ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಪುಣೆ ಭೇಟಿ ೧೦-೦೯-೨೦೦೬

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಪುಣೆ ಭೇಟಿ ೧೦-೦೯-೨೦೦೬

ಬರಹ

ಗೆಳೆಯ ಚಿದಾನಂದರವರು, ಪುಣೆಯಲ್ಲಿ ನಡೆದ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಸದಸ್ಯರ ಭೇಟಿಯ ಕ್ಷಣಗಳ ವರದಿಯನ್ನು ಸಿದ್ಧಪಡಿಸಿದ್ದಾರೆ. ತಮ್ಮೆಲ್ಲರ ಅವಗಾಹನೆಗೆ.

ಎಲ್ಲರಿಗೂ ನಮಸ್ಕಾರ..

ಈ ಮೊದಲೆ ನಿರ್ಧರಿಸಿದಂತೆ, ನಿನ್ನೆ (೧೦-ಸೆಪ್-೦೬) "ಕನ್ನಡಸಾಹಿತ್ಯ.ಕಾಂ ನ ಪುಣೆ-ಮುಂಬೈ ಬಳಗದ" ಪುಣೆ ಮೀಟ್ ನಡೆಯಿತು.

ಬೆಳಿಗ್ಗೆ ೧೧ ಗಂಟೆಗೆ ಸರಿಯಾಗಿ ಶ್ರೀ ಶೇಖರ್ ಪೂರ್ಣ, ಶ್ರೀ ಅರುಣ್ (ಇಬ್ಬರೂ ಬೆಂಗಳೂರು), ಶ್ರೀ ರೋಹಿತ್ (ಮುಂಬೈ), ಶ್ರೀ ನರಸಿಂಹ ದತ್ತ, ಶ್ರೀ ಪವನ್ ದೇಶಪಾಂಡೆ ಮತ್ತು ನಾನು (ಎಲ್ಲರೂ ಪುಣೆಯಿಂದ), ಶ್ರೀ ರಾಘವೇಂದ್ರ ಮಠ, ಚಿಂಚವಾಡದಲ್ಲಿ ಭೇಟಿಯಾದೆವು. ಶ್ರೀ ಮಠದಲ್ಲಿ ಶ್ರೀ ಗೋವಿಂದ ಕುಲಕರ್ಣಿ ಮತ್ತು ಶ್ರೀ ಏ.ವಿ ಕುಲಕರ್ಣಿಯವರು ಕೂಡ ನಮ್ಮ ಜೊತೆ ಸೇರಿದರು.

ಶ್ರೀ ಶೇಖರ್ ಪೂರ್ಣ ಅವರು ಕನ್ನಡಸಾಹಿತ್ಯ.ಕಾಂ ನ ಗುರಿ ಮತ್ತು ಮುಂದಿನ ಯೋಜನೆಗಳನ್ನು ನೆರೆದವರಿಗೆ ವಿವರಿಸಿದರು. ಇದಕ್ಕೆ ಪೂರಕವಾಗಿ ಶ್ರೀ ವಿ.ಏ ಕುಲಕರ್ಣಿಯವರು ಪುಣೆಯಲ್ಲಿ ಕೂಡ ಕನ್ನಡಸಾಹಿತ್ಯ.ಕಾಂ ನ ಸಹಯೋಗದೊಂದಿಗೆ ಒಂದು ಕಾರ್ಯಕ್ರಮ ನಡೆಸಲು ಆಸಕ್ತಿ ತೋರಿಸಿದರು.

ಶ್ರೀ ಅರುಣ್ ಅವರಿಗೆ ವಿಮಾನದ ವೇಳೆ ಸಮೀಪಿಸುತ್ತಿದ್ದರಿಂದ ಅವರನ್ನು ನಾವು ಮಧ್ಯಾಹ್ನ ೧೨.೪೫ ಕ್ಕೆ ಬೀಳ್ಕೊಟ್ಟೆವು.

ನಂತರ ಶ್ರೀ ಮಠದಲ್ಲಿ ಪ್ರಸಾದ ಸ್ವೀಕರಿಸಿ ನಾವುಗಳೆಲ್ಲ ಶ್ರೀ ನರಸಿಂಹ ದತ್ತರ ಮನೆಗೆ ಹೋದೆವು. ಅಲ್ಲಿ ಸ್ವಲ್ಪ ಹೊತ್ತು ಚರ್ಚೆ ನಡೆಸಿ ಸಾಯಂಕಾಲ ೫.೩೦ ಕ್ಕೆ ನಾವುಗಳೆಲ್ಲ ಶ್ರೀ ಶೇಖರ್ ಪೂರ್ಣ ಅವರನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟೆವು.

ಒಟ್ಟಿನಲ್ಲಿ ನಾವುಗಳೆಲ್ಲ ಈ ಎರಡು ದಿವಸದ ಮುಂಬೈ-ಪುಣೆ ಭೇಟಿಯಲ್ಲಿ ಮುಂದಿನ ಕಾರ್ಯಕ್ರಮದ ಬಗ್ಗೆ ಒಂದು ಸ್ಪಷ್ಟ ಯೋಜನೆಯನ್ನು ತಯಾರಿಸಿದಂತಾಗಿದೆ.

ಕನ್ನಡಸಾಹಿತ್ಯ.ಕಾಂ ನ ಬಗ್ಗೆ "ಪ್ರೆಸ್ ಕಿಟ್" ಶ್ರೀ ನರಸಿಂಹ ದತ್ತ(೯೮೯೦೦೯೪೦೩೪) ಇವರ ಬಳಿಯಿರುತ್ತದೆ. ಆಸಕ್ತಿಯಿದ್ದವರು ಶ್ರೀ ದತ್ತ ಅವರನ್ನು ಅಥವಾ ನನ್ನನ್ನು ಸಂಪರ್ಕಿಸಲು ಕೋರುತ್ತೇವೆ.

ಇತಿ ವಂದನೆಗಳೊಂದಿಗೆ.
ಚಿದಾನಂದ ಬಿ
೯೮೮೧೪೬೫೪೮೫

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet