ಪತಂಜಲಿಯ ಯೋಗ ಭಾಗ ೪
ಪತಂಜಲಿಯ ಯೋಗ
ನಾಲ್ಕನೆಯ ಲೇಖನ
ಮನಸ್ಸಿನಲ್ಲಿ ವೃತ್ತಿಗಳು ಏಳುವದನ್ನು ಕಡಿಮೆ ಮಾಡಲು ಅಭ್ಯಾಸ ಮಾಡುತ್ತಿದ್ದಾಗ ಅನೇಕ ತಡೆ-ಅಡಚಣೆಗಳು ಬರುತ್ತವೆ. ಅವು ಯಾವುವೆಂದರೆ
ವ್ಯಾಧಿ(ಕಾಹಿಲೆ), ಸ್ತ್ಯಾನ (ಸೋಮಾರಿತನ), ಸಂಶಯ (ನಂಬಿಕೆ ಇಲ್ಲದಿರುವುದು), ಪ್ರಮಾದ (ತಪ್ಪು), ಅವಿರತಿ (ದೇಹದ ಕಾಮನೆಗಳು), ಭ್ರಾಂತಿದರ್ಶನ (ಆಗದಿದ್ದನ್ನು ಆಯಿತೆಂದು ತಿಳಿಯುವುದು), ಅಲಭ್ದಭೂಮಿಕತ್ವ (ಮನಸ್ಸನ್ನು ಹರಿಬಿಡುವುದು;ಅನುಪಸ್ಥಿತಿ), ಅನವಸ್ಥಿತತ್ವ (ಒಂದು ಸ್ಥಿತಿ ಏರಿದ್ದನ್ನು ಉಳಿಸಿಕೊಳ್ಳದಿರುವುದು), ದುಃಖ , ದೌರ್ಮನಸ್ಯ (ಮನಸ್ಸಿನ ಪರಿತಾಪ), ಅಂಗಮೇಜಯತ್ವ (ದೇಹದ ಚಲನೆ),ಶ್ವಾಸಪ್ರಶ್ವಾಸ (ಅಸಮವಾದ ಉಸಿರಾಟ).
- Read more about ಪತಂಜಲಿಯ ಯೋಗ ಭಾಗ ೪
- Log in or register to post comments