ನೇಂದ್ರ ಬಾಳೆಹಣ್ಣಿನ ಸಾಸಿವೆ
ಬೇಕಿರುವ ಸಾಮಗ್ರಿ
ನೇಂದ್ರ ಬಾಳೆಹಣ್ಣು ೨, ಒಣ ಮೆಣಸು ೧, ತೆಂಗಿನ ತುರಿ ೧/೨ ಕಪ್, ಸಾಸಿವೆ ೧ ಚಮಚ, ಮೊಸರು ೧/೨ ಕಪ್, ಒಣ ಮೆಣಸು ೧, ಉಪ್ಪು ರುಚಿಗೆ.
ತಯಾರಿಸುವ ವಿಧಾನ
ಬಾಳೆಹಣ್ಣನ್ನು ಹೆಚ್ಚಿ ಅದಕ್ಕೆ ಸ್ವಲ್ಪ ನೀರು, ಚೂರು ಉಪ್ಪು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಸಾಸಿವೆ, ಒಣ ಮೆಣಸು ರುಬ್ಬಿ ಹಾಕಿ. ಮೊಸರು ಸೇರಿಸಿ. ಉಪ್ಪು ಬೇಕಿದ್ದರೆ ಹಾಕಿ. ಕರಿಬೇವಿನ ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಿರಿ.
- ಸಹನಾ ಕಾಂತಬೈಲು, ಮಡಿಕೇರಿ