ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾವಿನಹಣ್ಣು ರಸಾಯನ

Image

ಪಾತ್ರೆಗೆ ಹೆಚ್ಚಿದ ಮಾವಿನಹಣ್ಣು, ಬೆಲ್ಲದ ಪುಡಿ, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ ದಪ್ಪ ತೆಂಗಿನಹಾಲು ಹಾಗೂ ಚಿಟಿಕೆ ಉಪ್ಪು ಸೇರಿಸಿ. ಕೊನೆಗೆ ಎಳ್ಳು ಹುರಿದು ಹಾಕಿ. ಈಗ ರುಚಿಯಾದ ಮಾವಿನಹಣ್ಣಿನ ರಸಾಯನ ರೆಡಿ. ಇದನ್ನು ಹಾಗೆಯೇ ಕುಡಿಯಬಹುದು.

ಬೇಕಿರುವ ಸಾಮಗ್ರಿ

ಸಣ್ಣಗೆ ಹೆಚ್ಚಿದ ಮಾವಿನ ಹಣ್ಣಿನ ಹೋಳುಗಳು ೨ ಕಪ್, ಬೆಲ್ಲದ ಪುಡಿ ೬ ಚಮಚ, ಸಕ್ಕರೆ ೬ ಚಮಚ, ತೆಂಗಿನ ಹಾಲು ೨ ಕಪ್, ಎಳ್ಳು ೨ ಚಮಚ.

ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 2)

’ಗಡಕರಿ ಮಾಸ್ತರ’ರು ಎಂದೇ ಜನಪ್ರಿಯರಾಗಿದ್ದ ’ಕಿರ್ಲೋಸ್ಕರ್‌ ನಾಟಕ ಕಂಪೆನಿ’ಯಲ್ಲಿ ಕಲಾವಿದರಿಗೆ ಮರಾಠೀ ಪಾಠ ಕಲಿಸುತ್ತಿದ್ದರು. ಗಡಕರಿಯವರನ್ನು ಕುರಿತು ಸುಮತೀಂದ್ರ ನಾಡಿಗರು `ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’ (1989) ಕೃತಿಯಲ್ಲಿ 1885 ರಲ್ಲಿ ಹುಟ್ಟಿದ ಗೋವಿಂದಾಗ್ರಜರು (ರಾಮಗಣೇಶ ಗಡಕರಿ) ಪೂನಾದ ಫರ್ಗೂಸನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದರು, ಅವರು ಪ್ರಸಿದ್ಧ ನಾಟಕಕಾರರೂ ಆಗಿದ್ದರು.

Image

ಜಿಬಿಎಸ್ ಎಂಬ ಅಪರೂಪದ ಕಾಯಿಲೆ

ಹಲವು ದಶಕಗಳ ಹಿಂದೆ ಸಿಡುಬು, ಕಾಲರಾ, ಮಲೇರಿಯಾ, ಪೋಲಿಯೋ, ಕ್ಷಯ ಹೀಗೆಲ್ಲಾ ಭೀಕರವಾದ ಕಾಯಿಲೆಗಳನ್ನು ಮಾನವನನ್ನು ಕಾಡುತ್ತಿದ್ದವು. ನಂತರ ಹೆಚ್ ಐ ವಿ, ಡೆಂಗ್ಯೂ, ಹಕ್ಕಿ ಜ್ವರ, ಹಂದಿ ಜ್ವರ, ಮಂಗನ ಕಾಯಿಲೆ, ಚಿಕುನ್ ಗುನ್ಯಾದಂತಹ ಕಾಯಿಲೆಗಳು ಕಾಡತೊಡಗಿದವು. ನಂತರ ಬಂತು ಪ್ರಪಂಚವನ್ನೇ ಸ್ಥಬ್ಧಗೊಳಿಸಿದ ಕೊರೋನಾ ಎಂಬ ಮಹಾಮಾರಿ. ಅದರಲ್ಲೂ ಅನೇಕ ಬಗೆಯ ವಿಧಗಳು ಕಾಣಿಸತೊಡಗಿದವು.

Image

ಐತಿಹಾಸಿಕ ತೀರ್ಪು

ಅಖಿಲ ಭಾರತ ನಾಗರಿಕ ಸೇವಾ (ಸಿವಿಲ್ ಸರ್ವಿಸ್) ಹುದ್ದೆಗಳ ಪರೀಕ್ಷೆಗಳಲ್ಲಿ ಇತರ ಮೀಸಲು ಅಭ್ಯರ್ಥಿಗಳಿಗೆ ನೀಡಲಾಗಿರುವ ಸೌಲಭ್ಯಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ (ಎಕನಾಮಿಕಲಿ ವೀಕರ್ ಸೆಕ್ಷನ್ -ಇಡಬ್ಲ್ಯುಎಸ್) ಅಭ್ಯರ್ಥಿಗಳಿಗೂ ನೀಡಬೇಕು ಎಂಬ ಬಹುದಿನಗಳ ಬೇಡಿಕೆಗೆ ಕೊನೆಗೂ ಫಲ ದೊರೆತಿದೆ.

Image

ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಯ ದಿವಾಳಿತನ

ಕನ್ನಡ ಚಲನಚಿತ್ರ ನಟರೊಬ್ಬರ ಸಾಂಪ್ರದಾಯಿಕ ಮದುವೆಯನ್ನು ಅತ್ಯಂತ ಮಹತ್ವದ ಘಟನೆ ಎಂಬಂತೆ ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಸಾರ ಮಾಡಿದ್ದು ಅತಿರೇಕವೇ ಅಥವಾ ತಮ್ಮ ವಿವೇಚನಾಶೀಲತೆಯ ಕೊರತೆಯೇ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವೇ ಅಥವಾ ಸ್ವಾಭಿಮಾನದ ಮತ್ತು ಸುದ್ದಿಯ ಪ್ರಾಮುಖ್ಯತೆ ಅರಿಯುವ ಮಾನಸಿಕ ದಿವಾಳಿತನವೇ?

Image

ಸ್ಟೇಟಸ್ ಕತೆಗಳು (ಭಾಗ ೧೨೩೮) - ವಿಪರ್ಯಾಸ

ದಾರಿಯಲ್ಲಿ ಹೋಗುತ್ತಾ ಇದ್ದ ಮಧ್ಯ ವಯಸ್ಸಿನ ಹುಡುಗ ತನ್ನ ತಂದೆಯನ್ನು ಗದರಿಸುತ್ತಿದ್ದ. ಅಪ್ಪಾ ನಿನಗೆ ಅರ್ಥವಾಗುವುದಿಲ್ಲ. ನನ್ನ ಜೊತೆ ಬರಬೇಡ ಅಂತ ಎಷ್ಟು ಸಾರಿ ಹೇಳಿದರು ನನ್ನ ಕೈ ಹಿಡಿದುಕೊಂಡೆ ಬರುತ್ತಿಯಾ. ನನಗೆ ಇನ್ನು ನೀನು ಜೀವನದ ಪಾಠ ಮಾಡಬೇಕಾಗಿಲ್ಲ. ನಾನು ಎಲ್ಲವನ್ನು ಅರ್ಥೈಸಿಕೊಂಡಿದ್ದೇನೆ. ನಿನಗೆ ಯಾವ ಕ್ಷಣದಲ್ಲಿ ಹೇಗೆ ವರ್ತಿಸಬೇಕು ಅನ್ನೋದು ತಿಳಿಯೋದಿಲ್ಲ.

Image

ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 1)

ತಮ್ಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯದ ಓದುಗರ ಪ್ರೀತಿ-ಮನ್ನಣೆಗೆ ಪಾತ್ರರಾಗಿರುವ ಕೋಟ ಶಿವರಾಮ ಕಾರಂತರು ಪ್ರಕಟಿಸಿದ ಒಟ್ಟು ಪುಸ್ತಕಗಳ ಸಂಖ್ಯೆ 400 ದಾಟುತ್ತದೆ. 45 ಕಾದಂಬರಿ ಪ್ರಕಟಿಸಿದ್ದ ಕಾರಂತರು 90ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದರು. ‘ಬಾಲಪ್ರಪಂಚ’ ಮತ್ತು ‘ವಿಜ್ಞಾನ ಪ್ರಪಂಚ’ದಂತಹ ವಿಶ್ವಕೋಶಗಳನ್ನು ಸಿದ್ಧಪಡಿಸಿದ ಕಾರಂತರು ಸ್ವತಃ ‘ನಡೆದಾಡುವ ವಿಶ್ವವಿದ್ಯಾಲಯ’ದಂತಿದ್ದರು.

Image

ನಿಷ್ಪಾಪಿ ಸಸ್ಯಗಳು (ಭಾಗ ೮೮) - ಕಾಡು ಉತ್ತರಾಣಿ

ಇಂದು ನಾನು ನಿಮ್ಮ ಬಳಿಗೆ ಬರುವಾಗ ದಾರಿಯಲ್ಲಿ ಸಿಕ್ಕಿದ ಗಿಡಗಳ ಹಿಂಡಿನಿಂದ ಒಂದು ಗಿಡವನ್ನು ಕಿತ್ತು ತಂದಿರುವೆ. ನೋಡಿದಿರಾ? ಈ ಗಿಡ ನಿಮ್ಮ ಮನೆಯ ಸಮೀಪದ ತೋಟಗಳಲ್ಲಿ,ಮಾರ್ಗದ ಬದಿಗಳಲ್ಲಿ, ಪಾಳುಬಿದ್ದ ಭೂಮಿಯಲ್ಲಿ ಕಾಣಸಿಗುತ್ತದೆ. ಇದೊಂದು ಪೊದೆ ಸಸ್ಯ. ಈ ಮೊದಲು ನೀವು ಉತ್ತರಾಣಿ ಎಂಬ ಗಿಡವೊಂದನ್ನು ಗುರುತಿಸಿದ ನೆನಪಿದೆಯೆ? ಅದೂ ನಮ್ಮ ಬೈಲು ಗದ್ದೆಗಳಲ್ಲಿ, ತೋಟಗಳಲ್ಲಿ ಸಾಮಾನ್ಯವಾಗಿ ಕಾಣಿಸಿಗುವ ಸಸ್ಯ.

Image