ಹೂಗಳಂತೆ ಮರಳುವುದಿಲ್ಲ..

ಹೂಗಳಂತೆ ಮರಳುವುದಿಲ್ಲ..

ಮಾಗಿ ಹೆಜ್ಜೆ ಹೆಜ್ಜೆಗೆ ಎಲೆಯುದುರಿಸುತ್ತ ಬರುತ್ತದೆ
ಜೊತೆ ಬರುವ ಗಾಳಿ ರಭಸಕ್ಕೆ
ಮೇಲ್ಪದರುಗಳೆಲ್ಲ ಸವೆದು, ಆಳದ
ನೆನಪುಗಳು ಮೇಲೇಳುತ್ತವೆ.
ಎಷ್ಟು ನೆನಪುಗಳಿಲ್ಲ, ಎಲೆಯುದುರಿ
ಸುರಿವ ಕಾಡುಗಳಲ್ಲಿ ಅಲೆದದ್ದು,
ಅಂಗಳ ತುಂಬ ಮಾಗಿ ಮಲ್ಲಿಗೆ ಸುರಿದದ್ದು,
ಮಂಜು ಮುಂಜಾನೆಯಲ್ಲಿ ದೇವಾಲಯದಲ್ಲಿ
ದೀಪವುರಿಯುತ್ತ ಗಂಟೆ ಮೊಳಗಿದ್ದು...
ಮಾಗಿಯಲ್ಲೇ ಎಲ್ಲವೂ ಕಳೆದದ್ದು!
ದಿನಗಳೊಣಗಿ ಎಲೆಯಂತೆ ಉದುರಿ
ಮಾಗಿಯಲ್ಲೇ ವರ್ಷಗಳುರುಳಿದ್ದು.
ಅಂಗಳ ತುಂಬ ಮಾಗಿ ಮಲ್ಲಿಗೆಗಳು
ಚೆಲ್ಲಿದಷ್ಟೂ ಕಿಲಿಗುಟ್ಟುವ ಗಿಡ
ಮತ್ತೆ ನಾಳೆಗಷ್ಟೇ!
ಎಲ್ಲ ಹೂಗಿಡಗಳಿಗೂ ಹೂಗಳು
ಮತ್ತೆ ಬರುತ್ತವೆ;
ವರ್ಷಕ್ಕೊಮ್ಮೆ, ಇಲ್ಲ ವರ್ಷಕ್ಕೊಂದು.
ಬಿಟ್ಟು ಹೋದ ಇವಳು ಮಾತ್ರ
ಜೀವನ ಪೂರ್ತಿ ಬರುವುದೇ ಇಲ್ಲ...

http://raaghava-haagesummane.blogspot.com/2007/05/blog-post_07.html
.....

Rating
No votes yet