ನಾನು, ನನ್ನ ಓದು ಮತ್ತು ಸಂಪದ .

ನಾನು, ನನ್ನ ಓದು ಮತ್ತು ಸಂಪದ .

ಕಳೆದ ಮೂರು ತಿಂಗಳಲ್ಲಿ ಸಂಪದ(www.sampada.net) ಕ್ಕೆ ನನ್ನ ಮೆಚ್ಚಿನ ಝೆನ್ ಕಥೆಗಳನ್ನು ಸೇರಿಸಿದ್ದಾಯಿತು , ಕೆಲವು ಒಳ್ಳೆಯ ಪುಸ್ತಕಗಳ ಬಗ್ಗೆ ವಿಮರ್ಶೆ ಎಂಬ ಹೆಸರಿನಲ್ಲಿ ಬರೆದಿದ್ದಾಯಿತು. ನಾನು ಪದ ಜೋಡಣೆ ಮಾಡಿದ ಒಂದೆರಡು ಕವನಗಳನ್ನು ಪ್ರಕಟಿಸಿದ್ದಾಯಿತು. 'ತಾರಕ್ಕ ಬಿಂದಿಗೆ' ಮಾದರಿಯಲ್ಲಿ ಬರೆದ 'ತೆರೆಯೋ ಬ್ರೌಸರ್ರು' ಹಾಡಿಗೆ ಮಜಾವಾಣಿಯ ಪ್ರತಿಕ್ರಿಯೆ ಹೊಟ್ಟೆ ಹುಣ್ಣಾಗಿಸುವಂತಿತ್ತು. ನನಗೆ ಬೇಡವಾದ ಪುಸ್ತಕಗಳ ವಿಲೇವಾರಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿತು. ಹೀಗಾಗಿ ನಾನೂ ಒಬ್ಬ ಸುದ್ದಿ ಜೀವಿ ಆದೆ!.

ಮುಂದೇನು? ನಾನು ಭಾರೀ ಓದಿನ ಮನುಷ್ಯ. ನನ್ನ ಓದಿಗೆ ನಲವತ್ತು ವರ್ಷಗಳಾಗಲಿವೆ . ಓದಿ ಓದಿ ಈಗೀಗ ಸಾಕು ಎನಿಸುತ್ತಿದೆ. ಆದರೆ ಅಭ್ಯಾಸಬಲ. ಚಟದ ಹಾಗೆ. ಬಿಡಿಸಿಕೊಳ್ಳುವದು ಕಠಿಣ. 'ಓದಬೇಡವೋ ಶ್ರ್‍ಇಕಾ' ಎಂಬ ಸ್ವಗತಕ್ಕೆ , ಓದನ್ನು ನಿಲ್ಲಿಸಬೇಡಿ ಎಂದು ಟಿ.ವಿ.ಶ್ರ್‍ಈನಿವಾಸರಿಂದ ಕೋರಿಕೆ ಬಂತು. ಇರಲಿ . ನೋಡೋಣ.

ಅಂದಂದಿನ ನನ್ನ ಓದಿನ ಬಗ್ಗೆ ನಿಯಮಿತವಾಗಿ ಬ್ಲಾಗ್ ಬರೆಯುತ್ತ ಹೋದರೆ ಹೇಗೆ? . ಬ್ಲಾಗ್ ಎಂದರೇನು ಸರಿಯಾಗಿ ಗೊತ್ತಿಲ್ಲ ; ಆದರೆ ಬೊಗಳಿ ಬೊಗಳಿ ಬ್ಲೋಗ ಎಂಬ ಮತನ್ನು ಎಲ್ಲೋ ಓದಿದ್ದೇನೆ!

Rating
No votes yet

Comments