ಅಡುಗೆ ಮಾಡುವ ವಿಧಾನ - ಒಂದು ಚುಟುಕ
ಅಡುಗೆ ಮಾಡುವ ವಿಧಾನ (ರಾಶಿ ಅವರ ನಗೆಹನಿಯ ಸ್ಫೂರ್ತಿಯಿಂದ)
ಊರಿಗೆ ಹೋಗುವ ಮುನ್ನ ಹೇಳಿಕೊಡುತ್ತಿದ್ದಳು
ಹೆಂಡತಿ ತನ್ನ ಗಂಡನಿಗೆ ಅಡುಗೆ ಮಾಡಲು;
ಹೀಗೆ ಮಾಡಿ, ಇದು ಆಮೇಲೆ, ಅದು ಮೊದಲು...
ಅರ್ಧಕ್ಕೇ ತಡೆದು ಕೇಳಿದ ಗಂಡ ಅವಳನ್ನು,
ಅದೆಲ್ಲ ಬಿಡು, ಹೇಗೋ ಮಾಡಿಬಿಡಬಹುದು,
ಹೇಳು ಯಾವಾಗ ಹಾಕಬೇಕು ಕೂದಲು?!
Rating