ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬ್ರೆಡ್ ದೋಸೆ

Image

ಬ್ರೆಡ್ ಹಾಳೆಗಳ ಬದಿಯನ್ನು ಕತ್ತರಿಸಿ ತೆಗೆದು ಬದಿಗಿಡಿ. ಬಿಳಿ ಭಾಗದ ಮೇಲೆ ಅರ್ಧ ಕಪ್ ನೀರು ಚಿಮುಕಿಸಿ ಬದಿಗಿಡಿ. ರವೆ, ಮೊಸರು, ಶುಂಠಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಅಕ್ಕಿಹಿಟ್ಟು ಸೇರಿಸಿ ರುಬ್ಬಿ. ಬಳಿಕ ಅದಕ್ಕೆ ನೆನೆದ ಬ್ರೆಡ್ ಹಾಳೆಗಳು ಮತ್ತು ಉಳಿದ ನೀರು ಸೇರಿಸಿ ರುಬ್ಬಿ. ಉಪ್ಪು ಹಾಕಿ. ಹದ ಬಿಸಿಯಾದ ದೋಸೆ ಕಾವಲಿಯ ಮೇಲೆ ದೋಸೆ ಮಾಡಿರಿ.

ಬೇಕಿರುವ ಸಾಮಗ್ರಿ

ಬಿಳಿ ಬ್ರೆಡ್ ಹಾಳೆಗಳು (ಸ್ಲೈಸ್) ೧೦, ಬಾಂಬೆ ರವಾ ಅರ್ಧ ಕಪ್, ಮೊಸರು ೪ ಚಮಚ, ಅಕ್ಕಿ ಹಿಟ್ಟು ೨ ಚಮಚ, ತುರಿದ ಶುಂಠಿ ೨ ಚಮಚ, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ ೪-೫, ಕರಿಬೇವು ಸೊಪ್ಪು ೮-೧೦ ಎಸಳು, ಎಣ್ಣೆ ೬ ಚಮಚ, ನೀರು ಒಂದೂವರೆ ಕಪ್, ರುಚಿಗೆ ತಕ್ಕಷ್ಟು ಉಪ್ಪು.

ಸ್ಟೇಟಸ್ ಕತೆಗಳು (ಭಾಗ ೧೨೩೬) - ಮರವಾಗಬೇಕು

ನಮ್ಮ ಮನೆಯ ಮುಂದೆ ಬೆಳೆದ ಮರಕ್ಕೆ ಅದರ ನಾಳಿನ ಬಗ್ಗೆ ಏನೂ ಯೋಚನೆಯಿರಲಿಲ್ಲ. ಸಣ್ಣ ಬೀಜವನ್ನು ನೆಲದೊಳಗೆ ಇಟ್ಟಾಗ ತನಗೆ ಸಿಕ್ಕ ನೀರು, ಗಾಳಿಯನ್ನು ಪಡೆದುಕೊಂಡು ಬೇರುಗಳನ್ನು ಬಿಡುವುದಕ್ಕೆ ಆರಂಭ ಮಾಡಿತು. ಅದರೊಳಗೆ ಚಿಗುರು ಮೂಡಿತು. ಹಾಗೆ ಅನಂತವಾದ ಆಕಾಶವನ್ನು ನೋಡುತ್ತಾ ಸೂರ್ಯನ ಬೆಳಕನ್ನು ತನಗೆ ಬೇಕಾದ ಹಾಗೆ ಪಡೆದುಕೊಳ್ಳುತ್ತಾ ನೆಲದಿಂದ ಮೇಲೆ ಎದ್ದು ನಿಲ್ಲಲು ಪ್ರಾರಂಭ ಮಾಡಿತು.

Image

ಸಂಪರ್ಕ ಸ್ನೇಹಿತ ರೇಡಿಯೋ ಅಲೆಗಳು

ಸಂಶೋಧನೆಗಳು ಹೇಗೆ ಘಟಿಸುತ್ತವೆ ಎಂಬುದೇ ಕೌತುಕ. ಅನೇಕ ಬಾರಿ ಅವಶ್ಯಕತೆಗಳು ಅನ್ವೇಷಣೆಗೆ ಅನಿವಾರ್ಯವಾಗುತ್ತವೆ. ಅಮೋನಿಯಂ ತಯಾರಿಕೆಯನ್ನು ಹೇಬರ್ ಕಂಡುಹಿಡಿಯಲು ಅದೇ ಕಾರಣ. ಇನ್ನೊಮ್ಮೆ ಕುತೂಹಲಗಳೇ ಅನ್ವೇಷಣೆಗೆ ಕಾರಣವಾಗುತ್ತವೆ. ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್ ವೆಲ್ ವಿದ್ಯುತ್ಕಾಂತೀಯ ಅಲೆಗಳ ಸಿದ್ಧಾಂತವನ್ನು ಮಂಡಿಸಿ ಚಾಲ್ತಿಗೆ ಬಂದ.

Image

ಮಣ್ಣಿಗೆ ಸಾವಯವ ಅಂಶದ ಅವಶ್ಯಕತೆ

ಕ್ಕಷಿ ಯೋಗ್ಯ ಮಣ್ಣು ಎಂದರೆ ಅದು ಸಾವಯವ ವಸ್ತುಗಳ ಸೇರಿಕೆಯಿಂದ ಉಂಟಾದ ಮಣ್ಣು. ಎಲ್ಲಾ ಮಣ್ಣಿನಲ್ಲೂ  ಸಾವಯವ ಅಂಶ ಇರುವುದಿಲ್ಲ. ನೆಲದ ಆಡಿ ಭಾಗದ ಜೇಡಿ( ಶೇಡಿ) ಮಣ್ಣಿನಲ್ಲಿ ಯಾವುದೇ ಸಾವಯವ ಅಂಶ ಇಲ್ಲದ ಕಾರಣ ಅದು ಕೃಷಿ ಬಳಕೆಗೆ ಯೋಗ್ಯವಾಗಿರುವುದಿಲ್ಲ.

Image

ಸೂರ್ಯೋದಯ

ಪುಸ್ತಕದ ಲೇಖಕ/ಕವಿಯ ಹೆಸರು
ರತ್ನಾ ಕೆ ಭಟ್ ತಲಂಜೇರಿ
ಪ್ರಕಾಶಕರು
ಕಥಾಬಿಂದು, ಕುಂಜತ್ತ್ ಬೈಲ್, ಮಂಗಳೂರು-೫೭೫೦೧೫, ಮೊ: ೯೩೪೧೪೧೦೧೫೩
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಸೂರ್ಯೋದಯ’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ಸುವಿಚಾರಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು ಮಾಡಿದ್ದಾರೆ. ಕೆಲವೇ ಕೆಲವು ವಾಕ್ಯಗಳಲ್ಲಿ ನಮಗೆ ಜೀವನ ಮೌಲ್ಯಗಳನ್ನು ಕಲಿಸಬಲ್ಲ ಶಕ್ತಿ ಈ ಸುವಿಚಾರಗಳಿಗಿವೆ.

ವಾಸ್ತವ ಬದುಕು ಮತ್ತು ಚಿಂತನೆ

ಕಷ್ಟಪಟ್ಟು ದುಡಿದ ದುಡ್ಡಿನಲ್ಲಿ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಒಳ್ಳೆಯ ರೀತಿಯಲ್ಲಿ ಸಂಪಾದನೆ ಮಾಡಿದ, ಪ್ರಾಮಾಣಿಕ ಹಣ ಯಾವುದಕ್ಕೂ ಸಾಲುತ್ತಿಲ್ಲ. ಹೀಗೊಂದು ವಾಸ್ತವ ಬದುಕು ಮತ್ತು ಚಿಂತನೆ ಹಲವರ ಗೊಣಗಾಟಕ್ಕೆ ಕಾರಣವಾಗಿದೆ.

Image

ಪುಸ್ತಕ ನಿಧಿ: ನಿರಂಜನರ 'ಮೃತ್ಯುಂಜಯ' ಕಾದಂಬರಿ

ಇದು ಸುಮಾರು 650 ಪುಟಗಳ ಕಾದಂಬರಿ. archive.org ತಾಣದಲ್ಲಿ ಇದೆ. https://archive.org/details/unset0000unse_b4c3 ಈ ಕೊಂಡಿಯನ್ನು ಕ್ಲಿಕ್ಕಿಸಿ ಇಳಿಸಿಕೊಳ್ಳಬಹುದು ಮತ್ತು ಓದಬಹುದು. ಅವರು ಜ್ಞಾನಗಂಗೋತ್ರಿ ಸಂಪುಟಗಳ ತಯಾರಿಯಲ್ಲಿದ್ದಾಗ. ಒಂದು ವಾಕ್ಯ ಅವರ ಕುತೂಹಲವನ್ನು ಕೆರಳಿಸಿತ್ತು : “ A Greek tradition reports a great revolt in Egypt in which the slaves captured a province....” ಆಗ ಒಂದು ವರ್ಷ ಆಫ್ರಿಕಾದ ನೈಲ್ ಸಂಸ್ಕೃತಿಯ ಕುರಿತು ಅಧ್ಯಯನ ಮಾಡಿ ಈ ಕಾದಂಬರಿ ಬರೆದರಂತೆ.

ಸ್ಟೇಟಸ್ ಕತೆಗಳು (ಭಾಗ ೧೨೩೫) - ಬದಲಾಗಬೇಕು

ನೀನ್ಯಾಕೆ ನನ್ನ ಮುಂದೆ ಬಂದು ನಿಂತಿದ್ದೀಯಾ? ಪ್ರತಿದಿನವೂ ನಾನು ನಿನಗೆ ಹೂವನ್ನ ನೀಡಬೇಕು? ನೀನು ಅದನ್ನು ತೆಗೆದುಕೊಂಡು ಹೋಗಿ ನಿನಗೆ ಬೇಕಾದಲ್ಲಿ ಅಲಂಕಾರವನ್ನು ಮಾಡಬೇಕು. ಅದರಿಂದ ನೀನು ಸಂಭ್ರಮ ಪಡಬೇಕು. ಒಂದು ದಿನವೂ ನೀನು ನೀರು ಹಾಕುವ ಯೋಚನೆಯನ್ನು ಮಾಡ್ಲಿಲ್ಲ. ನನ್ನ ಕಷ್ಟವನ್ನು ಕೇಳಿಲ್ಲ. ನನ್ನ ತೊಂದರೆಗೆ ಪರಿಹಾರ ಸೂಚಿಸಿಲ್ಲ.

Image

ಪ್ಯಾಶನ್ ಫ್ರುಟ್ ಜ್ಯೂಸ್

Image

ಫ್ಯಾಶನ್ ಫ್ರುಟ್‌ನ ರಸ ತೆಗೆದು ನೀರು, ಸಕ್ಕರೆ ಸೇರಿಸಿ ಕದಡಿ. ಕಾಳುಮೆಣಸಿನ ಪುಡಿ, ಏಲಕ್ಕಿ ಪುಡಿ, ಶುಂಠಿ ರಸ ಸೇರಿಸಿ ಕುಡಿಯಿರಿ. ಪ್ಯಾಶನ್ ಫ್ರುಟ್ `ಎ' ಮತ್ತು `ಸಿ' ಜೀವಸತ್ವ ಹೊಂದಿದೆ.

ಬೇಕಿರುವ ಸಾಮಗ್ರಿ

ಪ್ಯಾಶನ್ ಫ್ರುಟ್ ೧, ನೀರು ೨ ಕಪ್, ಸಕ್ಕರೆ ೪ ಚಮಚ, ಏಲಕ್ಕಿ ಪುಡಿ- ಕಾಳುಮೆಣಸಿನ ಪುಡಿ- ಶುಂಠಿ ರಸ ಸ್ವಲ್ಪ.