ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಭಿನ್ನ ಚಿಂತನೆ

ಎಲ್ಲಿಂದಲೋ ಬಂದ ಈ ಚೇತನಕೆ ಆತ್ಮ ಎನಲೇ ಎಲ್ಲಿಂದಲೋ ಹುಟ್ಟಿ ಬಂದ ಈ ದೇಹಕೆ ನಾನು ಎನಲೇ ಜೀವನ ಎಂಬೋ ಈ ಬಸ್ಸಿನಲ್ಲಿ ಎಲ್ಲೋ ಹತ್ತಿದೆ ನಾನು ಹಾಲುಣಿಸಿ ಪಾಲಿಸಿದವಳ ಅಮ್ಮನೆಂದೆ ಅವಳು ತೋರಿದವನ ಅಪ್ಪ, ಅಕ್ಕ, ತಂಗಿ, ಅಣ್ಣ, ತಮ್ಮನೆಂದೆ ಅವಳು ಕಲಿಸಿದ ಮಾತನೇ ನಾ ನಂಬಿದೆ ಈ ಬಸ್ಸಿನಲಿ ಎಲ್ಲೋ ಹತ್ತಿ ಎಲ್ಲೋ ಇಳಿವ ಸಹ ಪ್ರಯಾಣಿಕರಿಂದ ಮಮತೆ ವಾತ್ಸಲ್ಯ ಪ್ರೇಮ ಪ್ರೀತಿ ಕರುಣೆ ಕ್ರೋಧ ಹಾಸ್ಯವ ಕಲಿತೆ

ಮುಂಬೈನ ಮಳೆಗಾಲ

ಮುಂಬಯಿಯ ಮಳೆಗೆ ಅದರದ್ದೇ ಆದ ಛಾಪಿದೆ. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುವುದು ಜೂನ್ ತಿಂಗಳ ಮೂರನೇ ವಾರದಲ್ಲಿ. ಈ ಮಳೆಗಾಲ ನವಂಬರ್ ತಿಂಗಳ ಮಧ್ಯ ಭಾಗದವರೆಗೂ ನಿರಂತರವಾಗಿರುವುದು. ಮೊದಲ ಮಳೆಯ ಮಣ್ಣಿನ ವಾಸನೆ ಕ್ಷಣಿಕ. ಮೊದಲ ದಿನವೇ ಧೋ ಎಂದು ದಿನಪೂರ್ತಿ ಸುರಿಯುವ ಮಳೆಯನ್ನು ಬೇರೆ ಇನ್ಯಾವ ನಗರದಲ್ಲಿ ಕಾಣುವುದು ಕಷ್ಟಾಸಾಧ್ಯ. ಆ ಮೊದಲ ದಿನ ಮಳೆಯ ನೀರು ಭೋರ್ಗ್ರಗೆಯುತ್ತಾ ಮೋರಿಗೆ ಹೋದಾಗ ಅಲ್ಲಿ ಇಲ್ಲಿ ಬಿದ್ದ ಕಸ, ಕಡ್ಡಿ, ಪ್ಲಾಸ್ಟೀಕು, ಗಲೀಜು ಇತ್ಯಾದಿಗಳು ಮೋರಿಗೆ ಅಡ್ಡವಾಗಿ ಎಲ್ಲೆಲ್ಲಿ ನೋಡಿದರೂ ನೀರು ನಿಲ್ಲುವುದು. ಒಂದು ಕಡೆ ನಿರಂತರವಾದ ಮಳೆ ಇನ್ನೊಂದೆಡೆ ನೀರಿನ ನಿಲ್ಲಾಟ. ಆಗ ಸಂಚಾರ ಸ್ತಬ್ಧವಾಗುವುದು. ಲೋಕಲ್ ಟ್ರೈನ್ ಹಳಿಗಳ ಮೇಲೆ ನೀರು ನಿಲ್ಲುವುದು. ತಗ್ಗಿನ ಪ್ರದೇಶಗಳಲ್ಲೆಲ್ಲಾ ನೀರು ತುಂಬಿ ತಗ್ಗು ಎಲ್ಲಿ ಎತ್ತರ ಎಲ್ಲಿ ಎಂಬುದ ತಿಳಿಯದೇ ಆಕಸ್ಮಿಕಗಳು ಸಂಭವಿಸುವುದು. ಇಂಥಹ ಸ್ಥಿತಿ ಪ್ರತಿವರ್ಷವೂ ಸಾಮಾನ್ಯ. ಮುಂಬಯಿ ಮಹಾನಗರಪಾಲಿಕೆಯವರು ಎಷ್ಟೇ ಎಚ್ಚರ ವಹಿಸಿದರೂ ಇದನ್ನು ತಪ್ಪಿಸಲಾಗದು.

ಮುಂಬೈ -೨

ಮುಂಬೈ ಡೈರಿ ಭಾಗ ೨ ಮೊದಲ ಭಾಗದಲ್ಲಿ ಮುಂಬಯಿ ಮತ್ತು ಕನ್ನಡಿಗರ ನಂಟಿನ ಬಗ್ಗೆ ಹೇಳಿದ್ದೆ. ನಂತರದ ಭಾಗದಲ್ಲಿ ಮುಂಬಯಿಯ ಮಳೆಗಾಲದ ಬಗ್ಗೆ ತಿಳಿಸಿದ್ದೆ. ಈಗ ಈ ಮುಂಬಯಿ ಮಹಾನಗರಿಯ ಪರಿಚಯ ಮಾಡಿಕೊಡಲು ಪ್ರಯತ್ನಿಸುವೆ. ಮುಂಬಯಿಯ ಚರಿತ್ರೆ ೧೬ನೇ ಶತಮಾನಕ್ಕೂ ಹಿಂದಿನದು. ೧೫೦೮ರಲ್ಲಿ ಫ್ರಾನ್ಸಿಸ್ ಆಲ್ಮೈಡ ಅನ್ನುವ ನಾವಿಕ ಈ ದ್ವೀಪಕ್ಕೆ ಬಂದದ್ದು. ಆಗ ಈ ಜಾಗಕ್ಕೆ ಬಾಮ್ ಬಹಿಯಾ (ಒಳ್ಳೆಯ ಬೇ ಅಥವಾ ಕೊಲ್ಲಿ) ಅಂದನಂತೆ. ಇಲ್ಲಿಯ ಮೂಲವಾಸಿಗಳಾದ ಬೆಸ್ತರರನ್ನು (ಮೀನುಗಾರರು) ಕೋಳಿಗಳು ಎಂದು ಕರೆಯುವರು. ಅವರುಗಳ ದೈವ ಮುಂಬಾದೇವಿ. ಮುಂದೆ ಇದೇ ಇಂಗ್ಲೀಷರ ಬಾಂಬೇ ಮತ್ತೆ ಮಹಾರಾಷ್ಟ್ರೀಯರ ಮುಂಬಾ ಆಯಿ (ಮುಂಬಾ ತಾಯಿ) - ಮುಂಬಯಿ ಆಯಿತು.

ಮುಂಬೈನ ಪರಿಚಯ

ಮುಂಬಯಿ ನಮ್ಮ ದೇಶದ ವಾಣಿಜ್ಯ ರಾಜಧಾನಿ. ಇದು ಮೊದಲು ಪ್ರತ್ಯೇಕ ಸಂಸ್ಥಾನವಾಗಿತ್ತು. ಆಗ ಗುಜರಾತಿನ ಕೆಲವು ಪ್ರದೇಶಗಳೂ ಇದರೊಡನೆ ಸೇರಿತ್ತು. ಆಗಿನ ಪ್ರಸಿದ್ಧ ಮುಖ್ಯಮಂತ್ರಿಗಳಾಗಿದ್ದವರಲ್ಲಿ ದಿವಂಗತ ಮೊರಾರ್ಜಿ ದೇಸಾಯಿಯವರೊಬ್ಬರು. ಮುಂಬಯಿಯ ಮತ್ತು ಕನ್ನಡಿಗರ ನಂಟು ತುಂಬಾ ಹಳೆಯದ್ದು. ಮುಂಬಯಿಗೆ ಮೊದಲು ಎಲ್ಲರೂ ಬಾಂಬೇ ಎಂದೇ ಕರೆಯುತ್ತಿದ್ದರು. ಆದರೆ ಕನ್ನಡದವರು ಮಾತ್ರವೇ ಮುಂಬಯಿ ಎಂದು ಕರೆಯುತ್ತಿದ್ದರು. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನ ಕೆಲಸ ಪ್ರಾರಂಭಿಸಿದವರು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಮುಂಬಯಿನ ಜನಸಂಖ್ಯೆ ೧.೨೦ ಕೋಟಿ ಮತ್ತು ಅದರಲ್ಲಿ ಕನ್ನಡಿಗರ ಪಾಲು ಶೇಕಡ ೧೦ ಅಂದ್ರೆ ೧೨ ಲಕ್ಷ. ಆದರೂ ಹೊರಗಡೆ ಕನ್ನಡ ಮಾತನಾಡೋದು ಕಡಿಮೆ. ಇದಕ್ಕೆ ಕಾರಣ ಈ ಮುಂದೆ ಹೇಳುತ್ತಿದ್ದೀನಿ.

ಮೆಂತ್ಯದ ಹಿಟ್ಟು

ಎಲ್ಲ ಬೇಳೆಗಳನ್ನು ಒಂದೊಂದಾಗಿ ಸಂಪಿಗೆ ಬಣ್ಣ ಬರುವಂತೆ ಹದವಾಗಿ ಸಣ್ಣ ಉರಿಯಲ್ಲಿ ಹುರಿಯುವುದು. ಅರಿಸಿನ ಪುಡಿ ಹಾಗೂ ಇಂಗನ್ನು ಸಣ್ಣ ಉರಿಯಲ್ಲಿ ಸೇರಿಸಿ ಹುರಿಯುವುದು. ಹುರಿದಿರುವುದನ್ನು ಎಲ್ಲ ಸೇರಿಸಿ ಮಿಕ್ಸರಿನಲ್ಲಿ ಪುಡಿ ಮಾಡಿಟ್ಟುಕೊಳ್ಳುವುದು. ಉಪಯೋಗಿಸುವ ಬಗೆ: * ಮೆಂತ್ಯದ ಹಿಟ್ಟಿನ ಗೊಜ್ಜು ಮಾಡಬಹುದು. * ಶಾವಿಗೆ ಬಾತ್, ಉಪ್ಪಿಟ್ಟಿಗೆ ಸೇರಿಸಿ ತಿನ್ನಬಹುದು * ಬಿಸಿಯಾದ ಅನ್ನಕ್ಕೆ ಸೇರಿಸಿ ಉಪ್ಪು ತುಪ್ಪ ಹಾಕಿ ತಿನ್ನಬಹುದು. (ಹಿರಿಯರು ಈ ಉಪಯೋಗ ವಿಧಾನವನ್ನು ಆರೋಗ್ಯವಾದುದೆಂದು ಹೇಳುತ್ತಾರೆ)

(ಬಹಳ ದಿನಗಳವರೆಗೆ ಇಡಬಹುದು - ಕೆಡುವುದಿಲ್ಲ)

90

ಕಾಳುಗಳನ್ನು ಸೇರಿಸಿ ಮಾಡಲಾಗುವ ಒಂದು ಸಾಂಪ್ರದಾಯಿಕ ಪುಡಿ (ಹಿಟ್ಟು). ಆರೋಗ್ಯಕ್ಕೆ ಉತ್ತಮವಾದದ್ದು.

ಕಡ್ಲೆಬೇಳೆ - ೧ ಕಪ್

ಮಂಕುತಿಮ್ಮನ ಕಗ್ಗ

ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ । ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।। ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು । ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

ಮಂಕುತಿಮ್ಮನ ಕಗ್ಗ

ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ । ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।। ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ । ಆತ್ಮಋಣವದು ಜಗಕೆ -- ಮಂಕುತಿಮ್ಮ ।।

ಮಂಕುತಿಮ್ಮನ ಕಗ್ಗ

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು । ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।। ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ । ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

ಮಂಕುತಿಮ್ಮನ ಕಗ್ಗ

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು -- ಮಂಕುತಿಮ್ಮ

ರಶ್ಮಿ 1-10

-------------------------------------- ಇರುವೆ ಇರುವೆ ಇರುವೆ ಇರುವೆ ಇರೂ ಇರುವೆ ನಾನು ನಿನ್ನ ಹಿ೦ದ್ ಬರ್‍ತೀನಿ. ಎಲ್ಲಿಗ್ ಹೋಗೀ ಏನ್ ಮಾಡ್ತಿ ಅ೦ತ ನಾನು ನೋಡ್ತಿನಿ. ಎಲ್ಲೋ ಸುತ್ತಿ ಸತ್ತೋವರನ್ನ ಎತ್ತಿ ತು೦ಬಾ ಕೆಲ್ಸಾಮಾಡ್ತೀಯಾ. ಎಲ್ಲೋ ಸತ್ತ ಜೀವಾನ್ ಎತ್ತಿ ಸಮಾಧಿಕೂಡ ಮಾಡ್ತೀಯ. ಬದುಕಿದ್ದ ಎನ್ನ ಕಚ್ಚಿ ಪ್ರಾಣ ಜೋರಾಗಿ ಹಿ೦ಡ್ತೀಯಾ.