ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶ್ರೀಗಂಧ ಕನ್ನಡ ಕೂಟ :: "ಗಾನ ಲಹರಿ"

Srigandha Kannada Koota is proud to host the gala music program "GANA
LAHARI" by famous artistes from India namely

Vidhyabhushana Swamiji
Playback Singer Badri Prasad and
Vasantha Shashi

On Sept.24th 2006 at 2 pm in the Hindu Temple of Florida, 5509 Lynn Road, Tampa

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಪುಣೆ ಭೇಟಿ ೧೦-೦೯-೨೦೦೬

ಗೆಳೆಯ ಚಿದಾನಂದರವರು, ಪುಣೆಯಲ್ಲಿ ನಡೆದ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಸದಸ್ಯರ ಭೇಟಿಯ ಕ್ಷಣಗಳ ವರದಿಯನ್ನು ಸಿದ್ಧಪಡಿಸಿದ್ದಾರೆ. ತಮ್ಮೆಲ್ಲರ ಅವಗಾಹನೆಗೆ.

ಕನ್ನಡದಲ್ಲಿ ತಾಂತ್ರಿಕ ಪಾಠ

ಸ್ನೇಹಿತರೇ,

ಸಂಪದದ ಬಳಗದಲ್ಲಿ ಸುಮಾರು ಜನ ಸಿ, ವಿ.ಬಿ ಇತ್ಯಾದಿ ಪ್ರೋಗ್ರಾಮ್ ಲಾಂಗ್ವೇಜುಗಳಲ್ಲಿ ಪರಿಣಿತರಿರುವುದು ಸರಿಯಷ್ಟೇ. ನನಗೆ ಈ ಯಾವ ಭಾಷೆಗಳೂ ಗೊತ್ತಿಲ್ಲ. ಕಲಿಯಬೇಕು ಎನ್ನುವ ಉತ್ಸಾಹವಿದೆ. ಆದರೆ ಇಂಗ್ಲೀಷಿನಲ್ಲಿ ಉಪಯೋಗಿಸುವ ಪಾರಿಭಾಷಿಕ ಪದಗಳ ಅರ್ಥಗಳು ತಲೆಗೆ ಹೋಗುವುದು ಕಷ್ಟ ಸಾಧ್ಯ. ತಿಳಿದವರು ಯಾರಾದರೂ ಸಂಪದದ ಮೂಲಕವೇ, ಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಹೇಳಿಕೊಡತ್ತೀರಾ? ಕಲಿಯುವರಿಗೆ ಅತ್ಯಂತ ಉಪಕಾರವಾಗುವುದು. ಬೇಕಿದ್ದರೆ ಇದಕ್ಕೇ ಒಂದು ವಿಭಾಗವನ್ನೂ ಪ್ರಾರಂಭಿಸಬಹುದಲ್ಲವೇ?

~~~ಹಂಪೆಯ ಚಿತ್ರಗಳು~~~

ನಾನು ಪ್ರವಾಸ ಪ್ರಿಯ. ತಿರುಗಾಟ ಅಂದಮೇಲೆ ಮುಗೀತು! ಯಾರೇ ಕರೆಯಲಿ, ಹೆಗಲಿಗೊಂದು ಬ್ಯಾಗೇರಿಸಿ, ಆರಾಮಾಗಿ ಹೊರಟು ಬಿಡುತ್ತೇನೆ. ಹೊತ್ತಿಲ್ಲ ಗೊತ್ತಿಲ್ಲ! ಈ ಕೆಲಸದ ಜಂಜಡ ಇಲ್ಲದಿದ್ದರೆ ಯಾವತ್ತೂ ತಿರುಗುತ್ತಲೇ ಇರುತ್ತಿದ್ದೆನೇನೋ! ಏನು ಮಾಡೋಣ, ಆಗೋದಿಲ್ಲವೇ!

ಕನ್ನಡ ಯುನಿಕೋಡ್ ನ ಸಮಸ್ಯೆಯ ಬಗ್ಗೆ

ನಮಸ್ಕಾರ,

ನನ್ನ ಬಳಿ ಕನ್ನಡದ ಹೊಸ ಓಪನ್ ಟೈಪ್ ಫಾಂಟ್ ಇಲ್ಲದ ಕಾರಣ ಕೆಲವು ಅಕ್ಸ್ಶರ ಗಳು ತಪ್ಪಾಗಿ ಬರುತ್ತಿವೆ. ದಯವಿಟ್ಟು ಪರಿಹಾರ ತಿಳಿಸಿ.

ಬಿ.ಆರ್.ಎಲ್. -೬೦: ಅಭಿನಂದನಾ ಸಮಾರಂಭದ ವರದಿ

ಬೆಂಗಳೂರು, ೧೦.೦೯.೨೦೦೬: 'ಬಿ. ಆರ್. ಲಕ್ಷ್ಮಣರಾವ್‍ಗೆ ೬೦ ತುಂಬಿದ ಪ್ರಯುಕ್ತ ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭ' -ಎಂಬ ಸಾಲುಗಳನ್ನು ವಿಜಯ ಕರ್ನಾಟಕದಲ್ಲಿ ಓದುತ್ತಿದ್ದಂತೆ ಹೌಹಾರಿಬಿಟ್ಟೆ. ನಮ್ಮ ತುಂಟಕವಿ ಬಿ.ಆರ್.ಎಲ್. ಗೆ ಅರವತ್ತು ವರ್ಷ ವಯಸ್ಸಾಯಿತೇ? Impossible ! ಅದು ಹೇಗೆ ಸಾಧ್ಯ? ನನ್ನ ಅನುಮಾನವನ್ನು ಬಗೆಹರಿಸುವಂತೆ, ನಿಜವಾಗಿಯೂ ಅರವತ್ತಾಗಿದೆ ಎನ್ನುವಂತೆ ಸಾಪ್ತಾಹಿಕದಲ್ಲಿ ಜಯಂತ ಕಾಯ್ಕಿಣಿ ಬಿ.ಆರ್.ಎಲ್. ಕುರಿತು ಬರೆದ ಲೇಖನವೊಂದಿತ್ತು. ಅಭಿನಂದನಾ ಕಾರ್ಯಕ್ರಮಕ್ಕೆ ಬರಲಿರುವವರ list ನೋಡಿದೆ. ಈ ಕಾರ್ಯಕ್ರಮವನ್ನು ನಾನು attend ಮಾಡಲೇಬೇಕು ಅನ್ನಿಸಿತು. Movie ಗೆ ಹೋಗೋಣ ಎಂದು ಗೆಳೆಯರ ಜೊತೆ ಮಾತಾಡಿಕೊಂಡಿದ್ದವನು, ಅದನ್ನೆಲ್ಲಾ cancel ಮಾಡಿ, ಮಧ್ಯಾಹ್ನ ಮೂರರ ಹೊತ್ತಿಗೆ ಸೀದಾ ಕಲಾಕ್ಷೇತ್ರಕ್ಕೆ ನಡೆದೆ.

ನೂರು ವರ್ಷದ ಏಕಾಂತ - ಗೇಬ್ರಿಯಲ್ ಮಾರ್ಕ್ವೆಜ್ ನ ಕಾದಂಬರಿ

ಈ ಕಾದಂಬರಿಯನ್ನು ಹಿಂದೊಮ್ಮೆ ಓದಲು ಆರಂಬಿಸಿದ್ದೆ. ವಿಚಿತ್ರವಾಗಿದೆ . ಪ್ರಾರಂಭದ ಪುಟಗಳಲ್ಲಿ ಗಮನ ಸೆಳೆದ ಕೆಲವು ವಾಕ್ಯ ನೋಡಿ .

ಗೊತ್ತಿರುವ ಹಾಡು/ಕಥೆಗಳುಇನ್ನೊಬ್ಬರಿಗೆ ಹೇಳುವದು ಪುಣ್ಯದ ಕೆಲಸ!

ಜನಪದ ಕತೆಗಳ ಒಂದು ಪುಸ್ತಕದಲ್ಲಿ ಈ ವಿಚಾರ ಓದಿದೆ.

ನಮಗೆ ಗೊತ್ತಿರುವ ಹಾಡು / ಕಥೆಗಳನ್ನು ಇನ್ನೊಬ್ಬರಿಗೆ ಹೇಳಬೇಕು.

ಈಗ ನನ್ನ ಭಾಷೆಯನ್ನೇ ಮತ್ತೊಮ್ಮೆ ಕಲಿಯತೊಡಗಿದ್ದೇನೆ. !

ಕನ್ನಡದ ಪದಗಳನ್ನು ಗುರುತಿಸುವಲ್ಲಿ ಸಂಗನಗೌಡರು ಕೊಟ್ಟ ವಿಚಾರ ಬಹಳ ಸಹಾಯಕವಾಗಿದೆ.( ಒತ್ತಕ್ಕರ ಕುರಿತಾಗಿ)ಈಗ ಶಬ್ದಕೋಶವೊಂದನ್ನು (ಗುರುನಾಥ ಜೋಷಿಯವರದು)ತಿರುವಿ ಹಾಕುತ್ತಿದ್ದೇನೆ.

ಅಪ್ಪನ ನೆನಪು

ನನ್ನ ತೊದಲು ತುಟಿಗಳಿಗೆ ಪ್ರಾರ್ಥಿಸಲು ಕಲಿಸಿದಿರಿ,
ನನ್ನ ತಪ್ಪಡಿಗಳನು ತಿದ್ದುತ್ತ ಜೊತೆಯಲ್ಲೆ ಸಾಗಿದಿರಿ,
ಕೈಹಿಡಿದು ಬರೆಸಿ ಕೈಬರಹವನ್ನು ಚೆಂದಗಾಣಿಸಿದಿರಿ,
ನನ್ನ ಚಿತ್ತಭಿತ್ತಿಯಲಿ ನೂರಾರು ಬಣ್ಣಗಳ ತುಂಬಿದಿರಿ.