ಸ್ಟಾಂಪ ಪೇಪರ ಹಗರಣ ಮತ್ತು ನಮ್ಮ ರಾಜಕೀಯ ವ್ಯವಸ್ಥೆ.

ಸ್ಟಾಂಪ ಪೇಪರ ಹಗರಣ ಮತ್ತು ನಮ್ಮ ರಾಜಕೀಯ ವ್ಯವಸ್ಥೆ.

ಬರಹ

ಕರೀಂ ಲಾಲಾ ತೆಲಗಿ ಮಂಪರು ಪರೀಕ್ಷೆಯಲ್ಲಿ ಬಾಯಿ ಬಿಟ್ಟರೂ ಅದನ್ನು ಅಲ್ಲಗಳೆಯುತ್ತಿರುವ ನಮ್ಮ ಲಜ್ಜೆಗೆಟ್ಟ ರಾಜಕಾರಣಿಗಳಿಗೆ ಏನು ಹೇಳೋಣ. ಬುದ್ಧಿಜೀವಿಗಳೆನಿಸಿಕೊಂಡು ಸಣ್ಣ ಸಣ್ಣ ವಿಚಾರಕ್ಕೆ ಕಚ್ಚಾಡುವ ಇವರು ಈಗ ಜನಸಾಮಾನ್ಯ ನಿಗೆ ಇದರ ನಿಜ ಸ್ಥಿತಿಯ ಅರಿವು ಮೂಡುವಂತೆ ಬರೆಯುವದು ಅವಶ್ಯವಲ್ಲವೆ. ಇಲ್ಲದಿದ್ದರೆ ಸಾಮಾನ್ಯರು ಇದನ್ನು ರಾಜಕೀಯ ಪಿತೂರಿ ಎಂದು ತಿಳಿಯುವ ಅಪಾಯ ಇಲ್ಲವೆ? ಇಂತಹ ಸಮಯದಲ್ಲಿ ನಿವೃತ್ತ ಲಾಯರುಗಳು, ಜದ್ಜಗಳು ಈ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಿ ಸಾಮಾನ್ಯರಿಗೆ ತಿಳುವಳಿಕೆ ಮೂಡಿಸಿದರೆ ಆಗ ಮಾತ್ರ ನಮ್ಮ ರಾಜಕಾರಣಿಗಳು ಚುನಾವಣಾ ಸುಧಾರಣೆ ಯಂತಹ ವಿಚಾರದಲ್ಲಿ ತಲೆಕೆಡಿಸಿ ಕೊಳ್ಳೂತ್ತಾರಲ್ಲದೆ ಇಲ್ಲದಿದ್ದರೆ ಈಗ ನಡೆಯುತ್ತಿರುವಂತಹ ಚುನಾವಣಾ ನಾಟಕಗಳು ನಡೆಯುತ್ತಲೇ ಇರುತ್ತವೆ ಮತ್ತು ವಿದ್ಯಾವಂತರು ಹೆಚ್ಚು ಹೆಚ್ಚು ಅದರಲ್ಲಿ ಆಸಕ್ತಿ ಕಳೆದು ಕೊಳ್ಳುತ್ತಾರೆ.

ಯಾವ ರಾಜಕಾರಣಿಯೂ ಸಾಕ್ಷಸಿಗುವಂತೆ ಇಂತಹ ಕೆಲಸ ಮಾಡುವಷ್ಟು ಮೂರ್ಖನಲ್ಲ. ಆದ್ದರಿಂದ ಅಂತಹ ರಾಜಕಾರಣಿಗಳ ಅವರ ಸಂಬಂಧಿಕರ ಆಸ್ತಿ ವಿವರ ಸಂಗ್ರಹಿಸಿ ಅದನ್ನು ಅವರು ವಿವರಿಸುವದನ್ನು ಕೋರ್ಟು ಕಡ್ಡಾಯ ಮಾಡಬೇಕು ಮತ್ತು ನಮ್ಮ ರಾಜಕೀಯ ವ್ಯವಸ್ಥೆ ಇದನ್ನು ಸಮರ್ಥಿಸಬೇಕು. ಆಗ ಮಾತ್ರ ನಮ್ಮ ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ಉಳಿಯಲು ಸಾಧ್ಯ. ಇಲ್ಲದಿದ್ದರೆ ನೂರಾರು ಲಾಲುಪ್ರಸಾದರು ನಮ್ಮ ರಾಜ್ಯಗಳನ್ನು ದಶಕಗಳ ಕಾಲ ಆಳುತ್ತಲೇ ಇರುತ್ತಾರೆ.

ಅನಂತ ಪಂಡಿತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet