ಮಿ. ಹರ್ಜ್ ರಿಗೆ, ೧೦೦ ನೇ ವರ್ಷದ ಜನ್ಮದಿನೋತ್ಸವವಾದರೆ, ಟಿನ್ ಟಿನ್ ಗೆ ೭೮ ನೆ ವರ್ಷದ ಜನ್ಮದಿನ !

ಮಿ. ಹರ್ಜ್ ರಿಗೆ, ೧೦೦ ನೇ ವರ್ಷದ ಜನ್ಮದಿನೋತ್ಸವವಾದರೆ, ಟಿನ್ ಟಿನ್ ಗೆ ೭೮ ನೆ ವರ್ಷದ ಜನ್ಮದಿನ !

ಬರಹ

ಇದೇ ದಿನ, ೧೦೦ ವರ್ಷಗಳ ಹಿಂದೆ, ಅಂದರೆ, ಮೇ ೨೨, ೧೯೦೭ ರಲ್ಲಿ ಬೆಲ್ಜಿಯಮ್ ದೇಶದ ಬ್ರಸಲ್ಸ್ ಪಟ್ಟಣದಲ್ಲಿ , ಹರ್ಜ್ ಜನ್ಮಿಸಿದ್ದರು. ಈಗ ಅವರು ಬದುಕಿದ್ದಿದ್ದರೆ, ತಮ್ಮ ಜೀವನದ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ಅವರು ಈ ದಿನವನ್ನು ನೋಡುವ ಮೊದಲೇ ಸುಮಾರು ೨೪ ವರ್ಷಗಳ ಹಿಂದೆಯೇ ಕಣ್ಣುಮುಚ್ಚಿದ್ದರು.

ಬೆಲ್ಜಿಯಮ್ ದೇಶದ ಪ್ರಖ್ಯಾತ ವ್ಯಂಗ್ಯ ಚಿತ್ರ ಲೇಖಕ, ನಿರ್ಮಾಪಕ ಹರ್ಜ್, [ ಆತನ ನಿಜವಾದ ಹೆಸರು, ಜಾರ್ಜಸ್ ರೆಮಿ ಎಂದು. ಹರ್ಜ್ ಅವರ ಪೆನ್ ಹೆಸರು.] ೧೯೨೯ ರಲ್ಲಿ ಬೆಳಕಿಗೆ ತಂದ ಮರೆಯಲಾರದ ಕಾರ್ಟೂನ್ ವ್ಯಕ್ತಿ- ’ಟಿನ್ ಟಿನ್” ನನ್ನು ವಿಶ್ವದಲ್ಲೇಲ್ಲಾ ಮನೆಮಾತಾಗಿರಿಸಿದರು. ಈಗ ಅದೇ ಟಿನ್ ಟಿನ್, ತನ್ನ ೭೮ ನೆಯ ಹುಟ್ಟು ಹಬ್ಬ ವನ್ನು ನೆರೆವೇರಿಸಿಕೊಳ್ಳುತ್ತಿದ್ದಾನೆ. ೨೦೦೪ ರಲ್ಲಿ ೭೫ ನೆಯ ಜನ್ಮದಿನದ ಆಚರಣೆಯಾಗಿತ್ತು.

ಟಿನ್ ಟಿನ್, ಈಗ ಎಷ್ಟು ಬೇಡಿಕೆಯಲ್ಲಿದ್ದಾನೆ ಎಂದರೆ , ಅಬಾಲ ವೃದ್ಧರಾದಿಯಾಗಿ, ಎಲ್ಲರೂ ಅವನ ನಾಯಿ ’ಸ್ನೋಯಿ ’ಮತ್ತು ಅವನ ಕಾರ್ನಾಮಗಳನ್ನು ನೋಡಿ ಆನಂದಿಸಲು ಇಚ್ಛಿಸುತ್ತಾರೆ.

ಸ್ಟೀವೆನ್ ಸ್ಪೀಲ್ ಬರ್ಗ್ ರವರು, ಅವನ ಎಲ್ಲಾ ೨೪ ಕಾರ್ಟೂನ್ ಪುಸ್ತಕ ಸಂಗ್ರಹಗಳನ್ನು ಕೂಡಿಸಿ, ೩-ಡಿ ನಲ್ಲಿ ಚಲನ-ಚಿತ್ರವನ್ನು ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಅದು ಪ್ರಾಯಶಃ ೨೦೦೯ ಅಥವಾ ೨೦೧೦ ರಲ್ಲಿ ಕೊನೆಗೊಂಡು, ಟಿನ್ ಟಿನ್ ಫ್ಯಾನ್ ಗಳಿಗೆ ಲಭ್ಯವಾಗಬಹುದು.

ಹರ್ಜ್, ೨೪ ವರ್ಷಗಳ ಹಿಂದೆಯೇ ಗತಿಸಿದರು. ಈಗ ಅವರ ಪತ್ನಿ, ಫ್ಯಾನಿ ರಾಡ್ವೆಲ್ , ಈ ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.