ಸ್ಟೇಟಸ್ ಕತೆಗಳು (ಭಾಗ ೧೨೩೫) - ಬದಲಾಗಬೇಕು

ಸ್ಟೇಟಸ್ ಕತೆಗಳು (ಭಾಗ ೧೨೩೫) - ಬದಲಾಗಬೇಕು

ನೀನ್ಯಾಕೆ ನನ್ನ ಮುಂದೆ ಬಂದು ನಿಂತಿದ್ದೀಯಾ? ಪ್ರತಿದಿನವೂ ನಾನು ನಿನಗೆ ಹೂವನ್ನ ನೀಡಬೇಕು? ನೀನು ಅದನ್ನು ತೆಗೆದುಕೊಂಡು ಹೋಗಿ ನಿನಗೆ ಬೇಕಾದಲ್ಲಿ ಅಲಂಕಾರವನ್ನು ಮಾಡಬೇಕು. ಅದರಿಂದ ನೀನು ಸಂಭ್ರಮ ಪಡಬೇಕು. ಒಂದು ದಿನವೂ ನೀನು ನೀರು ಹಾಕುವ ಯೋಚನೆಯನ್ನು ಮಾಡ್ಲಿಲ್ಲ. ನನ್ನ ಕಷ್ಟವನ್ನು ಕೇಳಿಲ್ಲ. ನನ್ನ ತೊಂದರೆಗೆ ಪರಿಹಾರ ಸೂಚಿಸಿಲ್ಲ. ನನ್ನ ಮೇಲೆ ಬೀಳುವ ಬಿಸಿಲಿಗೆ ಒಂದಷ್ಟು ನೆರಳನ್ನು ಮಾಡುವ ಶ್ರಮವನ್ನು ನೀನು ತೆಗೆದುಕೊಂಡಿಲ್ಲ. ಹತ್ತಿರ ಬಂದು ನನ್ನ ನೈಜ ಪರಿಸ್ಥಿತಿ ಹೇಗಿದೆ ಅಂತ ಯೋಚನೆಯನ್ನು ಮಾಡಿಲ್ಲ .ಹೀಗೆ ನನ್ನ ಬಗ್ಗೆ ಕಿಂಚಿತ್ತೂ ಯೋಚಿಸುವ ವ್ಯವದಾನವನ್ನು ಮಾಡದೇ ಇರುವ ನೀನು ಪ್ರತಿದಿನ ಬೆಳಗ್ಗೆ ಬಂದು ಹೂವನ್ನ ಕೊಯ್ಯುವುದಕ್ಕೆ ನನ್ನ ಮುಂದೆ ನಿಲ್ಲುವುದು ಎಷ್ಟು ಸರಿ? ಆ ಬಿಸಿಲಿನ ಝಳಕ್ಕೆ ನೀರಿಗೋಸ್ಕರ ನನ್ನ ಬೇರುಗಳನ್ನು ಕಷ್ಟಪಟ್ಟು ನೆಲಕ್ಕೆ ಇಳಿಸಿ ಹನಿ ನೀರು ಪಡೆದುಕೊಂಡು ಬದುಕುತ್ತಿರುವ ನಾನು ನಿನಗೆ ಹೂ ನೀಡಿ ನಿನ್ನ ಸಂಭ್ರಮವನ್ನು ಹೆಚ್ಚಿಸಬೇಕು. ಮಾನವೀಯತೆ ಅನ್ನೋದಾದ್ರು ಇದೆಯಾ? ಅದು ನಿನ್ನಲ್ಲೇ ಇರಬೇಕು ಯಾಕಂದ್ರೆ ನಿನಗೆ ಮಾನವ ಅಂತ ಕರೀತಾರಲ್ವಾ? ಇದು ಯಾವುದೂ ಇಲ್ಲದ ನೀನು ಅದ್ಯಾವ ಮುಖವಿಟ್ಟು ಪ್ರತೀ ದಿನ ಮುಂಜಾನೆ ನನ್ನ ಮುಂದೆ ಬಂದು ಹೂವು ಕೇಳುತ್ತೀಯಾ? ನೀನು ಬದಲಾಗಬೇಕು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ