ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾದ ಕಿತ್ತೂರು

ಕಿತ್ತೂರಿನ ಕೊನೆಯ ಕಾಳಗ ಘಟಿಸಿ (1824) 200 ವರ್ಷಗಳು ಗತಿಸಿದರೂ ಕಿತ್ತೂರಿನ ಗತೈತಿಹಾಸ ಸ್ಮೃತಿಪಟಲದಲ್ಲಿದೆ. ಬೆಳಗಾವಿ ಜಿಲ್ಲೆಯ ಹಲವೆಡೆ ಕಿತ್ತೂರ ವೀರರ ಸಮಾಧಿಗಳು, ಸ್ಮಾರಕಗಳು ಇದ್ದು, ಅವು ಕಿತ್ತೂರ ರಾಜ - ರಾಣಿಯರ, ಬಂಟರ ಕ್ಷಾತ್ರತೇಜಸ್ಸನ್ನು ಕನ್ನಡಿಗರ ಮನದಂಗಳದಲ್ಲಿ ಹಚ್ಚಹಸಿರಾಗಿಸಿವೆ. ಕಿತ್ತೂರ ನಾಡವರ ಸ್ವಾತಂತ್ರ್ಯದ ಕಿಚ್ಚನ್ನು ಸ್ವದೇಶಾಭಿಮಾನವನ್ನು ಬೀರುತ್ತಿದೆ.

Image

ಪುಸ್ತಕನಿಧಿ:ನಾಟಕ ಪಂಚರಾತ್ರ

ಭಾಸನ ನಾಟಕವಾದ 'ಪಂಚರಾತ್ರ'ವು  ಗದ್ಯ ಪದ್ಯಗಳಿಂದ ಕೂಡಿದ್ದುದರಿಂದ ತಿಳಿದುಕೊಳ್ಳಲು ಸುಲಭವಾಗಲಿ ಎಂದು ಒಬ್ಬರು ಪೂರ್ತಿ ಗದ್ಯದಲ್ಲಿ ನಾಟಕವನ್ನು ಬರೆದಿದ್ದಾರೆ. ಇದು ನನಗೆ archive.org ತಾಣದಲ್ಲಿ ಸಿಕ್ಕಿತು.

ಸುಮಾರು 90 ಪುಟಗಳ ಈ ನಾಟಕದಲ್ಲಿ ಮಹಾಭಾರತದ ಸಂಗತಿ ಇದೆ. ಪಾಂಡವರು ವಿರಾಟ ರಾಜನ ಆಸ್ಥಾನದಲ್ಲಿ ಮಾರು ವೇಷದಿಂದ ತಮ್ಮ ವನವಾಸದ ಅಜ್ಞಾತವಾಸದ ಸಮಯವನ್ನು ಕಳೆಯುತ್ತಿರುವರು. 

ಅತ್ತ ದ್ರೋಣನು  ದುರ್ಯೋಧನನಲ್ಲಿ ಪಾಂಡವರ ರಾಜ್ಯವನ್ನು ಅವರಿಗೆ ಮರಳಿಸಲು ಹೇಳುವುದು. ಆಗ ದುರ್ಯೋಧನನು ಒಂದು ಶರತ್ತನ್ನು ಹಾಕುವನು. ಅದು ಏನೆಂದರೆ ಐದು ದಿನಗಳ ಸಮಯದಲ್ಲಿ ಪಾಂಡವರ ಪತ್ತೆ ಆಗಬೇಕು.

ನಿಸರ್ಗ ನಿನಗೊಂದು ನಮನ 

ಏನನ್ನೂ ಬಯಸದೆ ಬೆಳೆದು ಬದುಕುವುದು   
ಬದುಕಿ ಇತರರನ್ನು ಬದುಕಿಸಿ ಬೆಳೆಸುವುದು 
ಭಾವನಾತ್ಮಕ ಸಂಬಂಧ ಪ್ರಕೃತಿ ಬೆಸೆಯುತ್ತಿದೆ
ತನ್ಮಯ ನಾನಾದೆನು ಮನವು ಮಿಡಿಯುತ್ತಿದೆ

ಮುಂಜಾನೆಯ ನೇಸರನ ಹೊಂಗಿರಣವಿರಲಿ 
ಸಂಜೆಯ ಹೊಂಬಣ್ಣದ ರಂಗು ಚೆಲ್ಲುತಿರಲಿ 
ನಳನಳಿಸುವ ಚೆಲುವಿಕೆ ಸರಿಸಾಟಿಯಾರು   
ಹಸಿರು ಸೊಬಗಿನ ಸೆಳೆತಕೆ ಸೋಲದವರಾರು   

ತಾಯಿ ನಿಸರ್ಗವೇ ನೀನೆಷ್ಟು ವಿಸ್ಮಯವೇ 
ನನ್ನ ಹೃದಯವನ್ನು ಪ್ರಚೋದಿಸುತ್ತಿರುವೆ
ಅರಳುವ ಆತ್ಮವು ನೀ, ಪ್ರಶಾಂತವಾಗಿರುವೆ
ಪ್ರೇರಕ ಶಕ್ತಿ ನೀ ಅನಂತ ಪಲ್ಲವಿಯಾಗಿರುವೆ 

ತಾನು ಕೆಸರಾದರು ತಣ್ಣನೆಯ ಆಸರೆಯಿವಳು 

ಉಸಿರಾಗಿ ಆತ್ಮದೊಳು ಚೈತನ್ಯದ ಬೆಳಕಿವಳು 

ಪರಾಗದಾನಿಗಳನ್ನು ಉಳಿಸೋಣ ಬನ್ನಿ…! (ಭಾಗ ೨)

ಅದಾದ ತರುವಾಯ ಎಪ್ರೀಲ್ ತಿಂಗಳಿಗೆ ಜೇನಿನ ದೊಡ್ದ ಕೊಯಿಲು. ವಾರಕ್ಕೊಮ್ಮೆ ೧೫ ದಿನಕ್ಕೊಮ್ಮೆ ಹತ್ತನಾಜೆ ತನಕವೂ ಜೇನು ತೆಗೆಯುತ್ತಿದ್ದೆವು. ಸುಮಾರು ೧೦ ಲೀಟರಿಗೂ ಹೆಚ್ಚು ಹಿಡಿಯುವ ಪಾತ್ರೆ. ಅದರ  ತುಂಬಾ ಜೇನು. ಜೇನು ಪೆಟ್ಟಿಗೆಯ ಸಮೀಪ ಹೋಗುವಾಗಲೇ ಆ ಪಟ್ಟಿಗೆಯಲ್ಲಿ ಜೇನು ಆಗಿದೆ ಎಂಬುದನ್ನು ಅಲ್ಲಿ ಬರುವ ಪರಿಮಳ ತಿಳಿಸುತ್ತಿತ್ತು. ಅದು ಕುಂಟು ನೇರಳೆ ಹೂವಿನ ಜೇನು.

Image

ಬೆದರಿಕೆ ರಾಜತಾಂತ್ರಿಕತೆ ಬೇಡ

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ೨ನೇ ಇನ್ನಿಂಗ್ಸ್ ಜಗತ್ತಿನ ರಾಷ್ಟ್ರಗಳನ್ನು ಬಿಸಿ ಚರ್ಚೆಗಳ ಕಾವಲಿ ಮೇಲೆ ಕೂರಿಸಿದೆ. ಅಮೇರಿಕವೇ ಮೊದಲು, ಅಮೆರಿಕನ್ನರನ್ನು ಶ್ರೀಮಂತವಾಗಿಸುವ ಅವರ ಶಪಥಗಳೆಲ್ಲವೂ ಇತರೆ ರಾಷ್ಟ್ರಗಳನ್ನು ತನ್ನ ಬೆದರಿಕೆಯ ರಾಜತಾಂತ್ರಿಕ ಜಾಲದೊಳಕ್ಕೆ ಸಿಲುಕಿಸುವ ಅಪಾಯವನ್ನು ಒಳಗೊಂಡಿರುವಂತೆ ತೋರುತ್ತಿರುವುದು ಸ್ಪಷ್ಟ. ಆ ಪೈಕಿ ಬ್ರಿಕ್ಸ್ ರಾಷ್ಟ್ರಗಳಿಗೆ ಶೇ.

Image

ಪುಸ್ತಕನಿಧಿ: 'ಶ್ರೀ ರಾಮಚಂದ್ರ' - ಜಿ. ಪಿ. ರಾಜರತ್ನಂ ಅವರ ಪುಸ್ತಕ

ಈ ಪುಸ್ತಕವು archive.org ತಾಣದಲ್ಲಿ ಇದ್ದು, 'ಶ್ರೀ ರಾಮಚಂದ್ರ' ಎಂದು ಹುಡುಕಿ ಪಡೆಯಬಹುದು.

ಇದರಲ್ಲಿ ರಾಮಾಯಣದ ಕಥೆಯು ತುಂಬಾ ಸರಳವಾಗಿ 120 ಪುಟಗಳಲ್ಲಿ ಶ್ರೀ ರಾಮನು ರಾವಣನನ್ನು ಕೊಂದು ಸೀತೆಯನ್ನು ಕರೆದುಕೊಂಡು ಅಯೋಧ್ಯೆಗೆ ಬಂದು ಅಧಿಕಾರವನ್ನು ವಹಿಸಿಕೊಂಡವರೆಗೆ ಕಥೆಯನ್ನು ಹೇಳಿದ್ದಾರೆ. ಬಹುಶ: ವಾಲ್ಮೀಕಿ ರಾಮಾಯಣವೇ ಇದಕ್ಕೆ ಆಧಾರವಾಗಿರಬೇಕು. ಇದರಲ್ಲಿ ಯಾವುದೇ ಮುನ್ನುಡಿ ಇಲ್ಲದ್ದರಿಂದ ಈ ಬಗ್ಗೆ ಏನೂ ತಿಳಿಯುವದಿಲ್ಲ.

ರಾಮಾಯಣದ ಕಥೆ ನನಗೆ ಈಗಾಗಲೇ ಗೊತ್ತಿತ್ತಾದರೂ ಈ ಪುಸ್ತಕದಲ್ಲಿ ಏನಾದರೂ ಸದ್ಗುಣದ ಮತ್ತು ಸನ್ನಡತೆಯ ಉದಾಹರಣೆಗಳು ನಮಗೆ ಸಿಗಬಹುದು ಎಂದುಕೊಂಡು ಇದನ್ನು ಪೂರ್ತಿಯಾಗಿ ಓದಿದೆ.

ಅಲ್ಲಿ ಕೆಳಗಿನ ಸಂಗತಿಗಳು ನನ್ನ ಗಮನಕ್ಕೆ ಬಂದವು.

ಮತ್ತೆ ಮತ್ತೆ ನೆನಪಾಗುವ ಕ್ರಾಂತಿಕಾರಿ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್

ಇಂದು ಜನವರಿ 23. ಬೇಕಾದರೆ ಗಮನಿಸಿ. ಯಾವ ಮಾಧ್ಯಮಗಳು ಬಹುಶಃ ಇಂದು ಸುಭಾಷ್ ಚಂದ್ರ ಬೋಸ್ ಅವರನ್ನು ನೆನಪಿಸಿಕೊಂಡು ಒಂದೆರಡು ಗಂಟೆಗಳ ಅವರ ವ್ಯಕ್ತಿತ್ವ ಬಿಂಬಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಿಲ್ಲ. ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ತ್ಯಾಗ - ಮಹತ್ವ ತಿಳಿಸುವ ಪ್ರಯತ್ನ  ಮಾಡುವುದಿಲ್ಲ.

Image

ಸ್ಟೇಟಸ್ ಕತೆಗಳು (ಭಾಗ ೧೨೧೦) - ದ್ವಾರ

ದ್ವಾರವೊಂದು ಯಾವುದೇ ಜಾತಿಯ ಹಂಗಿಲ್ಲದೆ, ಧರ್ಮದ ಭೇದವಿಲ್ಲದೆ ಗಟ್ಟಿಯಾಗಿ ನಿಂತುಬಿಟ್ಟಿದೆ. ಆ ದ್ವಾರವನ್ನ ಕಟ್ಟಿದವರು ದಿನದ ಸಂಬಳಕ್ಕೆ ಕೆಲಸ ಮಾಡುವ ಒಂದಷ್ಟು ಜನ. ಅವರ ಜಾತಿ ಧರ್ಮದ ಪರಿಚಯ ಯಾರಿಗೂ ಇಲ್ಲ . ಊರಿನಲ್ಲಿ ಆಗುವ ಉತ್ಸವಕ್ಕೆ ಆ ದಿನ ಕೇಸರಿಯ ಪತಾಕೆಯನ್ನು ಏರಿಸಲಾಗಿತ್ತು ಧಾರ್ಮಿಕ ಚಿತ್ರಗಳನ್ನ ಅದರಲ್ಲಿ ಚಿತ್ರಿಸಲಾಗಿತ್ತು.

Image

ಭಗವಂತನಲ್ಲಿ ನಮ್ಮ ಭಕ್ತಿ ಹಾಗೂ ಶ್ರದ್ಧೆ

ವಯಸ್ಸಾದ ವ್ಯಕ್ತಿಯೊಬ್ಬರು ಬಹಳ ವರ್ಷಗಳಿಂದ ಹಾಸಿಗೆ ಹಿಡಿದಿದ್ದರು, ಅವರಿಗೆ ಪಾರ್ಶ್ವ ವಾಯು  ಖಾಯಿಲೆ ಬಂದು  ಹಾಸಿಗೆಯಿಂದ ಏಳಲು ಆಗುತ್ತಿರಲಿಲ್ಲ. ವಿಚಿತ್ರವೆಂದರೆ ಅವರ ಹಾಸಿಗೆ ಎದುರಿಗೆ ಯಾವಾಗಲೂ ಒಂದು ಖಾಲಿ ಕುರ್ಚಿ ಇರುತ್ತಿತ್ತು. ಯಾರೂ ಅದರಲ್ಲಿ ಕುಳಿತುಕೊಳ್ಳುತ್ತಿರಲ್ಲಿಲ್ಲ. ಮುದುಕರು ತಮಗೆ ಸಮಯ ಸಿಕ್ಕಾಗಲೆಲ್ಲಾ ಆ ಕುರ್ಚಿಯ ಜೊತೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು.

Image

ನಿಷ್ಪಾಪಿ ಸಸ್ಯಗಳು (ಭಾಗ ೮೪) ಕ್ರೋಟನ್ ಸಸ್ಯಗಳು

ನಾವು ಈ ಬಾರಿ ಒಂದು ನರ್ಸರಿ ಗೆ ಭೇಟಿ ನೀಡೋಣವೇ? ನರ್ಸರಿ ಎಂದರೆ ನೆಡಲು ಸಿದ್ಧಗೊಳಿಸಿದ ಗಿಡಗಳನ್ನು ಪೋಷಿಸಿ ಮಾರುವ‌ ಸ್ಥಳ. ನಾವೀಗ ಹೋಗುತ್ತಿರುವ ನರ್ಸರಿ ಬಂಟ್ವಾಳ ತಾಲೂಕಿನ ಮುಡಿಪು ಎಂಬಲ್ಲಿ ಮುಖ್ಯರಸ್ತೆಗೆ ತಾಗಿಕೊಂಡಿದೆ. ಬನ್ನಿ , ನರ್ಸರಿಯ ಒಳಗೆ ಹೋಗೋಣ. ಕಣ್ಣಿಗೆ ತಂಪು ನೀಡುವ, ಮನಸನ್ನು ಮುದಗೊಳಿಸುವ, ನಮ್ಮನ್ನೇ ನಾವು ಮರೆಯುವಂತೆ ಮಾಡುವ ಈ ಗಿಡಗಳನ್ನೊಮ್ಮೆ ನೋಡಿರಿ. ಇದೊಂದು ಪುಟಾಣಿ ಉದ್ಯಾನವನ!

Image