ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಪುಣೆ ಭೇಟಿ
ಗೆಳೆಯರೆ,
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಮುಂಬೈ-ಪುಣೆ, ಪುಣೆ ನಗರದ ಕನ್ನಡಾಸಕ್ತರನ್ನು ಮುಖಾಮುಖಿಯಾಗಿಸುವ ಉದ್ದೇಶದಿಂದ, ಮೊಟ್ಟಮೊದಲ ಭೇಟಿಯನ್ನು ಬರುವ ಭಾನುವಾರ ಹಮ್ಮಿಕೊಂಡಿದೆ.
ಸ್ಥಳ: ಸಮುದಾಯ ಭವನ,
ಶ್ರೀ ರಾಘವೇಂದ್ರ ಸ್ವಾಮಿ ಮಠ,
ಬಿರ್ಲಾ ಆಸ್ಪತ್ರೆಯೆದುರು, ಚಿಂಚವಡ, ಪುಣೆ.
ಸಮಯ: ಬೆಳಗ್ಗೆ ೧೧.೦೦ ಘಂಟೆ.
ಕನ್ನಡ ಚಿಂತನೆಯನ್ನು ಕ್ರಿಯಾತ್ಮಕವಾಗಿ ಬೆಳೆಸುವ ನಿಟ್ಟಿನಲ್ಲಿ ಹೊರನಾಡಿನ ಕನ್ನಡಿಗರ ಬಹುಮುಖ್ಯ ಕೇಂದ್ರವಾದ ಪುಣೆಯಲ್ಲಿ ಕನ್ನಡ ಮನಸ್ಸುಗಳನ್ನು ಒಂದೆಡೆ ಸೇರುತ್ತಿರುವುದು ಸಂಭ್ರಮದ ವಿಷಯ.
ಈ ಮೂಲಕ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಗೆಳೆಯರುಗಳು ಪುಣೆಯಲ್ಲಿ ನೆಲೆಸಿರುವ ಎಲ್ಲಾ ಆಸಕ್ತ ಕನ್ನಡಿಗರನ್ನು ಹೃತ್ಪೂರ್ವಕವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇವೆ. ದಯಮಾಡಿ ಬನ್ನಿ.. ತಮ್ಮ ಸ್ನೇಹಿತರನ್ನೂ ಕರೆತನ್ನಿ..
ಮತ್ಯಾವುದೇ ಮಾಹಿತಿಗಾಗಿ, ಕೆಳಿಗಿನ ಗೆಳೆಯರನ್ನು ಸಂಪರ್ಕಿಸಬಹುದು:
ಚಿದಾನಂದ ಬಿ 9881465485, ನರಸಿಂಹ ದತ್ತ 9890094034, ರೋಹಿತ್ ಆರ್ 9372470905