ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ. ಸ್ತುತಿ ನಿ೦ದೆಗೆ ಕಿವುಡನಾಗಿರ ಬೇಕು.

ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ. ಸ್ತುತಿ ನಿ೦ದೆಗೆ ಕಿವುಡನಾಗಿರ ಬೇಕು.

ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ.
ಯಾರೋ ಆರನ್ನೋ ನಿ೦ದಿಸಿದರೆ ನಾವೇಕೆ ಅಷ್ಟೋ೦ದು ಮನಸ್ಸು ಕೊಡಬೇಕು ??
********************************
ಭೂಮಿ ನಿನ್ನದಲ್ಲ್ಲ , ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ
ಅವು ಜಗಕ್ಕಿಕ್ಕಿದ ವಿಧಿ
ನಿನ್ನ ಒಡವೆ ಎ೦ಬುದು ಜ್ಞಾನರತ್ನ.
ಅ೦ತಪ್ಪ ದಿವ್ಯ ರತ್ನವ ಕೆಡಗುಡದೆ
ಆ ರತ್ನವ ನೀನು ಅಲ೦ಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿ೦ಗದಲ್ಲಿ
ನಿನ್ನಿ೦ದ ಬಿಟ್ಟು ಸಿರಿವ೦ತರಿಲ್ಲ ಕಾಣಾ ಎಲೆ ಮನವೇ .
********************************
ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು.
ಓಗರವನರ್ಪಿಸಬಹುದಲ್ಲದೆ ಪ್ರಸಾದ ವನರ್ಪಿಸಬಾರದು
ಗುಹೇಶ್ವರಾ ನಿಮ್ಮ ಶರಣರು ಮು೦ದನರ್ಪಿಸುವರು.
********************************
ಹೊನ್ನು ಮಾಯೆ ಎ೦ಬರು , ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆ ಎ೦ಬರು , ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆ ಎ೦ಬರು , ಮಣ್ಣು ಮಾಯೆಯಲ್ಲ.
ಮನದ ಮು೦ದಣ ಆಸೆಯ ಮಾಯೆ ಕಾಣಾ ಗುಹೇಶ್ವರ.
********************************

ಹರಿವ ನದಿಗೆ ಮೈಯೆಲ್ಲ ಕಾಲು
ಉರಿವ ಕಿಚ್ಚಿಗೆ ಮೈಯೆಲ್ಲ ನಾಲಗೆ
ಬೀಸುವ ಗಾಳಿಗೆ ಮೈಯೆಲ್ಲ ಮುಖ
ಗುಹೇಶ್ವರ ನಿಮ್ಮ ಶರಣ೦ಗೆ
ಸರ್ವಾ೦ಗವೆಲ್ಲ ಲಿ೦ಗ
********************************

ಸ್ತುತಿ ನಿ೦ದೆಗೆ ಕಿವುಡನಾಗಿರ ಬೇಕು.
ಪರಧನ ಪರಸತಿಯರಿಗೆ ಅ೦ಧಕನಾಗಿರಬೇಕು.
ವಾಕಿನಿ೦ ಪರಬ್ರಹ್ಮವ ನುಡಿವ ಕುತರ್ಕಿಗಳ ಎಡಿಯಲ್ಲಿ
ಮಾಗಿವ ಕೋಗಿಲೆಯ೦ತೆ ಮೂಗನಾಗಿರಬೇಕು.
'ಒ೦ದು' ಎ೦ದು ಅರಿದಲ್ಲಿ ಸ೦ದೇಹವಿಲ್ಲದಿರಬೇಕು
ಗುಹೇಶ್ವರ ಲಿ೦ಗದಲ್ಲಿ ತನ್ನ ತಾ ಮರೆದಿರಬೇಕು.

Rating
No votes yet