ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ವ ಸಹಾಯ ಸಹಕಾರಿಗಳು ಮಾಡಿದ ಕ್ರಾಂತಿ

ಒಂದು ಸಹಕಾರಿ ಸಂಸ್ಥೆ ಗ್ರಾಮದಲ್ಲಿ ಮತ್ತು ಅಲ್ಲಿನ ಜನರಲ್ಲಿ ಏನೆಲ್ಲಾ ಬದಲಾವಣೆ ತರಬಹುದೆಂದು ಕರೀಂ ನಗರ ಜಿಲ್ಲೆಯ ಗಟ್ಲ ನರ್ಸಿಂಗಾಪುರಕ್ಕೆ ಹೋದರೆ ನಿಮಗೆ ಸ್ಪಷ್ಟವಾಗುತ್ತದೆ. ಇಲ್ಲಿನ ಪ್ರತಿಭಾ ಮಹಿಳಾ ಸ್ವಕೃಷಿ ಪೊದಪು ಪರಸ್ಪರ ಸಹಾಯಕ ಸಹಕಾರ ಪರಿಮಿತ ಸಂಘಂ ಇಲ್ಲಿನ ಜನರಲ್ಲಿ ಅಂತಹ ಬದಲಾವಣೆ ತಂದಿದೆ.

ಮೈಕ್ರೋ ಕ್ರೆಡಿಟ್ ನಿಂದ ಮೈಕ್ರೋ ಬ್ಯಾಂಕಿಂಗ್ ಕಡೆಗೆ

ಇತ್ತೀಚೆನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಸ್ವ ಸಹಾಯ ಗುಂಪುಗಳನ್ನು ಸಂಘಟಿಸಿ ಗ್ರಾಮೀಣ ಜನರನ್ನು ಅದರಲ್ಲೂ ಮಹಿಳೆಯರನ್ನು ಮೈಕ್ರೋ ಕ್ರೆಡಿಟ್ ಚಟುವಟಿಕೆಗಳಲ್ಲಿ ತೊಡಗಿಸುವ ಕೆಲಸವನ್ನು ವಿವಿಧ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿವೆ. ಈ ರೀತಿ ಸಂಘಟಿಸಲಾದ ಸ್ವ ಸಹಾಯ ಗುಂಪುಗಳ ಚಟುವಟಿಕೆಗಳನ್ನು ಇನ್ನೂ ಹೆಚ್ಚು ಬಲಗೊಳಿಸಲು ಹಾಗೂ ಸ್ವ ಸಹಾಯ ಗುಂಪುಗಳಲ್ಲಿ ತೊಡಗಿರುವ ಜನರಿಗೆ ಉಳಿತಾಯ ಹಾಗೂ ಸಾಲದ ವಿವಿಧ ಸೇವೆಗಳನ್ನು ನೀಡುವುದು ಇಂದಿನ ಅಗತ್ಯವಾಗಿದೆ. ಸ್ವ ಸಹಾಯ ಗಂಪುಗಳು ತಮ್ಮ ವಿಶಿಷ್ಟವಾದ ಅಸ್ತಿತ್ವವನ್ನು ಉಳಿಸಿಕೊಂಡು ಸದಸ್ಯರಿಗೆ ಹೆಚ್ಚಿನ ಉಳಿತಾಯದ ಮತ್ತು ವಿವಿಧ ಬಗೆಯ ಸಾಲದ ಸೇವೆಯ ಅಗತ್ಯವನ್ನು ಪೂರೈಸಲು ಅವುಗಳಿಗೆ ಸಾಂಸ್ಥಿಕ ರೂಪ ಕೊಡುವ ಅಗತ್ಯವಿದೆ.

ಯೋಗಿ??

ಯೋಗಿ??

ಎನ್ನ ಜನ್ಮಕ್ಕೆ ಕಾರಣರೆನ್ದು ಗೌರವವಿಲ್ಲ

ಎನ್ನ ನೀರೆರೆದು ಸಾಕಿ ಸಲಹಿದರೆಮ್ಬ ನನ್ನಿಯಿಲ್ಲ

ಹರಿಪ್ರಸಾದ ನಾಡಿಗರ ಹುಟ್ಟುಹಬ್ಬದ ದಿನ - ಶುಭಾಶಯದ ಉಡುಗೊರೆ

ನವಂಬರ್ ೧೮ನೇ ತಾರೀಖು - ಹರಿ ಪ್ರಸಾದ ನಾಡಿಗರ ಹುಟ್ಟು ಹಬ್ಬ
ಎಲ್ಲರೂ ಮರೆತಿದ್ದಾರೆ ಅಥವಾ ಯಾರಿಗೂ ಗೊತ್ತಿಲ್ಲ ಅನ್ಸತ್ತೆ.

signature ಹಾಕುವುದು ಹೇಗೆ?

ಕೆಲವರು ಎಲ್ಲಿ ಏನು ಬರೆದರು ಕೊನೆಗೆ ಒಂದೆರಡು lineಗಳು ಬರುತ್ತವಲ್ಲ... ಅದು ಹೇಗೆ set ಮಾಡೊದು? ಕೆಳಗಿರುವುದನ್ನು ನಾನು copy-paste ಮಾಡಿದ್ದಿನಿ, ಆದರೆ... ಈ ತರಹ: ---------------------------

ಕನ್ನಡ ರಣಧೀರರ ಕೆಲಸ ಬೆಳಗಾವಿಗೆ ಕುತ್ತು

ಬೆಳಗಾವಿಯ ಮೇಯರ್ ಶ್ರೀ ವಿಜಯ ಮೋರೆಯವರಿಗೆ ಬೆಂಗಳೂರಿನಲ್ಲಿ ಕನ್ನಡ ರಣಧೀರ ಪಡೆಯ ಕಾರ್ಯಕರ್ತರು ಮಸಿ ಬಳಿದು ಕನ್ನಡದ ರಕ್ಷಣೆಗೆ ಕನ್ನಡದ ನೆಲ, ಜಲದ ರಕ್ಷಣೆಗೆ ಭಾರೀ ಶೌರ್ಯದ ಕೆಲಸ ಮಾಡಿದರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂಪಾ ಕೊಂಡಾಡುತ್ತಿದ್ದಾರೆ.

ಮರಾಠಿಗರಿಗೆ ಜೀವ ತುಂಬಿದ ಕನ್ನಡ ರಣಧೀರ ಪಡೆ

ಬೆಳಗಾವಿಯ ಮೇಯರ್ ಶ್ರೀ ವಿಜಯ ಮೋರೆಯವರಿಗೆ ಬೆಂಗಳೂರಿನಲ್ಲಿ ಕನ್ನಡ ರಣಧೀರ ಪಡೆಯ ಕಾರ್ಯಕರ್ತರು ಮಸಿ ಬಳಿದು ಕನ್ನಡದ ರಕ್ಷಣೆಗೆ ಕನ್ನಡದ ನೆಲ, ಜಲದ ರಕ್ಷಣೆಗೆ ಭಾರೀ ಶೌರ್ಯದ ಕೆಲಸ ಮಾಡಿದರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂಪಾ ಕೊಂಡಾಡುತ್ತಿದ್ದಾರೆ. ಆದರೆ ಇತ್ತೀಚೆನ ದಿನಗಳಲ್ಲಿ ಬೆಳಗಾವಿಯಲ್ಲಿ ಮರಾಠಿಯ ವಾತಾವರಣ ಕಡಿಮೆ ಆಗುತ್ತಿದೆ. ಬೆಳಗಾವಿಯ ಮರಾಠಿ ಭಾಷಿಗರು ಕನ್ನಡಿಗರ ಜೊತೆಗೆ ಸೌಹಾರ್ದತೆಯಿಂದ ಬಾಳುವುದನ್ನು ರೂಢಿ ಮಾಡಿಕೊಂಡಿದ್ದಾರೆ.ಅದು ಅವರಿಗೆ ಅನಿವಾರ್ಯವೂ ಮತ್ತು ಅಗತ್ಯವೂ ಆಗಿದೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಕೂಗು ಸತ್ತು ಹೋಗಿದೆ. ಇದರಿಂದಾಗಿಯೇ ಭಾಷೆಯ ಆಧಾರದ ಮೇಲೆ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಒಂದೇ ಅಜೆಂಡಾದ ಮೇಲೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಎಂ.ಇ.ಎಸ್, ನೆಲ ಕಚ್ಚಿದೆ. ಇತ್ತೀಚೆನ ಕೆಲವು ವರ್ಷಗಳಲ್ಲಿ ಬೆಳಗಾವಿಯ ಮೇಯರ್ ಆಗಿ ಕನ್ನಡದ ಶ್ರೀ ಸಿದ್ದನಗೌಡ ಪಾಟೀಲರು ಕಾರ್ಯ ನಿರ್ವಹಿಸಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೆಳಗಾವಿ ನಗರ ಪಾಲಿಕೆ ಸಾಕಷ್ಟು ಬಾರಿ ನಿರ್ಣಯ ತೆಗೆದುಕೊಂಡಿದೆ. ಆನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ. ಅವರ ನಿರ್ಣಯಕ್ಕೆ ತುಂಬಾ ಪ್ರಚಾರ ಸಿಕ್ಕಿದ್ದು ಈ ಸಲವೇ ಇರಬೇಕು. ಇರಲಿ, ಅವರ ನಿರ್ಣಯದ ವಿರುದ್ಧ ಧರಣಿ, ಸತ್ಯಾಗ್ರಹ, ಮೆರವಣಿಗೆ, ಪ್ರತಿಕೃತಿ ದಹನ, ಬಂದ್ ಎಲ್ಲವೂ ಸರಿ. ಆದರೆ, ಮೇಯರ್ ಗೆ ಕಪ್ಪು ಮಸಿ ಬಳಿದು, ಅದರ ಮೂಲಕ ಪ್ರತಿಭಟನೆ ವ್ಯಕ್ತ ಪಡಿಸಿದ್ದು ಕನ್ನಡದ ಹೋರಾಟಕ್ಕೇ ಮಸಿ ಬಳಿದಂತೆ. ಇದರಿಂದ ಆಗಿದ್ದೇನು? ಬೆಳಗಾವಿಯ ನಮ್ಮ ಗೆಳೆಯರು ಹೇಳಿದ್ದು, "ಸತ್ತು ಹೋದ ಎಂ.ಇ.ಎಸ್ ಗೆ ಜೀವ ತುಂಬಿದರು". ಈ ಕುರಿತು ಚಂಪಾ ಆದಿ ಎಲ್ಲಾ ಸಾಹಿತಿ ವರೇಣ್ಯರು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ