ಹರಿಪ್ರಸಾದ ನಾಡಿಗರ ಹುಟ್ಟುಹಬ್ಬದ ದಿನ - ಶುಭಾಶಯದ ಉಡುಗೊರೆ

ಹರಿಪ್ರಸಾದ ನಾಡಿಗರ ಹುಟ್ಟುಹಬ್ಬದ ದಿನ - ಶುಭಾಶಯದ ಉಡುಗೊರೆ

ಬರಹ

ನವಂಬರ್ ೧೮ನೇ ತಾರೀಖು - ಹರಿ ಪ್ರಸಾದ ನಾಡಿಗರ ಹುಟ್ಟು ಹಬ್ಬ
ಎಲ್ಲರೂ ಮರೆತಿದ್ದಾರೆ ಅಥವಾ ಯಾರಿಗೂ ಗೊತ್ತಿಲ್ಲ ಅನ್ಸತ್ತೆ.
ಆಸಾಮಿ ಹರಿ ಹಾಗೇನೇ? ಹೆಚ್ಚಿನ ಪಬ್ಲಿಸಿಟಿ ಅವರಿಗೆ ಇಷ್ಟ ಇಲ್ಲ.
ಆದ್ರೂನೂ ಅವರು ಇಷ್ಟು ಚಿಕ್ಕ ವಯಸ್ಸಿಗೇ ಕನ್ನಡಕ್ಕಾಗಿ ಮಾಡುತ್ತಿರುವ ದೊಡ್ಡ ದೊಡ್ಡ ಕೆಲಸಗಳಿಗೆ ನಾವು ಅವರಿಗೆ ಮರ್ಯಾದೆ ಮಾಡ್ಲೇಬೇಕು. ಆ ದಿಕ್ಕಿನಲ್ಲಿ ನಾನೊಂದು ಉಡುಗೊರೆಯನ್ನು ಹರಿ ಪ್ರಸಾದರಿಗೆ ಕೊಡಲಿಚ್ಛಿಸುವೆ.
ನಾಡಿಗರ ಕುಟುಂಬದಿ ತೃತೀಯ ಕಂದನಾಗಮನ
ಹರಿವಾಯು ರಾಯರಾದಿ ಹೂಮಳೆಗರೆದ ಸುಸಮಯ
ದೇಶೀಯ ವಿದ್ಯಾಲಯದಿ ಹೆಸರು ಮಾಡಿದ ಕುವರ
ತಾಂತ್ರಿಕಾಲಯಕೆ ಹೆಗ್ಗಳಿಕೆ ತಂದ ಚತುರ
ವಿಶ್ವಕೆ ಕನ್ನಡ ಪರಿಚಯಿಸಲು ನಿರ್ಮಿಸಿದ ವಿಕಿಪೀಡಿಯ
ಪರಿವೇಶಣ ಸಂಪದಗಳಿಗೇ ಮೀಸಲಿವನ ಸಮಯ
ಸಾಥಿ ನೀಡುತಿಹರು ದಿಗ್ಗಜ ಓ ಎಲ್ ಎನ್
ಗಣಕ ಲೋಕದ ಮೇರುಗಿರಿ ಪವನಜ
ಶ್ರೀಗಂಧದ ಪರಿಮಳತೆರದಿ ಇವರ ಬೀಸಣಿಗೆಗಳು
ವಿಶ್ವದಲ್ಲೆಲ್ಲಾ ಪಸರಿಸಿಹ ಪರಿ ಪರಿ ಜನಗಳು
ವಿಶ್ವದ ಆಗು ಹೋಗಿನೊಳು ಮುಳುಗಿದ್ದರೂ ಕನ್ನಡಾಭಿಮಾನಿ
ಎಂದಿಗೂ ತಲೆ ಬಾಗದಿರುವ ಸ್ವಾಭಿಮಾನಿ
ಅಪ್ಪ ಅಮ್ಮರಿಗೆ ಮದುವೆ ಮಾಡುವ ಆತುರ
ಇವರಿಗೆ ಅಂತರ್ಜಾಲದಿ ಚಿರಂತನ ಹೆಸರು ಮಾಡುವ ಕಾತುರ
ಅಣ್ಣ ಅತ್ತಿಗೆಯರ ನೆಚ್ಚಿನ ಮೆಚ್ಚಿನ ಪುಟ್ಟಪ್ಪ
ಸುಧನ್ವಗೆ ಸರಿಸಾಟಿಯಾಗಿಹ ಚಿಕ್ಕಪ್ಪ
ಸ್ವತುತ್ತೂರಿ ಊದದೆ ತನಗೆ ತಾನೇ ಸೋಮಾರಿ ಎಂದರೂ
ಮಾಡಿದ ಕೆಲಸಗಳು ಬೆಟ್ಟದಷ್ಟು
ದಾಪುಗಾಲು ಹಾಕಿ ಮುಂದುವರೆಯುತ್ತಿರುವವರು
ಮುಟ್ಟಲು ಎತ್ತರದ ಮೇರುಗಿರಿಯ ಶೃಂಗ
ಇಂದಿನ ಈ ಶುಭಸಂದರ್ಭದಲಿ ನನ್ನ ಪ್ರಾರ್ಥನೆ ಆ ಸರ್ವಶಕ್ತನಲಿ
'ಇವರಿಗೆ ಸುಖ ದು:ಖಗಳನ್ನು ಸಮನಾಗಿ ಸ್ವೀಕರಿಸುವ ಶಕ್ತಿ ಕೊಟ್ಟು
ಅಂದುಕೊಂಡದ್ದೆಲ್ಲಾ ಹೂವು ಎತ್ತಿದಂತೆ ಸುಗಮವಾಗಲಿ
ಸಕಲ ಸಂಪತ್ತು ಆಯುರಾರೋಗ್ಯ ವಿಶ್ವಮಾನ್ಯತೆಯನ್ನು ಕೊಟ್ಟು
ವಿಶ್ವ ಮಾನವನನ್ನಾಗಿ ಮಾಡಲು ಆಶೀರ್ವದಿಸಲಿ'