ಜೂಜುಕೋರನೊಬ್ಬನ ಅಳಲು
ಇವತ್ತು ಡಾ. ಜ್ಯೋತ್ಸ್ನಾ ಕಾಮತ್ ಅವರ ಬ್ಮಾಗ್ ನಲ್ಲಿ ಏಪ್ರಿಲ್ ೧೪ರಂದು ಬರೆದಿರುವ ಬರಹವನ್ನು ನೋಡುತ್ತಿದ್ದೆ. ಋಗ್ವೇದದ ಜೂಜಾಡುವವನ ಹಾಡಿನ ಒಂದು ಭಾಗದ ಇಂಗ್ಲಿಷ್ ಅನುವಾದ ಅಲ್ಲಿತ್ತು.
http://www.kamat.com/jyotsna/blog/
ಸ್ವಲ್ಪ ಗೂಗಲಿಸಿ ಆ ಭಾಗದ ಪೂರ್ಣ ಪಾಠ ಇಲ್ಲಿ ಸಿಕ್ಕಿತು. (ಇಲ್ಲಿ ಮನುಧರ್ಮ ಶಾಸ್ತ್ರದಿಂದ ಎಂಬ ತಪ್ಪು ಮಾಹಿತಿ ಇದೆ)
http://www.unification.net/ws/theme065.htm
ಅದೇನೇ ಇರಲಿ, ಇದರ ಒಂದು ಭಾಗವನ್ನು ಕನ್ನಡಿಸುವ ನನ್ನ ಪ್ರಯತ್ನ ಇಲ್ಲಿದೆ. ಜೂಜಾಡಿ, ಮನೆಮಠ ಕೊನೆಗೆ ಮಡದಿಯನ್ನೂ ಕಳೆದುಕೊಂಡೊಬ್ಬಾತನ ಸ್ವಗತ (monologue) ಇದು. ಇದರ ಮೂಲವನ್ನು (ಸಂಸ್ಕೃತ) ನೋಡಿಲ್ಲದಿರುವುದರಿಂದ ಎಷ್ಟು ಕರಾರುವಾಕ್ಕಾಗಿದೆಯೋ ಅರಿಯೆ.
ದಾಳ ಹಾಕುವವನ ಅಳಲು
ಬಿದ್ದವೋ ನೋಡಿ, ಜಿಗಿದವೋ ನೋಡಿ
ಕೈಯಿಲ್ಲದೆಯೂ ಇಹರ ಕೈದು ಮಾಡುವ ಮೋಡಿ |
ಹಾಸಿನ ಮೇಲೆ ಬಿದ್ದಿಹ ಕರಿ ಇದ್ದಿಲು
ತಣಿದಿದ್ದರೂ ಎದೆ ಸುಡದಿರದು ಬಿಡಿ ||
ಉರಿಯದೆ ಹೊಟ್ಟೆ ತನ್ನವಳನು ಕಂಡರೆ
ನೆರೆಯವನ ಸೊಗಸಿನ ಮನೆ ಸೇರಿದರೆ ?
ಹಗಲಲೋ ಕಟ್ಟುವೆ ಕಂದು ಕುದುರೆಗಳ
ಇರುಳಲೋ ನಾನಿನ್ನಾಳೋ! ದಾಳ!
ಕೊಡಿರೋ ನಿಮ್ಮ ಗೆಳೆತನವ !
ಉಳಿಸಿರೋ ಮೊರೆಯನು ಹೊಕ್ಕವನ !!
ಕಾಡದೆ ನನ್ನ ಕೆಡಿಸದೆ ನನ್ನ
ಬಿಡದೇ ಹೊಡೆಯಿರೊ ಇದಿರಿಪನ!
-ಹಂಸಾನಂದಿ
Comments
ಉ: ಜೂಜುಕೋರನೊಬ್ಬನ ಅಳಲು