ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೨೩೩) - ಮದ್ದು

ಮದ್ದು ಬೇಕಾಗಿದೆ ಆದರೆ ಆ‌‌‌ ಮದ್ದಿಗಾಗಿ ನಾನು‌ ಆಸ್ಪತ್ರೆ ಅಲೆಯೋದಿಲ್ಲ. ಅದಕ್ಕಾಗಿ ಖರ್ಚು ಮಾಡುವ ಸಮಯವೂ ನನ್ನಲ್ಲಿಲ್ಲ. ಆ ಮದ್ದಿಗೆ ದೊಡ್ಡ ದೊಡ್ಡ ಆಸ್ಪತ್ರೆ ಅಲೆದಾಡುವ ವ್ಯವದಾನವಿಲ್ಲ. ನನಗೆ ಮದ್ದು ‌ಬೇಕಾಗಿದೆ.

Image

ಶ್ರೀಶೈಲಕ್ಕೊಂದು ಪಯಣ…

ಉಳಿದ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ಹಾಗೂ ವಿಭಿನ್ನವಾಗಿ, ಸಂಸ್ಕೃತಿ, ಆಚಾರ ವಿಚಾರ ಇವುಗಳ ಬಗ್ಗೆ ಪುರಾಣಗಳು, ಧಾರ್ಮಿಕ ನಂಬಿಕೆಗಳ ಬಗ್ಗೆ ದಂತಕಥೆಗಳು ಹೀಗೆ ಇನ್ನೂ ಹಲವು ಅನನ್ಯವಾದ ವಿಷಯಗಳಿವೆ. ಅದರಲ್ಲೂ ಐತಿಹಾಸಿಕ ಪ್ರಿಯರಿಗೆ ಇಷ್ಟವಾಗುವಂತಹ ಕುತೂಹಲಕಾರಿ ವಿಷಯಗಳಿಗೆ ಕೊನೆ ಎಂಬುವುದಿಲ್ಲ.

Image

ಕಾಡುಕೋಳಿಯ ಜಾಡು ಹುಡುಕುತ್ತಾ...

ಮಾರ್ಚ್‌ ತಿಂಗಳು ಬಂತೆಂದರೆ ಪರೀಕ್ಷೆಗಳ ಕಾಲ. ಮಕ್ಕಳಿಗೆ ಪರೀಕ್ಷೆ ಪ್ರಾರಂಭವಾದರೆ ಶಾಲೆಯಲ್ಲಿ ಒಂಥರಾ ಮೌನ ಆವರಿಸಿಕೊಂಡು ಬಿಡುತ್ತದೆ. ಪರೀಕ್ಷೆಯ ಪತ್ರಿಕೆ ಕೊಟ್ಟು ಸ್ವಲ್ಪ ಹೊತ್ತಿನವರೆಗಂತೂ ಒಬ್ಬರದ್ದೂ ಸದ್ದಿಲ್ಲ. ಹೀಗೆ ತರಗತಿಯಲ್ಲಿ ಪರೀಕ್ಷೆ ನಡೆಯುವಾಗ ಇರುತ್ತಿದ್ದ ಮೌನದಲ್ಲಿ ಯಾವುದೋ ಹಕ್ಕಿ ಕೂಗಿದ ಶಬ್ದ ಕೇಳುತ್ತಿತ್ತು.

Image

ನೇಂದ್ರ ಬಾಳೆಹಣ್ಣಿನ ಸಾಸಿವೆ

Image

ಬಾಳೆಹಣ್ಣನ್ನು ಹೆಚ್ಚಿ ಅದಕ್ಕೆ ಸ್ವಲ್ಪ ನೀರು, ಚೂರು ಉಪ್ಪು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಸಾಸಿವೆ, ಒಣ ಮೆಣಸು ರುಬ್ಬಿ ಹಾಕಿ. ಮೊಸರು ಸೇರಿಸಿ. ಉಪ್ಪು ಬೇಕಿದ್ದರೆ ಹಾಕಿ. ಕರಿಬೇವಿನ ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಿರಿ.

ಬೇಕಿರುವ ಸಾಮಗ್ರಿ

ನೇಂದ್ರ ಬಾಳೆಹಣ್ಣು ೨, ಒಣ ಮೆಣಸು ೧, ತೆಂಗಿನ ತುರಿ ೧/೨ ಕಪ್, ಸಾಸಿವೆ ೧ ಚಮಚ, ಮೊಸರು ೧/೨ ಕಪ್, ಒಣ ಮೆಣಸು ೧, ಉಪ್ಪು ರುಚಿಗೆ.

ಪರ್ಷಿಯನ್ ಕಥೆ - ಸಿಂಹದ ಹಚ್ಚೆ

ಮಧ್ಯ ಪರ್ಷಿಯಾ ದೇಶದಲ್ಲಿ ಖಾಝ್ವಿನ್ ಎಂಬ ಹೆಸರಿನ ಒಂದು ಪಟ್ಟಣವಿದೆ. ಅಲ್ಲಿ ಕುಸ್ತಿ ಪಟುಗಳಿಗೆ ಹಚ್ಚೆ ಹಾಕಿಸಿಕೊಳ್ಳುವುದು ಕಡ್ಡಾಯ. ಒಂದು ದಿನ ಒಬ್ಬ ಮನುಷ್ಯ, ಖಾಝ್ವಿನ್ ನ ಸಾರ್ವಜನಿಕ ಸ್ನಾನ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬನ ಬಳಿಗೆ ಬಂದು ‘ತನಗೆ ಹಚ್ಚೆ ಹಾಕಿಸಿಕೊಳ್ಳಬೇಕಾಗಿದೆ’ ಎಂದ.

Image

ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?

ಪುಸ್ತಕದ ಲೇಖಕ/ಕವಿಯ ಹೆಸರು
ದೀಕ್ಷಿತ್ ನಾಯರ್
ಪ್ರಕಾಶಕರು
ಕನಸುಗಳು ಇನ್ಫಿನಿಟಿ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೨೫.೦೦, ಮುದ್ರಣ: ೨೦೨೫

‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ವಾರೆನೋಟ ಎನ್ನುವ ಅಂಕಣ ಬರೆಯುತ್ತಿದ್ದ ದೀಕ್ಷಿತ್ ನಾಯರ್ ಎನ್ನುವ ಚಿಗುರು ಮೀಸೆಯ ಹುಡುಗನ ಸಾಧನೆ ದೊಡ್ದದು. ಬರೆದ ಬರಹಗಳನ್ನು ಒಟ್ಟುಗೂಡಿಸಿ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಬೆನ್ನುಡಿ ಬರೆದು ಹುದಿದುಂಬಿಸಿದ್ದಾರೆ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕಿ ಭಾವನಾ ಬೆಳಗೆರೆ.

ಪ್ರೀತಿಯಿಂದ ಪ್ರೀತಿಗಾಗಿ…

ಪ್ರೀತಿಯ ಭಾವದ ಆಳ ಅಗಲ, ಫೆಬ್ರವರಿ 14 - valentines day. ಪ್ರೇಮಿಗಳ ದಿನ. ಹಾಗೆಯೇ ಅದು ಪೋಷಕರ ತಳಮಳದ ದಿನವೂ ಹೌದು, ತಂದೆ ತಾಯಿಗಳ ಪಶ್ಚಾತ್ತಾಪದ ದಿನವೂ ಹೌದು. ಆದರೆ ಇಲ್ಲಿ ಪ್ರೇಮಿಗಳ ಮನಃ ಪರಿವರ್ತನೆಯ ಕ್ಷಣವೂ, ಪೋಷಕರ ಕ್ಷಮಾ ದಿನವೂ ಒಟ್ಟಿಗೆ ನಡೆಯುವ ಸಾಧ್ಯತೆಯ ಒಂದು ಅಂತರಾಳದ ಪತ್ರ.

Image

ಸ್ಟೇಟಸ್ ಕತೆಗಳು (ಭಾಗ ೧೨೩೨) - ಕುಡಿತ

ಮನೆ ಗಟ್ಟಿಯಾಗುತ್ತಿಲ್ಲ. ಮನಸ್ಸುಗಳು ಒಡೆದು ಹೋಗುತ್ತಿವೆ, ಕನಸುಗಳೆಲ್ಲವೂ ಹಾಗೆ ಉಳಿದುಕೊಂಡು ಬಿಟ್ಟಿದೆ. ಮನೆಗೊಂದು ಆಧಾರ ಸ್ಥಂಬವಾಗಿದ್ದವರು ಮನೆಯೊಳಗೆ ಸರಿಯಾಗಿ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಕೆಲಸ ಮುಗಿಸಿ ಮನೆಯ ಕಡೆಗೆ ಹೆಜ್ಜೆಯನ್ನಿಡುತ್ತಿಲ್ಲ. ಸಾರಾಯಿ ಅಂಗಡಿ ಮುಂದೆ ನಿಂತು ಆ ದಿನದ ದುಡಿಮೆಯನ್ನೆಲ್ಲ ಅಲ್ಲೇ ಸುರಿದು ಬರಿಗೈಯಲ್ಲಿ ಮನೆಗೆ ಮರುಳುತ್ತಿದ್ದಾರೆ.

Image