ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಚ್ಚಕನ್ನಡದ ಪದಗಳ ಹುಡುಕಾಟ...

ಹಳೆಗನ್ನಡ ಮತ್ತು ಬೇಂದ್ರೆ ಪದಗಳನ್ನು ಓದುವಾಗ ಕಂಡುಕೊಂಡ ಕೆಲವು ಅಣ್ಣೆ (ಅಚ್ಚ) ಕನ್ನಡದ ಪದಗಳು...ನಮ್ಮ ಅರಿವು ಹೆಚ್ಚಿಸಲು :)

ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ (ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವಾಮಿ)

ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ

ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವಾಮಿ

ಕೋರಿಕೆ: ಇದು ಟಾಲ್ಸ್‌ಟಾಯ್ ಬರೆದ ಒಂದು ನೀಳ್ಗತೆ. ಸುಮಾರು ೩೦ ವರ್ಷಗಳಿಂದ ಕಾಡಿದ ಕಥೆ. ಈಗ ಅನುವಾದ ಮಾಡಿದ್ದೇನೆ. ಇದರಲ್ಲಿನ ಪಾತ್ರಗಳು ಕನ್ನಡದಲ್ಲಿ ಮಾತಾಡಿದರೆ ಹೇಗೆ ಮಾತಾಡಬಹುದೋ ಹಾಗೆ ಅನುವಾದದ ಭಾಷೆ ಇರಬೇಕೆಂದು ನನ್ನ ಆಸೆ. ಇದು ಸುದೀರ್ಘ ಕಥೆ. ವಾರಕ್ಕೆ ಎರಡು ಬಾರಿ ಮುಂದುವರೆಸುವೆ. ಓದುಗರು ದಯವಿಟ್ಟು ಎಲ್ಲಿ ಭಾಷೆ ಕೃತಕವಾಯಿತು ಅನ್ನುವುದನ್ನು ಸೂಚಿಸಿದರೆ ಕೃತಜ್ಞ.

- ಓ ಎಲ್ ಎನ್

೨೦೦೭

ಒಂದು ಭಯಂಕರ ಜೋಕು ಓದಿ.

ಚಳಿಗಾಲದ ಒಂದು ದಿನ. ಇಬ್ಬರು ಒಂದು ಬೈಕ್ ಮೇಲೆ ಹೋಗುತ್ತಿರುತ್ತಾರೆ. ಎದುರಿನಿಂದ ಚಳಿಗಾಳಿ ಜೋರಾಗಿ ಬೀಸುತ್ತಿದೆ. ಆಗ ಮುಂದೆ ಕುಳಿತವನು ಎದೆಗೆ ತಣ್ಣನೆಯ ಗಾಳಿ ಬಡಿವುದನ್ನು ತಪ್ಪಿಸಲು ಜರ್ಕಿನ್ನನ್ನು ಅದರ ಹಿಂಭಾಗ ಮುಂದೆ ಬರುವಂತೆಯೂ , ಮುಂಭಾಗ ಹಿಂದೆ ಬರುವಂತೆಯೂ ಹಾಕಿಕೊಳ್ಳುತ್ತಾನೆ . (ಸರಿಯಾಗಿ ಓದ್ಕೊಂಡ್ರಿ ತಾನೆ?)

ಸಮಸ್ಯೆ ಬಿಡಿಸಿ

ಓರ್ವ ರಾಜ "ಮಹಾಸುಳ್ಳು"ಗಾರ ವ್ಯಕ್ತಿಗೆ ಬಹುಮಾನ ಘೋಷಿಸಿದ.ಸುಳ್ಳು ಹೇಳಿ ತನ್ನನ್ನು ಬೇಸ್ತು ಬೀಳಿಸಿದವರಿಗೆ ಬಹುಮಾನ ನೀಡುವುದಾಗಿ ಜಾಹೀರು ಮಾಡಿದ.ಇದನ್ನು ಕೇಳಿ ಹಲವರು ಬಂದು ಪ್ರಯತ್ನಿಸಿ,ವಿಫಲರಾದರು. ಒಬ್ಬಾತ ತಾನು ಸುಳ್ಳು ಹೇಳುತ್ತೇನೆ ಎಂದು ಆಸ್ಥಾನಕ್ಕೆಬಂದನಂತೆ.

ವರನಟ ರಾಜ್‍ಕುಮಾರ್ ಪುಣ್ಯತಿಥಿ

ಕನ್ನಡ ವರನಟ ರಾಜ್‍ಕುಮಾರ್ ಮೊದಲನೇ ಪುಣ್ಯತಿಥಿ ಇಂದು. ವರನಟನ ನೆನಪಿಗೆ ನಾವು ಇದುವರೆಗೆ ಗಮನೀಯವಾದುದನ್ನು ಮಾಡಿಲ್ಲ. ರಾಜ್ ಸ್ಮಾರಕ ರಚನೆಯಾಗಲಿದೆ ಎನ್ನುವ ಭರವಸೆ ಪದೇ ಪದೇ ಕೇಳಿ ಬರುತ್ತಿದೆ. ಅವರ ಬಗೆಗೆ ಖಾಸಗಿಯಾಗಿ ಪುಸ್ತಕ ಪ್ರಕಟಣಾ ಯೋಜನೆಯೂ ಇದೆ. ವರನಟನ ಸ್ಮಾರಕ ಹೇಗಿರಬೇಕು?

ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ

ಬರೆಯುವ ಮುಂಚೆ ಕೆಲವು ಪದಗಳನ್ನು ರಾತ್ರಿಯಿಡೀ ನೆನೆಹಾಕಿಟ್ಟು ಮರುದಿನ ನುಣ್ಣಗೆ ರುಬ್ಬಿ ತಯಾರು ಮಾಡಿಡಬೇಕಾಗುತ್ತದೆ. ಇನ್ನು ಕೆಲವು ಪದಗಳನ್ನು, ಬೇಕೆಂದಾದರೆ ಒಂದು ಬಟ್ಟೆಯಲ್ಲಿ ಕಟ್ಟಿಟ್ಟು ಮೊಳಕೆ ಬರಿಸಬಹುದು. ಇಲ್ಲ ಕೆಲವೊಮ್ಮೆ ಹಾಗೆಯೇ ಉಪಯೋಗಿಸಬಹುದು. ಮೊಳಕೆ ಬರಿಸಿದರೆ ಪೌಷ್ಟಿಕವಾಗಿದ್ದು ಆರೋಗ್ಯಕ್ಕೆ ಒಳ್ಳೆಯದು ಎನ್ನುವವರಿದ್ದಾರೆ. ಆದರೆ ಅದು ಹಾಗೇ ಆಗಬೇಕೆಂದೇನೂ ಇಲ್ಲ. ಮೊಳಕೆಯೊಡೆದ ಪದದ ರುಚಿ ನಿಮಗೆ ಹಿಡಿಸದಿದ್ದರೆ ಹಾಗೇ ಉಪಯೋಗಿಸಲೂ ಬಹುದು. ಪೌಷ್ಟಿಕದಷ್ಟೇ ರುಚಿಯೂ ಮುಖ್ಯವಲ್ಲವೆ?
ಇನ್ನು ಕೆಲವು ಪದಗಳು ಚೆನ್ನಾಗಿ ಬಲಿತಿದ್ದರೆ ಒಳ್ಳೆಯದು. ಜಗಿದಾಗ ಬಾಯಿಗೆ ಸಿಕ್ಕುವಂತಿರಬೇಕು. ಅಂಥ ಪದಗಳನ್ನು ಚೆನ್ನಾಗಿ ಬೇಯಿಸಬೇಕಾಗಬಹುದು. ಕೆಲವೊಮ್ಮೆ ಉಪ್ಪುಖಾರ ಚೆನ್ನಾಗಿ ಹಾಕಿ ಬಲಿತ ಪದಗಳನ್ನು ಬೇಯಿಸಿದರೆ ಗಮ್ಮತ್ತಾಗಿರುತ್ತದೆ. ಇನ್ನು ಕೆಲವು ಪದಗಳು ಎಳೆಯದಾಗಿದ್ದರೆ ತುಂಬಾ ರುಚಿ. ಅವುಗಳನ್ನು ಬೇಯಿಸಲೇಬೇಕಾಗಿಲ್ಲ. ಬಿಸಿನೀರಿನಲ್ಲಿ ಒಂದಷ್ಟು ಹೊತ್ತು ಮುಳಿಗಿಸಿಟ್ಟು ತೆಗೆದು ಬಿಡಬಹುದು. ಆಗ ಆ ಪದಗಳ ಒಳಗಿನ ಪರಿಮಳ ಇನ್ನೂ ಚೆನ್ನಾಗಿ ಮೂಗಿಗೆ ಅಡರುತ್ತದೆ. ಎಳೆಯ ಪದಗಳನ್ನು ಹಾಗೆ ಉಪಯೋಗಿಸುವಾಗ ಹೆಚ್ಚು ಉಪ್ಪುಖಾರಹುಳಿ ಬೇಡ, ಅದು ಪದದ ನಿಜ ಸೊಗಡನ್ನು ಮುಚ್ಚಿಬಿಡುತ್ತದೆ ಎಂಬ ಅಪವಾದವೂ ಇದೆ.

ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ. ಸ್ತುತಿ ನಿ೦ದೆಗೆ ಕಿವುಡನಾಗಿರ ಬೇಕು.

ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ.
ಯಾರೋ ಆರನ್ನೋ ನಿ೦ದಿಸಿದರೆ ನಾವೇಕೆ ಅಷ್ಟೋ೦ದು ಮನಸ್ಸು ಕೊಡಬೇಕು ??
********************************
ಭೂಮಿ ನಿನ್ನದಲ್ಲ್ಲ , ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ
ಅವು ಜಗಕ್ಕಿಕ್ಕಿದ ವಿಧಿ
ನಿನ್ನ ಒಡವೆ ಎ೦ಬುದು ಜ್ಞಾನರತ್ನ.
ಅ೦ತಪ್ಪ ದಿವ್ಯ ರತ್ನವ ಕೆಡಗುಡದೆ
ಆ ರತ್ನವ ನೀನು ಅಲ೦ಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿ೦ಗದಲ್ಲಿ