ಅಚ್ಚಕನ್ನಡದ ಪದಗಳ ಹುಡುಕಾಟ...
ಹಳೆಗನ್ನಡ ಮತ್ತು ಬೇಂದ್ರೆ ಪದಗಳನ್ನು ಓದುವಾಗ ಕಂಡುಕೊಂಡ ಕೆಲವು ಅಣ್ಣೆ (ಅಚ್ಚ) ಕನ್ನಡದ ಪದಗಳು...ನಮ್ಮ ಅರಿವು ಹೆಚ್ಚಿಸಲು :)
ನಿಱೆಗೆ -ಶೋಭೆ
ನಿಬ್ಬರ - ವಿಶೇಷ (special)
ನಟ್ಟುವಿಗ - ನಾಟ್ಯಶಿಕ್ಷಕ
ನೆರವು - ಸಹಾಯ
ನೆಱತೆ - ಪೂರ್ಣತೆ
ನಿರವಯ(ಅಣ್ಣೆ ಪದ?) - ಅಖಂಡ
ದುಗುಡ - ಚಿಂತೆ, ದುಃಖ
ತೊರೆ - ನದಿ
ತೊಡೆ - ನಾಶ
ತೆತ್ತಿಗ - ಸೇವಕ, ಆಪ್ತ
ಗರುವ - ಶ್ರೇಷ್ಠ
ಕಂಸಾಳ - ಕಂಚಿನ ತಾಳ
ಕಿಂಕಿಲ - ಸಂಕೀರ್ಣ( complex)
ಒಟ್ಟಿಲ್ - ರಾಶಿ
ಇಂಪು - ಮಾಧುರ್ಯ
ಅಣತಿ - ಆಙ್ಞೆ
ಆಡುವೊಲ - ಕ್ರೀಡಾಂಗಣ
ಅಣಕ - ಹಾಸ್ಯ
ಅಳವಿ - ಸಾಮರ್ಥ್ಯ
ಅಡಬಳ - ಮಾಂಸ
ಉದ್ದಂಡ(ಅಣ್ಣೆ??) - ಗರ್ವಿಷ್ಠ
ಉಲುಹು - ಧ್ವನಿ
ಕೈದು - ಆಯುಧ
ಕೈವಾರಿಸು - ಸ್ತುತಿಸು
ಗೊಡವೆ - ಗಸಣೆ - ಚಿಂತೆ - ವಿಚಾರ ( ಬೇಂದ್ರೆಯವ್ರ ಪದ್ಯದಲ್ಲಿ ಇದು ಇದೆ "ನಂದ ನನಗೆ ಎಚ್ಚರಿಲ್ಲ ಮಂದಿ ಗೊಡವೆ ಏನ ನನಗೆ? ...ಹಿಂದ ನೋಡದ ಗೆಳತಿ")
ಗಾಹು - ಕಪಟ
ಬಣಗು - ಯಃಕಶ್ಚಿತ, ಕ್ಷುಲ್ಲಕ
ಬಲ್ಲವಿಕೆ - ತಿಳುವಳಿಕೆ - ಚಾತುರ್ಯ
ಮೊಗಸು - ಜತುನ - ಪ್ರಯತ್ನ - ಶ್ರಮ
ಸೊಡ್ಡಳ - ಶಿವ
ಹದುಳ - ಸುರಕ್ಷಿತ - ಕ್ಷೇಮ
ಹಱುವು - ಉಪಾಯ
Comments
ನೆಱೆತ ಇಲ್ಲಾ ನೆಱತೆ?
In reply to ನೆಱೆತ ಇಲ್ಲಾ ನೆಱತೆ? by ಸಂಗನಗೌಡ
Re: ನೆಱೆತ ಇಲ್ಲಾ ನೆಱತೆ?
In reply to Re: ನೆಱೆತ ಇಲ್ಲಾ ನೆಱತೆ? by ವೈಭವ
Re: ನೆಱೆತ ಇಲ್ಲಾ ನೆಱತೆ?
Re: ಅಚ್ಚಕನ್ನಡದ ಪದಗಳ ಹುಡುಕಾಟ...
In reply to Re: ಅಚ್ಚಕನ್ನಡದ ಪದಗಳ ಹುಡುಕಾಟ... by shreekant.mishrikoti
Re: ಅಚ್ಚಕನ್ನಡದ ಪದಗಳ ಹುಡುಕಾಟ...
ಇಲ್ಲೊಂಚೂರು ನೋಡಿ