ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮನಸ್ಸಿನ ಲವಲವಿಕೆಗೆ ಧೂಪ ಹಾಕಿ !

ಬಹಳಷ್ಟು ಮನೆಗಳಲ್ಲಿ ಧೂಪವನ್ನು ಹಾಕುತ್ತಾರೆ. ಬಹುತೇಕ ಸಾಯಂಕಾಲದ ಹೊತ್ತಿಗೆ ಈ ಧೂಪವನ್ನು ಹಾಕಿದಾಗ ಅದರ ಸುಗಂಧ ಮನೆಯಲ್ಲೆಲ್ಲಾ ಪಸರಿಸಿ ಆಹ್ಲಾದಕರ ವಾತಾವರಣದ ನಿರ್ಮಾಣವಾಗುತ್ತದೆ. ಈ ಧೂಪದ ಪರಿಮಳವು ನಮ್ಮ ಮನಸ್ಸಿಗೆ ಹಾಗೂ ದೇಹಕ್ಕೆ ಒಂದು ರೀತಿಯ ಲವಲವಿಕೆಯನ್ನು ತರುತ್ತದೆ. ಧೂಪ ಹಾಕುವುದು ಕೇವಲ ದೇವರ ಪೂಜೆಗಾಗಿ ಮಾತ್ರ ಎಂದು ಬಹಳಷ್ಟು ಮಂದಿ ಅಂದುಕೊಂಡಿದ್ದಾರೆ.

Image

ಹಗ್ಗದ ಮೇಲಿನ ನಡಿಗೆ

ಕೆನಡಾ, ಮೆಕ್ಸಿಕೋ ಮತ್ತು ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ದಾಳ ಉರುಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆನಡಾ ಕೂಡ ಅಮೇರಿಕಾದ ವಸ್ತುಗಳ ಮೇಲೆ ಅಷ್ಟೇ ಕಠಿಣವಾದ ತೆರಿಗೆ ವಿಧಿಸುವ ಮೂಲಕ ತಿರುಗೇಟು ನೀಡಿದೆ.

Image

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

"ಈ ಸಮಾಜ ಹಾಳಾಗಲು ಕೇವಲ ಕೆಟ್ಟವರು ಮಾತ್ರ ಕಾರಣವಲ್ಲ ಒಳ್ಳೆಯವರ ಮೌನವೂ ಕಾರಣ" ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಕರೆಯಲಾಗುವ ಆಲ್ಬರ್ಟ್ ಐನ್ ಸ್ಟೈನ್ ಅವರ ಮಾತುಗಳಿವು. ಆ ಅನುಭವದ ಅನಿಸಿಕೆಯ ಹಿನ್ನೆಲೆಯಲ್ಲಿ....

Image

ಹಲಸಿನ ಸೊಳೆ ರೊಟ್ಟಿ

Image

ಹಲಸಿನಕಾಯಿ ಸೊಳೆ, ತೆಂಗಿನತುರಿ, ನೀರು, ಹಸಿಮೆಣಸು ಹಾಕಿ ನುಣ್ಣಗೆ ರುಬ್ಬಿ. ಆಮೇಲೆ ಅಕ್ಕಿ ಹಿಟ್ಟು, ಉಪ್ಪು, ಸಣ್ಣಗೆ ಹೆಚ್ಚಿದ ನೀರುಳ್ಳಿ-ಕರಿಬೇವು-ಶುಂಠಿ ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ಬಾಳೆಎಲೆಯಲ್ಲಿ ರೊಟ್ಟಿ ತಟ್ಟಿ ಕಾದ ಕಾವಲಿಯಲ್ಲಿ ಹಾಕಿ, ಎರಡೂ ಬದಿ ಎಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಿ ತೆಗೆಯಿರಿ.

ಬೇಕಿರುವ ಸಾಮಗ್ರಿ

ಹಲಸಿನ ಸೊಳೆ ೨ ಕಪ್, ತೆಂಗಿನ ತುರಿ ೧/೨ ಕಪ್, ಅಕ್ಕಿ ಹಿಟ್ಟು ೧ ಕಪ್, ಹಸಿಮೆಣಸು ೧-೨, ಈರುಳ್ಳಿ ೧, ಕರಿಬೇವು ಸೊಪ್ಪು ೨ ಚಮಚ, ಶುಂಠಿ ಚೂರು ೧/೪ ಚಮಚ, ಎಣ್ಣೆ ಅಥವಾ ತುಪ್ಪ ೧/೪ ಕಪ್, ಉಪ್ಪು ರುಚಿಗೆ ತಕ್ಕಷ್ಟು.

ಸ್ಟೇಟಸ್ ಕತೆಗಳು (ಭಾಗ ೧೨೨೨) - ಮೂರ್ತಿ

ನೀನ್ಯಾಕೆ ಇನ್ನು ಇನ್ನು ಅಲ್ಲೇ ಉಳಿದಿದ್ದೀಯ.? ನಾನು ನಿನ್ನನ್ನ ಈ ಸ್ಥಳದಲ್ಲಿ ನೋಡೋದಕ್ಕೆ ಬಯಸಿದವನಲ್ಲ, ನಿನ್ನೊಳಗಿನ ಸಾಮರ್ಥ್ಯಕ್ಕೆ ನೀನು ಆ ಗರ್ಭಗುಡಿಯ ಒಳಗೆ ಮೂರ್ತಿ ಆಗಿರಬೇಕಿತ್ತು. ಬಂದವರು ನಿನಗೆ ಗೌರವ ಕೊಡಬೇಕಿತ್ತು. ಆದರೆ ನಿನಗೆ ಮೂರ್ತಿಯಾಗುವ ಭಯ, ಹಾಗಾಗಿ ಕಲ್ಲಾಗಿ ಉಳಿದುಬಿಟ್ಟಿದಿಯ.

Image

ದೇವರು ಹೊರಟನು

ಪುಸ್ತಕದ ಲೇಖಕ/ಕವಿಯ ಹೆಸರು
ಮರಾಠಿ ಮೂಲ: ದಿ ಬಾ ಮೊಕಾಶಿ, ಕನ್ನಡಕ್ಕೆ : ಚಂದ್ರಕಾಂತ ಪೋಕಳೆ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೪

‘ದೇವರು ಹೊರಟನು’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಾದಂಬರಿಯಾಗಿದೆ. ಕೃತಿಯ ಮೂಲ ಮರಾಠಿ ಲೇಖಕ ದಿ.ಬಾ. ಮೊಕಾಶಿ. ಈ ಕಾದಂಬರಿ ರಚಿಸಿ ಆರು ದಶಕಗಳು ಗತಿಸಿದರೂ ಇಂದಿಗೂ ಎಲ್ಲ ವಯಸ್ಸಿನವರಿಗೆ ಮೋಡಿ ಮಾಡುತ್ತದೆ. ಕಾರಣವೇನೆಂದರೆ ಲೇಖಕನು ಕಾದಂಬರಿಯ ಆರಂಭದಲ್ಲೇ 'ಯಾವುದಕ್ಕೆ ಆದಿಯಿಲ್ಲವೋ-ಅಂತ್ಯವಿಲ್ಲವೋ ಇದು ಅಂಥ ದೇವರ ಕಥೆಯಾಗಿದೆ' ಎನ್ನುತ್ತಾನೆ.

ಬಜೆಟ್ - ಹಿನ್ನೋಟ, ಮುನ್ನೋಟ, ಕಣ್ಣೋಟ, ಕರುಳಿನೋಟ, ಬದುಕಿನಾಟ…

ಕನಸು ಕಣ್ಗಳಿಂದ ನೋಡುತ್ತಾಲೇ ಇದ್ದಾನೆ ಭಾರತದ ಬಡ - ಮಧ್ಯಮ ವರ್ಗದ ಪ್ರಜೆ 1950 ರಿಂದ ಇಲ್ಲಿಯವರೆಗೂ, ಪ್ರತಿ ವರ್ಷದ ಕೇಂದ್ರ ಮತ್ತು ರಾಜ್ಯದ ಬಜೆಟ್ ಅನ್ನು, ನಿರೀಕ್ಷಿಸುತ್ತಲೇ ಇದ್ದಾನೆ ಈ ಬಾರಿಯಾದರೂ ನಾನು ಶ್ರೀಮಂತನಾಗಬಹುದು, ಈ ಬಾರಿಯಾದರೂ ನಾನು ನೆಮ್ಮದಿಯಿಂದ ಇರಬಹುದು, ಈ ಬಾರಿಯಾದರೂ ನನ್ನ ಬದುಕು ಹಸನಾಗಬಹುದೆಂದು.<

Image

ಸ್ಟೇಟಸ್ ಕತೆಗಳು (ಭಾಗ ೧೨೨೧) - ಕೋಳಿ

ನಾಲ್ಕು ಚಕ್ರದ ಲಾರಿ ಮೇಲೆ ರಸ್ತೆಯಲ್ಲಿ ದೊಡ್ಡ ದೊಡ್ಡ ಪೆಟ್ಟಿಗೆಯೊಳಗೆ ಸಾಗುತ್ತಿದ್ದಾವೆ ಕೋಳಿಗಳು. ಯಾವ ಕೋಳಿಗೂ ತಮ್ಮ ಮುಂದಿನ ಬದುಕಿನ ಬಗ್ಗೆ ನಿಶ್ಚಿತತೆ ಇಲ್ಲ. ದಿನಕ್ಕೆ ಕೆಲವರು ಕಮ್ಮಿ ಆಗುತ್ತಿದ್ದಾರೆ ಯಾಕೆನ್ನುವುದು ಅರಿವಿಲ್ಲ. ಕಷ್ಟ ಪಡಬೇಕಾದ ಪರಿಸ್ಥಿತಿಯಿಲ್ಲ. ತಿಂದು ದಪ್ಪಗಾಗಬೇಕು ಒಂದು ಕಡೆ ಬೆಳೆದವರು, ಯಾರೋ ಹಿಡಿಯುತ್ತಾರೆ ಇನ್ನೊಂದು ಕಡೆಗೆ ಸಾಗುತ್ತಾರೆ.

Image