ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮನೆ ಮನೆ ಮಾತಾಗುತ್ತಿರುವ ಸಂಪದ

ಸಂಪದದಲ್ಲೀಗ ೩೧೬ ಸದಸ್ಯರಿದ್ದಾರೆ ಎಂದರೆ ಆಶ್ಚರ್ಯವೇನಲ್ಲ. ಅದರಲ್ಲಿ ಸರಿ ಸುಮಾರು ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಯಾವುದೇ ತಾಣದಲ್ಲಿ ಸೇರುವ ಸದಸ್ಯರು ಆಗೊಮ್ಮೆ ಈಗೊಮ್ಮೆ ಮಾತ್ರ ಇಣುಕಿ ನೋಡಿ ಕಣ್ಮರೆಯಾಗುವರು. ಆದರಿಲ್ಲಿ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ.

ಈ ಕೂಸಿಗಿನ್ನೂ ಒಂದು ತಿಂಗಳು ಕಳೆದಿಲ್ಲ. ಇದರ ಕರ್ತೃವಿಗೆ ತಾಣವನ್ನು ಸಂಭಾಳಿಸುವುದೇ ಸಮಸ್ಯೆ ಆಗಿದೆ. ಉಂಹೂಂ! ಹಣದ ಸಮಸ್ಯೆಯಲ್ಲ. ಬ್ಯಾಂಡ್‍ವಿಡ್ತಿನ ಸಮಸ್ಯೆ. ಇಷ್ಟು ಸದಸ್ಯರು ಬಂದು ಸೇರುವರೆಂದು ಕನಸು ಮನಸ್ಸಿನಲ್ಲೂ ಅವರು ಎಣಿಸಿರಲಿಲ್ಲ. ಮಧ್ಯೆ ಎರಡು ದಿನಗಳ ಕಾಲ ಸಂಪದ ತನ್ನಂತಾನೇ ರಜೆ ಘೋಷಿಸಿಕೊಂಡಿತು. ಆದರೂ ಬೇಜಾರುಪಟ್ಟುಕೊಳ್ಳದೇ ಸದಸ್ಯರು ಸಕ್ರಿಯವಾಗಿ ಅವರವರ ರುಚಿಗೆ ತಕ್ಕಂತೆ ಮಾತುಕತೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ವಿಧಾನಸೌಧದೆದ್ರಿಗೆ ಮತ್ತೊಂದು ಪ್ರತಿಮೆಯಂತೆ !!!

ಈಗಾಗ್ಲೇ, ವಿಧಾನಸೌಧವೇ ಕಾಣಿಸದಷ್ಟು ಪ್ರತಿಮೆಗಳು ಅದನ್ನು ಮುತ್ತಿಕೊಂಡಿರುವಾಗ, ಇನ್ನೊಂದು ಹೊಸ ಪ್ರತಿಮೆ ಸ್ಥಾಪಿಸ್ತಾರಂತೆ. ನಮ್ಮ ಕನ್ನಡಿಗರ ಪ್ರತಿಮೆಗಳಿಗೆ ವಿಧಾನಸೌಧದ ಹಿಂದೆ ಜಾಗ, ಕನ್ನಡೇತರ ನಾಯಕರುಗಳ ಮೂರ್ತಿಗಳಿಗೆ ವಿಧಾನ ಸೌಧದೆದುರಿನ ಜಾಗ!...ಈ ಸಾಲಿಗೆ ಹೊಸ ಸೇರ್ಪಡೆ 'ಬಾಬು ಜಗಜೀವನ ರಾಂ'. ಆಗ್ಲೇ ಕನ್ನಡನಾಡಿನ ರಾಜಧಾನಿಯಲ್ಲಿ ಕನ್ನಡದ ಸ್ಥಿತಿ ಪಾತಾಳ ಮುಟ್ಟಿರುವಾಗ ಇದು ಬೇಕಿತ್ತಾ?

ಅಡೂರು ಗೋಪಾಲಕೃಷ್ಣನ್ ರವರಿಗೆ ಫಾಲ್ಕೆ

ಮಲಯಾಳಮ್ ಚಿತ್ರರಂಗದ ಅಡೂರು ಗೋಪಾಲಕೃಷ್ಣನ್ ರವರನ್ನು ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸುದ್ದಿ [:http://www.hindu.com/2005/09/06/stories/2005090614170100.htm|ಇಂದಿನ ಹಿಂದೂ ಪತ್ರಿಕೆಯಲ್ಲಿ], ಓದಿ.

"ಈ ಪ್ರಶಸ್ತಿ ಮತ್ತಷ್ಟು ಜನರು ನನ್ನ ಸಿನಿಮಾಗಳನ್ನು ನೋಡುವಂತೆ ಮಾಡಿದರೆ, ಅದೇ ಸಂತೋಷ"

ಎಂದಿದ್ದಾರೆ, ಗೋಪಾಲಕೃಷ್ಣನ್

vtu ಮೊಬೈಲ್ ರಾಮಾಯಣ

ಮೊಬೈಲ್ ರಾಮಾಯಣ
ಫೋಟೊ ಕೃಪೆ: [:http://prajavani.net|ಪ್ರಜಾವಾಣಿ]

ನಿನ್ನೆ ದಿನ ವಿಟಿಯು ಸಿ ಇ ಓ (ಆಕಾ ಕುಲಪತಿ - ಬಲವೀರರೆಡ್ಡಿ) ಕೆಲವರೊಂದಿಗೆ ಬಿ ಎಮ್ ಎಸ್ ಹಾಗು ಇನ್ನೊಂದು ಇಂಜಿನೀಯರಿಂಗ್ ಕಾಲೇಜಿಗೆ ಲಗ್ಗೆ ಇಟ್ಟು ಕ್ಲಾಸಿನಲ್ಲಿದ್ದ ಮೊಬೈಲ್ ಫೋನುಗಳನ್ನೆಲ್ಲ ವಶಪಡಿಸಿಕೊಂಡರಂತೆ!

ವಿಟಿಯು ಪ್ರಕಾರ ಕಾಲೇಜು ಪ್ರಾಂಗಣಕ್ಕೆ ಮೊಬೈಲ್ ತರುವುದೇ ತಪ್ಪಂತೆ, ಹಾಗೂ ಹಾಗೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆಯಂತೆ. ಎಲ್ಲಾದರೂ 'ಸುರಕ್ಷಿತ' ಜಾಗದಲ್ಲಿ ಮೊಬೈಲ್ ಇಟ್ಟು ಕಾಲೇಜು ಪ್ರವೇಶಿಸಬೇಕಂತೆ ;)

ಇದು ಒಂದು ಬ್ಲಾಗು.

ಅಥವಾ ಇದೂ ಒಂದು ಬ್ಲಾಗು. ನನ್ನ ಬ್ಲಾಗು ಬೇರೊಂದು ಇದೆ. ಅಲ್ಲಿ ನಾನೂ ನನ್ನವಳೂ ಇಬ್ಬರೂ ಬ್ಲಾಗಿಸುತ್ತೇವೆ. ಆದ್ದರಿಂದ ಇಲ್ಲಿ ಹೆಚ್ಚಾಗಿ ಬರೆಯುಲಾರೆ. ಆದರೆ ಆಗಾಗ ಅಲ್ಲಿಂದ ಇಲ್ಲಿಗೆ ತಂದು ಹಾಕಿಯೇನು. ಅದು ಕೃತಿಚೌರ್ಯವೆನಿಸುವುದಿಲ್ಲವಷ್ಟೆ. ಆದರೆ ಸಂಪದವನ್ನು ದಿನಕ್ಕೊಮ್ಮೆಯಾದರೂ ಓದುತ್ತೇನೆ. ಆಗಾಗ ಪ್ರತಿಕ್ರಯಿಸುತ್ತೇನೆ.

ಸಂಪದದಂಥ ತಾಣದಲ್ಲಿ ಬ್ಲಾಗ್‌ಗಳು ಇರಬೇಕೆ? ನಾನು ಕಂಡ ಹಾಗೆ ಬ್ಲಾಗುಗಳಲ್ಲಿ ಎರಡು ಬಗೆ: "ನಾನು ಈಹೊತ್ತು ಇಲ್ಲಿಗೆ ಹೋದೆ; ಅದು ಮಾಡಿದೆ/ಮಾಡಲಿಲ್ಲ; ಹೀಗಾಯಿತು/ಇಲ್ಲ" "ನನಗೆ ಬದುಕಿನಲ್ಲಿ ಬೇಸರ ಹುಟ್ಟಿದೆ/ನಲಿವುಂಟಾಗಿದೆ" ಇಂತಹ ದಿನಚರಿಯವು ಒಂದು (ಸಾವಿರಕ್ಕೆ ಒಂಭೈನೂರ ತೊಂಭತ್ತು ಇಂತಹವು. ನಾನೇನು ಇದರ ಬಗ್ಗೆ ಮೂಗು ಮುರಿಯುತ್ತಿಲ್ಲ; ನಾನು ಮಾಡಿರುವುದು, ಮಾಡುವುದೂ ಇದನ್ನೆ). ಯಾವುದೊ ವಿಷಯದ, ಕಲೆಯ, ಆಸಕ್ತಿಯ, ಕಾರ್ಯಕ್ಷೇತ್ರದ, ನಂಬಿಕೆಯ ಬಗ್ಗೆ, ಬರೆದು ವಿಚಾರವಿನಿಮಯ ನಡೆಸುವ, ತಿಳಿವಳಿಕೆ ಬೆಳೆಸಿಕೊಳ್ಳುವ/ಬೆಳೆಸುವ ಬಗೆಯವು ಇನ್ನೊಂದು. ಇವು ಬಹಳ ವಿರಳ. ಸಂಪದ ಬೆಳೆದು ಆಗಬೇಕಾದ್ದು ಎರಡನೆಯದರ ಹಾಗೆ. ಬ್ಲಾಗುಗಳಿಗೆ ಅವಕಾಶವಿದ್ದರೆ ಆಗಬಹುದಾದ್ದು ಮೊದಲನೆಯದರ ಹಾಗೆ (ಈಗ ಆಗಿಲ್ಲ; ಆಗಿಯೇ ತೀರಬೇಕಾಗಿಲ್ಲ; ಆಗುವ ಸಾಧ್ಯತೆ ಇದೆ, ಅಷ್ಟೆ). ಸಂಪದದ ಸದಸ್ಯರು ಬೇಕಾದಹಾಗೆ ಬ್ಲಾಗಿಸಲಿ; ಹೀಗೆ ಬೇಕು ಹಾಗೆ ಬೇಡವೆನ್ನುವ ಹಕ್ಕು ಯಾರಿಗೂ ಇಲ್ಲ. ಆದರೆ ಸಂಪದದಲ್ಲಿ ಕಾಣಿಸಿಕೊಳ್ಳುವ ಬರಹಗಳು ಹೇಗಿರಬೇಕು ಎನ್ನುವುದರ ಸಂಪಾದಕರ ಕಲ್ಪನೆಗೆ ವಿಪರೀತವಾಗಿ ಸಂಪದದಲ್ಲಿ ಬ್ಲಾಗು ಕಾಣಿಸಿಕೊಂಡರೆ ಏನು ಮಾಡಬೇಕು? ಏನು ಮಾಡಬಹುದು? ಸಂಪಾದಕರಿಗೆ ಬೇಸರವಾಗದ ಹಾಗೆ ಬ್ಲಾಗಿಸಬೇಕಾದ ಕಷ್ಟದ ಪರಿಸ್ಥಿತಿ ಸದಸ್ಯರಿಗಾದರೂ ಏಕೆ? ಸದಸ್ಯರಿಗೆ ಬ್ಲಾಗಿಸುವ ಅವಕಾಶ ಕೊಡದೆಯೆ ಇದ್ದರೆ ಒಳಿತೇನೊ ಎನಿಸುತ್ತದೆ.

ಅಂಗಳದ ಮೆಣಸಿನಕಾಯಿ

[ ಈ ಕಿರುಬರಹವನ್ನು ಹಿಂದೆ ನನ್ನ ಸ್ವಂತ ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ಸಂಪದದ ಓದುಗರಿಗೆಂದು ಮತ್ತೆ ಇಲ್ಲಿ ಹಾಕುತ್ತಿದ್ದೇನೆ. - ವೆಂ ]

ನೆಲ್ಲಿಕಾಯಿಯ ಗಾತ್ರ. ಅಂಗೈಯಲ್ಲಿ ಹಿಡಿಯಲು ಸುಲಭಸಾಧ್ಯ. ಆದರೆ ಅದಕ್ಕೂ ಇದಕ್ಕೂ ಅಜಗಜಾಂತರ. ಇದೊ ಅಬನೇರೊ ([w:Habanero|Habanero]). [:node/289/#indian_tezpur|ಅಸ್ಸಾಮಿನ ಮೆಣಸಿನಕಾಯಿಯ] ಬಗ್ಗೆ ಇರುವ ಚರ್ಚೆ ಇಲ್ಲಿಲ್ಲ. ಸದ್ಯಕ್ಕಂತೂ ಇದರಷ್ಟು ಖಾರದ ಮೆಣಸಿನಕಾಯಿ ಜಗತ್ತಿನಲ್ಲಿ ಬೇರೆ ಇಲ್ಲ. ಎಷ್ಟು ಖಾರ? ಗುಂಟೂರಿನ ಕಾಯಿಯಷ್ಟೆ? ಎಂದೀರಿ. ಖಾರವನ್ನೂ ಅಳೆಯಬಹುದು ಗೊತ್ತ? ಸ್ಕೋವಿಲ್ ([w:Scoville|Scoville]) ಹೆಸರಿನ ವಿಜ್ಞಾನಿ, ಪುಣ್ಯಾತ್ಮ, ಒಂದಷ್ಟು ಜನರಿಗೆ ಅರೆದ ಮೆಣಸಿನಕಾಯಿಯನ್ನು ತಿನ್ನಿಸಿ ಅದರ ಬಾಯುರಿ ಕಡಿಮೆಯಾಗಲು ಎಷ್ಟು ಸಕ್ಕರೆ ನೀರು ಕುಡಿಯುತ್ತಾರೆ ಎನ್ನುವುದರ ಮೇಲೆ ಒಂದೊಂದು ಜಾತಿಯ ಕಾಯಿಗೆ ಒಂದೊಂದು ಅಂಕೆಯನ್ನು ಹಚ್ಚಿದ. ಅವನ ಪ್ರಕಾರ ದಪ್ಪ ಮೆಣಸಿನಕಾಯಿಯಲ್ಲಿ ಯಾವ ಖಾರವೂ ಇಲ್ಲವಾದ್ದರಿಂದ ಅದರ ಅಂಕೆ ೦. ಮೆಣಸಿನಕಾಯಿ ತಿನಿಸಿದ ಪುಣ್ಯ ಸ್ಕೋವಿಲ್‌ನಿಗೆ ಸೇರಬೇಕಾದ್ದರಿಂದ ಈ ಅಳತೆಗೆ ಸ್ಕೋವಿಲ್‌ನ ಹೆಸರನ್ನೆ ಇಡಲಾಗಿದೆ. ನಾವು ಸಾಮಾನ್ಯವಾಗಿ ಬಳಸುವ ಹಸಿಮೆಣಸಿನಕಾಯಿ ೫೦೦೦೦ ದಿಂದ ೨೦೦೦೦೦ ಸ್ಕೊವಿಲ್‌ಗಳಷ್ಟು ಖಾರವಂತೆ. ಅಬನೇರೊವಿನದ್ದು ೨೦೦೦೦೦ರಿಂದ ೩೫೦೦೦೦ ಎನ್ನುತ್ತಾರೆ.

Habanero

ಕನ್ನಡಿಗರ ಅತಿದೊಡ್ಡ ಸಮಸ್ಯೆ

ನ್ನಡಿಗರ ಅತಿದೊಡ್ಡ ಸಮಸ್ಯೆ ಎಂದರೆ ತಮ್ಮೊಳಗೇ ಮಾತನಾಡಿಕೊಳ್ಳಲು ಕಷ್ಟಪಡುವುದು. ಇ-ಕನ್ನಡಿಗರು ಈ ದೌರ್ಬಲ್ಯವನ್ನು ಮೀರಿದ್ದಾರೆ ಎಂಬುದು ನನ್ನ ನಂಬಿಕೆಯಾಗಿತ್ತು. ಈಗ ಅವರನ್ನೂ ಸಾಮಾನ್ಯ ಕನ್ನಡಿಗರ ರೋಗ ಬಾಧಿಸುತ್ತಿದೆ. ಪತ್ರಿಕೆಗಳಲ್ಲಿ ಓದುಗರ ಕಾಲಂ ತುಂಬಿಸಲು ಉಪ ಸಂಪಾದಕರು ಪಡುವ ಪಾಡು ಅರಿತವರಿಗೆ ಕನ್ನಡಿಗರ ಪ್ರತಿಕ್ರಿಯಿಸುವ ಗುಣದ ಬಗ್ಗೆ ತಿಳಿದಿರುತ್ತದೆ.

ಸಂಪದದಲ್ಲಿ ಲೇಖನ ಬರೆಯುವವರು ಮತ್ತು ಪ್ರತಿಕ್ರಿಯಿಸುವವರನ್ನು ನೋಡಿದರೇ ಇದು ಅರ್ಥವಾಗುತ್ತದೆ. ಈ ಎಲ್ಲರ ಹೆಸರುಗಳನ್ನೂ ಪಟ್ಟಿ ಮಾಡಿದರೆ ಇಪ್ಪತ್ತು ಮೀರುವುದಿಲ್ಲ ಎನಿಸುತ್ತದೆ. ಆದರೆ ಸಂಪದದ ಸದಸ್ಯರ ಸಂಖ್ಯೆ ಇದರ ಹತ್ತು ಪಟ್ಟಿಗೂ ಹೆಚ್ಚಿದೆಯಲ್ಲಾ?

ಪ್ರತೀ ಬರೆಹಗಾರನಲ್ಲೊಬ್ಬ ಓದುಗ, ಪ್ರತೀ ಓದುಗನಲ್ಲೊಬ್ಬ ಬರೆಹಗಾರನಿರುತ್ತಾನೆ. ಬರೆಹಗಾರನೊಳಗಿರುವ ಓದುಗ ಕ್ರಿಯಾಶೀಲನಾಗಿದ್ದಾನೆ. ಆದರೆ ಓದುಗನ ಒಳಗಿರುವ ಬರೆಹಗಾರ ಮಾತ್ರ ಚಿಪ್ಪಿನಿಂದ ಹೊರಬರಲು ಒಪ್ಪುತ್ತಿಲ್ಲವೇಕೆ?

ನಾನು ಕಳೆದ ಆರೇಳು ವರ್ಷಗಳಿಂದ ಬರೆಯುವ ಮತ್ತು ಬರೆಯಿಸುವ ವೃತ್ತಿಯಲ್ಲಿ ಇರುವುದರಿಂದ ಕೆಲವು ಕಾರಣಗಳು ತಿಳಿದಿವೆ. ಅನೇಕ ವಿಷಯಗಳ ಅರಿವಿರುವವರು, ನಾವು ಓದುವ ಸಾಮಾನ್ಯ ಬರೆಹಗಳಲ್ಲಿ ಕಾಣುವದಕ್ಕಿಂತ ಎಷ್ಟೋ ಪಟ್ಟು ಉತ್ತಮ ಗುಣಮಟ್ಟದ ವಿಶ್ಲೇಷಣೆ ಮಾಡಬಲ್ಲವರೂ 'ಬರೆವಣಿಗೆ ನಮ್ಮಂಥವರಿಗಲ್ಲ' ಎಂದು ಕೊಂಡಿರುತ್ತಾರೆ. ಬರೆಯುವುದೆಂದರೆ ಮಿಂದು ಮಡಿಯುಟ್ಟು ಅದರ ತೇವಾಂಶ ಆರುವ ಮೊದಲು ಮುಗಿಸಬೇಕಾದ ಕ್ರಿಯೆಯೇನೂ ಅಲ್ಲ. ಮಾತಿನಲ್ಲಿ ಹೇಳುವುದನ್ನು ಅಕ್ಷರಗಳಲ್ಲಿ ಬರೆಯುವುದು ಎಂದು ಅವರಿಗೆ ಹೇಳಿದರೂ ಅರ್ಥವಾಗುವುದಿಲ್ಲ. ಆದರೆ ಒಮ್ಮೆ ಅವರು ಬರೆಯಲು ಆರಂಭಿಸಿದರೆ ಅದು ಓತ ಪ್ರೋತವಾಗಿ ಹರಿಯತೊಡಗುತ್ತದೆ.

ಸಂಪದದ ಓದುಗರಲ್ಲಿ ಅನೇಕರಿಗೆ ಪ್ರತಿಕ್ರಿಯಿಸುವ ಆಸೆ ಇದೆ. ಆದರೆ ಈ ಪ್ರತಿಕ್ರಿಯೆ ಹಾಸ್ಯಾಸ್ಪದವಾಗಿಬಿಡಬಹುದೇ? ಎಂಬಂಥ ಅರ್ಥಹೀನ ಭಯಗಳು ಅವರನ್ನು ಕಾಡುತ್ತಿರುವಂತಿದೆ. ಇನ್ನು ಕೆಲವರಿಗೆ ತಂತ್ರಜ್ಞಾನದ ತೊಂದರೆಗಳು ಕಾಡುತ್ತಿರಬಹುದು. ಈ ತೊಂದರೆಗಳಿಗೆಲ್ಲಾ ಪರಿಹಾರವಿದೆ. ಹಲವು ಸಾಮಾನ್ಯ ತೊಂದರೆಗಳಿಗೆ [:FAQ|ಸಂಪದ FAQ ] ಪರಿಹಾರಗಳನ್ನು ನೀಡುತ್ತದೆ. ತುಂಬಾ ಸಂಕೀರ್ಣವಾಗಿರುವವಕ್ಕೆ [:user/1|WEB MASTER] ಇದ್ದಾರೆ. ಸಂಪದದ ಸದಸ್ಯರಲ್ಲಿ ತಂತ್ರಜ್ಞಾನಿಗಳ ಸಂಖ್ಯೆಯೇನೂ ಸಣ್ಣದಲ್ಲ.

ಈ ಬಗೆಯ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ನಾವು ಪ್ರತಿಕ್ರಿಯಿಸೋಣ. ಏನಂತೀರಿ?

ಇಸ್ಮಾಯ್ಲ್

ಶವ

ಎಂದಿಗೂ ನಗುತ ನಗಿಸುತಿಹ ನಗೆ ಬುಗ್ಗೆ ಹಿರಿಯ ಕಿರಿಯರೆಲ್ಲರ ಮನ ತಣಿಸುವ ಕಣ್ಮಣಿ ಕಪ್ಪಾದರೂ ಕಡೆದಿಟ್ಟ ಕರಿಬಂಡೆಯಂತಿಹ ತರುಣ ಸಹೃದಯರಿಗೆ ತೋರಿಸುವ ತನ್ನಲಿರುವ ಕರುಣ ಕೆಟ್ಟವರಿಗೆ ಕೆಟ್ಟವನಾಗಿ ದುಷ್ಟರ ಸದೆಬಡಿಯುವ ವೀರ ದಾಂಡಿಗರೂ ಇವನ ಹತ್ತಿರ ಬರಲು ಹೆದರಿಯಾರು ಒಳ್ಳೆಯವರಿಗೆ ಒಳ್ಳೆಯವನಾಗಿ ಸಹಾಯ ಹಸ್ತ ಚಾಚುವ ಧೀರ ಓಣಿಯ ಮಕ್ಕಳಿಗೆಲ್ಲ ಅಚ್ಚು ಮೆಚ್ಚಿನ ಅಣ್ಣ

ಕನ್ನಡ ಸಿನಿಮಾ ನೋಡಬೇಕೆ?

ಕನ್ನಡದಲ್ಲಿ ಕತೆಗಳೇ ಇಲ್ಲ. ಕನ್ನಡದಲ್ಲಿ ಒಳ್ಳೆಯ ಚಿತ್ರಕತೆ ಬರೆಯುವವರಿಲ್ಲ. ಹೀಗೆ ಕನ್ನಡ ಚಿತ್ರ ನಿರ್ಮಾಪಕರು ಹೇಳುತ್ತಾ ಹೋಗುತ್ತಾರೆ. ನಿಜಕ್ಕೂ ಕನ್ನಡದಲ್ಲಿ ಸಿನಿಮಾಗಳಿಗೆ ಅಗತ್ಯವಿರುವ ಕತೆಗಳ ಕೊರತೆ ಇದೆಯೇ? ಗಾಂಧಿನಗರದ ದೊಡ್ಡ ಸಮಸ್ಯೆ ಎಂದರೆ ಯಶಸ್ಸಿನ ಹಿಂದೆ ಸಾಗುವುದು. ಪ್ರತೀ ಯಶಸ್ಸೂ ತನ್ನಷ್ಟಕ್ಕೇ ವಿಶಿಷ್ಟ ಎನ್ನುವುದನ್ನು ಗಾಂಧಿನಗರ ಒಪ್ಪುವುದಿಲ್ಲ. ತೆಲುಗು ರಿಮೇಕ್ ಸಿನಿಮಾ ಒಂದು ಯಶಸ್ವಿಯಾದರೆ ಕನ್ನಡದ ನಿರ್ಮಾಪಕರೆಲ್ಲಾ ದಂಡು ದಂಡಾಗಿ ಆಂಧ್ರಪ್ರದೇಶ ಯಾತ್ರೆ ಆರಂಭಿಸುತ್ತಾರೆ. ಕೊನೆಗೊಮ್ಮೆ ಅವೆಲ್ಲಾ ಸೋಲುತ್ತವೆ. ಆಗ ಜ್ಞಾನೋದಯವಾದಂತೆ ವರ್ತಿಸುವ ಈ ನಿರ್ಮಾಪಕರು ಕನ್ನಡದಲ್ಲಿ ಕತೆಗಳನ್ನು ಹುಡುಕುವುದಿಲ್ಲ ಬದಲಿಗೆ ಸೀದಾ ತಮಿಳು ಸಿನಿಮಾಗಳನ್ನು ನೋಡತೊಡಗುತ್ತಾರೆ. ಹೀಗೆ ಮಲೆಯಾಳಂ, ಹಿಂದಿ ಎಲ್ಲಾ ಮುಗಿಯುವ ವೇಳೆಗೆ ಕೆಲವು ನಿರ್ಮಾಪಕರು ಚಿತ್ರ ನಿರ್ಮಿಸಲಾರದ ಮಟ್ಟಕ್ಕೆ ತಲುಪಿರುತ್ತಾರೆ. ಈ ಹಂತದಲ್ಲಿ ಕೆಲವರು 'ಸ್ಟ್ರೇಟ್ ಸಬ್ಜೆಕ್ಟ್' ಮಹಾನುಭಾವರು ಪ್ರವೇಶಿಸುತ್ತಾರೆ. ಇವರು ತಮಿಳು, ಮಲೇಯಾಳಂ ಇಲ್ಲವೇ ತೆಲುಗು ಸಿನಿಮಾಗಳ ಸಿ.ಡಿ. ನೋಡಿ ಒಂದು ಚಿತ್ರಕತೆ ರಚಿಸುತ್ತಾರೆ. ಇದಕ್ಕೆ ಪ್ರಶಸ್ತಿ ಬರಬೇಕೆಂದು ಆಶಿಸುತ್ತಾರೆ.

ಪ್ರಜಾವಾಣಿಯಲ್ಲಿ ತ ಸು ಶಾಮರಾಯರ ಬಗ್ಗೆ ಲೇಖನ

ಪ್ರಜಾವಾಣಿಯ ಇಂದಿನ ಸಾಪ್ತಾಹಿಕ ಪುರವಣಿಯಲ್ಲಿ ತ ಸು ಶಾಮರಾಯರ ಬಗ್ಗೆ ಜಿ ಎಸ್ ಶಿವರುದ್ರಪ್ಪರವರ ಲೇಖನ ಪ್ರಕಟವಾಗಿದೆ. ಓದಿ: [:http://www.prajavan…|ಲಿಂಕ್]