ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪೋಸ್ಟ್ ಮಾಡಲು ಇರಬೇಕಾದ ಕನಿಷ್ತ್ಟ ಪದಗಳು

ಮಾನ್ಯರೇ,

         ನಾನು ಬರೆದಿರುವಂತಹ ಹನಿಗವನಗಳನ್ನು ಸಂಪದದಲ್ಲಿ ಪೋಷ್ಟ್ ಮಾಡಲು ಪ್ರಯತ್ನಿಸಿದಾಗ  ಕನಿಷ್ತ್ಟ ೨೫ ಪದಗಳು ಇರಬೇಕಾದುದರಿಂದ ಪೋಷ್ಟ್ ಮಾಡಲಾಗತ್ತಿಲ್ಲ. ದಯವಿಟ್ಟು ಈ ನಿಯಮವನ್ನು ಬದಲಿಸಬೇಕಾಗಿ ಕೇಳಿಕೊಳ್ಳುತ್ತೇನೆ.

ಒಂದಾನೊಂದು ಕಾಲದಲ್ಲಿ

ಒಂದಾನೊಂದು ಕಾಲದಲ್ಲಿ

ಮಗು,
ಒಂದಾನೊಂದು ಕಾಲದಲ್ಲಿ
ಅವರು ಎದೆಯಾಳದಿಂದ ನಗುತ್ತಿದ್ದರು
ಮತ್ತು ನಗು ಕಣ್ಣುಗಳಲಿದ್ದವು;
ಆದರೀಗ, ಅವರು ಬರಿದೆ ಹಲ್ಲು ತೋರಿಸುತ್ತಾರೆ
ಅವರ ಮಂಜಿನಂತ ತಣ್ಣಗಿನ ಕಣ್ಣುಗಳು
ಹುಡುಕುತ್ತವೆ ನನ್ನ ನೆರಳುಗಳ ಹಿಂದೆ.

ನಿರಾಶ್ರಿತ ತಾಯಿ ಮತ್ತು ಮಗು

ನಿರಾಶ್ರಿತ ತಾಯಿ ಮತ್ತು ಮಗು 

ಮಡೋನಾ ಮತ್ತು ಮಗುವಿನ ಯಾವೊಂದು ಕಲೆಯೂ
ನಿಲುಕದಂತ ಚಿತ್ರವೊಂದರಲ್ಲಿ
ಕೆಲವೇ ಕ್ಷಣಗಳಲ್ಲಿ ಮರೆಯಬೇಕಿರುವ ತನ್ನ
ಕಂದನ ಕುರಿತ ತಾಯಿಯೊಬ್ಬಳ ವಾತ್ಸಲ್ಯ.

ಮಳೆ...ಮಳೆ...ಮಳೆ....

ಮಳೆ...ಮಳೆ...ಮಳೆ....
ಇಡೀ ವರ್ಷದ ತುಂಬಾ ಸುಂದರವಾದ ಋತು "ವರ್ಷಋತು".
ಯಾಕೊ ಗೊತ್ತಿಲ್ಲ ಮಳೆ ನನಗೆ ತುಂಬಾ ಇಷ್ಟವಾಗುತ್ತದೆ. ನಾನು ಹುಟ್ಟಿ ಬೆಳೆದದ್ದು ಅರೆ ಮಲೆನಾಡಿನಲ್ಲಿ (ಯಾಕೆ ಅಂದರೆ ಭೌಗೊಳಿಕವಾಗಿ ನಮ್ಮ ಊರು ಕರಾವಳಿ ಮತ್ತು ಮಲೆನಾಡುಗಳ ನಡುವಿನ junction)..ಮಳೆ ಅಂದರೆ ಅಮ್ಮನಿಗೆ ಬಟ್ಟೆ ಓಣಗದ ಚಿಂತೆ,ಹಪ್ಪಳ ಸಂಡಿಗೆ ಮಾಡಲು ಆಗುವುದಿಲ್ಲವಲ್ಲ ಎಂಬ ಚಿಂತೆ..ಮಳೆ ಅಂದರೆ ಅಪ್ಪನಿಗೆ ಪೇಟೆಗೆ ಹೋಗೋವಾಗ ಒದ್ದೆ ಯಾಗುವ ಚಿಂತೆ..ಮಳೆ ಅಂದರೆ ತಮ್ಮನಿಗೆ ಶಾಲೆಗೆ ರಜೆ ಸಿಕ್ಕಬಹುದು ಎಂಬ ಖುಶಿ...ರಜೆ ಸಿಕ್ಕಿದರೂ ಆಟ ಆಡೊಕ್ಕೆ ಆಗಲ್ಲ ಅನ್ನೊ ಚಿಂತೆ. ಆದ್ರೆ ಮಳೆ ಸಮಸ್ತ ಹಸಿರಿಗೆ ಚಿರುರೊಡೆವ ಜೀವದ್ರವ್ಯ.ಭೂಮಿಗೆ ಹಚ್ಚ ಹಸಿರಿನ ಹೊದಿಕೆ ಹೊದೆಸುವ ಸಂಗಾತಿ.

ಅಭಾವ

ಅಭಾವ

***** 

ನಮ್ಮೂರ ರಸ್ತೆಗಳಲ್ಲಿ ಡಾಮರಿನ

ಭಾರೀ ಅಭಾವ

ಬಸ್ಸಿನಲ್ಲಿ ಹೋದರೂ

ದೋಣಿ ಪಯಣದ ಅನುಭವ

ಡಿಜಿಟಲ್ ಕ್ಯಾಮೆರಾ ಕೊಳ್ಳುವ ಮುನ್ನ ಇದನ್ನೊಮ್ಮೆ ಓದಿ

ಡಿಜಿಟಲ್ ಕ್ಯಾಮೆರಾ ಕೊಳ್ಳಲು ಯೋಚಿಸಿದ್ದೀರಾ ? ಯಾವ ಕ್ಯಾಮೆರಾವನ್ನು ಕೊಳ್ಳಬೇಕೆಂಬ ಧ್ವಂಧ್ವದಲ್ಲಿದ್ದರೆ ಈ ಲೇಖನವನ್ನೊಮ್ಮೆ ಓದಿ. ಈ ಲೇಖನ ನಿಮ್ಮ ಧ್ವಂಧ್ವಕ್ಕೆ ಸಲ್ಪ ಮಟ್ಟಿಗಾದರೂ ಸಮಾಧಾನ ಹೆಳುತ್ತದೆಂದು ಹೇಳಬಲ್ಲೆ. ನಾನು ಕ್ಯಾಮೆರ ಕೊಳ್ಳುವಾಗ ಸಂಗ್ರಹಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಕೆಲವು ಕನ್ನಡ ಪದಗಳು ತಪ್ಪಿರಬಹುದು, ನೀವು ತಪ್ಪಾಗಿ ಭಾವಿಸುವುದಿಲ್ಲ ಎಂದುಕೊಂಡಿದ್ದೇನೆ. :-)