆಸೆಯುವುದು ಮದುವೆ ತಾನೆ..ಆದ್ದರಿಂದ ಬೆಸುಗೆಯನ್ನು ಮದುವೆ ಎಂದು ಹೇಳಬಹುದು :) )
ಒಸಗೆ = ಸಮಾರಂಭ
ಇವತ್ತು ಡಾ. ಜ್ಯೋತ್ಸ್ನಾ ಕಾಮತ್ ಅವರ ಬ್ಮಾಗ್ ನಲ್ಲಿ ಏಪ್ರಿಲ್ ೧೪ರಂದು ಬರೆದಿರುವ ಬರಹವನ್ನು ನೋಡುತ್ತಿದ್ದೆ. ಋಗ್ವೇದದ ಜೂಜಾಡುವವನ ಹಾಡಿನ ಒಂದು ಭಾಗದ ಇಂಗ್ಲಿಷ್ ಅನುವಾದ ಅಲ್ಲಿತ್ತು.
ಎಲ್.ಎಮ್.ನಾಯ್ಕ ನನ್ನ ಚಡ್ಡಿ ದೋಸ್ತ. 'ನನಗೂ ಇಂಗ್ಲೀಷಿನಲ್ಲಿ ಮಾತನಾಡುವಂತಾಗಬೇಕು ಎಂಬ ಆಸೆ. ಹೇಗೆ ಸಾಧ್ಯ?' ಎಂದು ನನ್ನಲ್ಲಿ ಕೇಳಿದ.
ಮಾಗಿ ಹೆಜ್ಜೆ ಹೆಜ್ಜೆಗೆ ಎಲೆಯುದುರಿಸುತ್ತ ಬರುತ್ತದೆ
ಜೊತೆ ಬರುವ ಗಾಳಿ ರಭಸಕ್ಕೆ
ಮೇಲ್ಪದರುಗಳೆಲ್ಲ ಸವೆದು, ಆಳದ
ನೆನಪುಗಳು ಮೇಲೇಳುತ್ತವೆ.
ಎಷ್ಟು ನೆನಪುಗಳಿಲ್ಲ, ಎಲೆಯುದುರಿ
ಸುರಿವ ಕಾಡುಗಳಲ್ಲಿ ಅಲೆದದ್ದು,
ಅಂಗಳ ತುಂಬ ಮಾಗಿ ಮಲ್ಲಿಗೆ ಸುರಿದದ್ದು,
ಮಂಜು ಮುಂಜಾನೆಯಲ್ಲಿ ದೇವಾಲಯದಲ್ಲಿ
ದೀಪವುರಿಯುತ್ತ ಗಂಟೆ ಮೊಳಗಿದ್ದು...
ಮೆಕ್ಸಿಕನ್ ಅಲೆ ಎಂದರೇನು ಎನ್ನುವುದು ಕ್ರೀಡಾಪ್ರೇಮಿಗಳಿಗೆ ಗೊತ್ತಿರಲೇ ಬೇಕು. ಇದರ ಬಗ್ಗೆ ಹೆಚ್ಚಿನ ವಿವರ ನೀಡುವ ಶ್ರೀವತ್ಸ ಜೋಷಿಯವರ ಅಂಕಣ್ ಓದಿ. ನೀವೆಂದಾದರೂ ಅಂತಹ ಅಲೆಯಲ್ಲಿ ಪಾಲ್ಗೊಂಡಿದ್ದಿರಾ ನಮ್ಮೊಡನೆ ಹಂಚಿಕೊಳ್ಳಿ.
http://thatskannada.oneindia.in/column/vichitranna/220507mexican_wave1.html
ವಂದನೆಗಳು,
ವಸಂತ್ ಕಜೆ.
ಈಗಾಗಲೇ ಬೆಂಗಳೂರು, ಮುಂಬೈ, ತುಮಕೂರು, ಹಾಸನಗಳಲ್ಲಿ ಬೆಂಬಲಿಗರ ಬಳಗವನ್ನು ಹೊಂದಿರುವ ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ಇದೇ ಭಾನುವಾರ ೨೦ರಂದು ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ಬೆಂಬಲಿಗರ ಬಳಗದ ಉದ್ಘಾಟನೆಯನ್ನು ಹಮ್ಮಿಕೊಂಡಿತ್ತು.