ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಂಬೈ ಮಳೆ

ಜೂನ್ ಮಾಹೆಯ ಎರಡನೆಯ ವಾರ ಮುಂಬಯಿಯಲ್ಲಿ ಖುಷಿ ಆಲ್ಫೊನ್ಸೋ ಮಾವು ಒಂದೆಡೆ ಸವಿಯಲು ಪರಮಾಯಿಷಿ ಇನ್ನೊಂದೆಡೆ ಧಾರಾಕಾರ ವರ್ಷಾಧಾರೆಯ ಸಂತಸ ಮತ್ತೊಂದೆಡೆ ಅಸ್ತವ್ಯಸ್ತದ ಜನಜೀವನ ನೀರಸ ಮಧ್ಯಾಹ್ನ ೧೨ಕ್ಕೂ ಕತ್ತಲೆ ತುಂಬುವ ಮಳೆಗಾಲ ತೊಗಲಿನ ಚಪ್ಪಲಿ ಬೂಟುಗಳಿಗೆ ವಿಶ್ರಾಂತಿಕಾಲ ಪ್ಲಾಸ್ಟಿಕ್ ಪಾದುಕೆ ಛತ್ರಿಗಳದೇ ಜಾಲ ಇದಿಲ್ಲದಿರುವವರಿಗೆ ಇಲ್ಲಿಲ್ಲ ಉಳಿಗಾಲ ಗಂಡು ಹೆಣ್ಣು ಭೇದವಿಲ್ಲದೆ ಏರಿಸಿಹರು ಪ್ಲಾಸ್ಟಿಕ್ಕಿನ ದಿರಿಸು

ಹುಡುಕಾಟ

ಸಾಧಿಸಲೇನು ಇಹುದು ಇಂದು ಅಸಾಧ್ಯವಾದುದು ನಾಳೆ ಸಾಧ್ಯವು ಮರುದಿನ ಸುಲಭಸಾಧ್ಯವು ಹುಡುಕುವುದೆಲ್ಲ ಈ ಮುಂಚೆ ಇಲ್ಲಿಯೇ ಇಹುದಲ್ಲವೇ? ಹೊಸದಾವುದದು ನಾವು ಹುಡುಕುವುದು ಹುಡುಕುವವರೆಗೂ ಅದು ಹೊಸದು ಮರುಕ್ಷಣ ಅರಿಯುವೆವು ಇದು ಈ ಮುಂಚೆಯೇ ಇಲ್ಲಿ ಇತ್ತು ಅಂತ ಹಾಗಿದ್ದಲ್ಲಿ ನಾವು ಹುಡುಕುವುದು ಕತ್ತಲೆಯಲ್ಲಿ ತಡಕಾಡಿದಂತಲ್ಲವೇ? ಇದಕೆ ಬೇಕೆ ಬುದ್ಧಿವಂತಿಕೆ ಬೆಳಕು ಸಾಕಲ್ಲವೇ?

ಕನ್ನಡದ ಸ್ಥಿತಿಗತಿ (ಹಾಸ್ಯ ಲೇಖನ)

ಮಂಜುನಾಥ್ ವಿ modmani @ gmail.com ೨೦೦೨ ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ.೧ 'ಋ" ಅಕ್ಷರವು ಬಳಕೆಯಲ್ಲಿಲ್ಲದ ಕಾರಣ ಹಾಗೂ ಭಾಷೆಯನ್ನು ಸರಳಗೊಳಿಸುವ ಅಂಗವಾಗಿ "ಋ" ಅಕ್ಷರವನ್ನು ಕೈಬಿಡಲಾಗಿದೆ. ಮತ್ತು "ಋ" ಅಕ್ಷರದ ಬದಲಾಗಿ "ರು" ಅಕ್ಷರವನ್ನು ಬಳಸಬಹುದೆಂದು ಈ ಮೂಲಕ ಸರ್ಕಾರವು ಆದೇಶ ಹೊರಡಿಸಿದೆ. ಉದಾಹರಣೆ : ಋಷಿ - ರುಷಿ ಕೃಷ್ಣ - ಕ್ರಿಷ್ಣ ಋತು - ರುತು ಋಜುತ್ವ - ರುಜುತ್ವ ೨೦೦೭ ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ. ೨ "ಋ" ಅಕ್ಷರವನ್ನು ಕನ್ನದ ಭಾಷೆಯಿಂದ ಕೈಬಿಡುವುದಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಉತ್ತೇಜಿತವಾದ ಸರ್ಕಾರ ಕನ್ನಡವನ್ನು ಮತ್ತಷ್ಟು ಸರಳಗೊಳಿಸುವ ದಿಕ್ಕಿನತ್ತ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನಿಡುತ್ತಿದೆ.

ಮರಳ ಮುನಿಯ

ಏನೇನೋ ನಡೆದಿಹವು ವಿಜ್ಞಾನ ಸಂಧಾನ । ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।। ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ । ನೇಣಾಗಿಹುದು ನೋಡು - ಮರಳ ಮುನಿಯ ।।

7.22 ಲೋಕಲ್

(ಇದು ನಾನು ದಿನವೂ ಬೆಳಗ್ಗೆ ಹಿಡಿಯುವ ೭.೨೨ರ ಚರ್ಚ್ ಗೇಟ್ ಗೆ ಹೋಗುವ ಲೋಕಲ್ ಟ್ರೈನ್ - ನನ್ನ ಅನುಭವ) ನೋಡಿರಣ್ಣ ಇದು ನನ್ನ ಲೋಕಲ್ ನ ಪ್ರಯಾಣ ಮುಗಿದ ಕೂಡಲೇ ಎಲ್ಲರೂ ನಿಟ್ಟುಸಿರು ಬಿಡೋಣ ಒಂದು ಸಾವಿರ ಮಂದಿಯ ಹೊತ್ತೊಯ್ಯುವ ಗಾಡಿ ಮೂವತ್ತು ಸಾವಿರ ಮಂದೆಗಳ ತುಂಬಿರುವ ಗಾಡಿ ಒಂದಿಂಚೂ ಜಾಗವಿಲ್ಲದ ತುಂಬಿದ ಗಾಡಿ ಅದರ ಅನುಭವ ನಿಮಗೇನು ಗೊತ್ತು ಬಿಡಿ ಕಾಲು ನವೆಯಾದಾಗ ಕೆರೆಯುವವರು ಇನ್ಯಾರದೋ ಕಾಲು

ತೃಣಮಾತ್ರನ ಕನಸು

ತೃಣಮಾತ್ರನ ಕನಸು ಎಲ್ಲ ಕರೆವರೆನ್ನ ತೃಣಮಾತ್ರ ನೋಡುತಿಹೆನು ಯಾವಾಗಲೂ ಕನಸು ಮಾತ್ರ ಕಂಡೆ ಕನಸಲಿ ಎಂಥ ದಿವ್ಯ ದರ್ಶನ ಎಂದೂ ಮಂಕಾಗಿರದ ಕನ್ನಡ ಮಾತೆಯನ್ನ ವಿಶ್ವದೆಲ್ಲೆಡೆ ಕನ್ನಡವೇ ಮನೆ ಮಾತು ಜಾತಿ ಧರ್ಮ ಕುಲವೆಲ್ಲವೂ ಕನ್ನಡಮಯವಾಗಿತ್ತು ಚಿನ್ನ ಬೆಳ್ಳಿ ವಜ್ರ ವೈಢೂರ್ಯಗಳ ಬೀದಿ ವ್ಯಾಪಾರ ಎಂದೆಂದೂ ಎಲ್ಲೆಡೆ ಹಬ್ಬದ ಸಡಗರ ನಿಸರ್ಗದತ್ತ ಸೌಂದರ್ಯ ನೋಡಿದೆಡೆಯೆಲ್ಲಾ