ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೈಸೂರು ಅನಂತಸ್ವಾಮಿ, ಡಾಕ್ಟರ್ ಡ್ರೇ, ಸ್ಲೇಯರ್

ಕೆಲವೊಮ್ಮೆ ಸಂಗೀತದಲ್ಲಿ ರಚನೆಯಾಗುವ ಹೊಸ ಕೃತಿಗಳು‌ ಹೊಸದೊಂದು ಸಂಗೀತದ ಶೈಲಿಯನ್ನೇ ಹುಟ್ಟು ಹಾಕುತ್ತವೆ ಅಥವ ಇರುವಂತಹ ವಿಧಾನಕ್ಕೇ ಹೊಸ ಅರ್ಥವನ್ನು ಕೊಡುತ್ತವೆ. ಅಂತಹ ರಚನಾಕಾರರು ಈ ಮೇಲಿನ ಮೂವರು.

ಅಷ್ಟನ್ನು ಬಿಟ್ಟರೆ ಮತ್ಯಾವ ಸ್ವಾಮ್ಯವೂ ಇಲ್ಲ ಇವರ ನಡುವೆ. ಅನಂತಸ್ವಾಮಿ ಕನ್ನಡ ಭಾವಗೀತೆಗಳ ಜಗತ್ತಿನಲ್ಲಿ ಸುಪ್ರಸಿದ್ಧರು, ಡಾಕ್ಟರ್ ಡ್ರೇ ಪಾಶ್ಚಿಮಾತ್ಯರಲ್ಲಿ ಅತ್ಯಂತ ಕುಪ್ರಸಿದ್ಧವಾದ gangsta rap ಎಂಬ ಹೊಸ ಶೈಲಿಯನ್ನು ಹುಟ್ಟುಹಾಕಿ ಬ್ಲಾಕ್ ಜನರಿಗೆ ಹೊಸ ದಾರಿ ಹಿಡಸಿದ ಗುರು. ಸ್ಲೇಯರ್ heavy metal ಸಂಗೀತಕ್ಕೆ ಹೊಸ ತಿರುವು ಕೊಟ್ಟು thrash metal ಎಂಬ ಹೊಸ ಶೈಲಿಗೆ ನಾಂದಿ ಇಟ್ಟ ವಾದ್ಯವೃಂದ.

ಕಳ್ಳರಿದ್ದಾರೆ ಎಚ್ಚರಿಕೆ

ಕಳ್ಳರಿದ್ದಾರೆ ಎಚ್ಚರಿಕೆ ನಮ್ಮೂರಿನಲಿಹನು ಪುಕ್ಕಟೆ ಕ್ಷೌರಿಕ ಕತ್ತರಿ ಆಡಿಸುವುದೇ ಅವನ ಕಾಯಕ ತಲೆಗೆ ನೀರೂ ಹಾಕದೇ ನುಣ್ಣಗೆ ಬೋಳಿಸುವ ಕೂದಲನ್ನಲ್ಲ, ನಮ್ಮ ನಿಮ್ಮ ಜೇಬನ್ನು ಇನ್ನೊಬ್ಬ ನಡೆಸಿಹನು ಸೇವೆಯ ಕಂಪನಿ ದಾನ ಮಾಡಿರೆಂದು ಕೈ ಜೋಡಿಸಿಹ ಎಲ್ಲರಲಿ ಇವನ ಮುದ್ದು ಮುಖಕೆ ಮರುಳಾಗದವರೇ ಇಲ್ಲ ಸ್ವಲ್ಪ ದಿನಗಳಲೇ ಹಣ ಕಳಕೊಂಡರವರೆಲ್ಲ ಮತ್ತೊಬ್ಬ ತೋರಿಸುತಿಹನು ಎತ್ತರದ ಮಹಲನು

ಬೃಂದಾವನ ಅಂದರೆ ಏನು?

ನ್ನ ಬ್ಲಾಗ್ ನಲ್ಲಿ ಇಂದು ಏನು ಬರೆಯುವುದು ಎಂದು ಯೋಚಿಸುತ್ತಿದ್ದೆ. ಆಗ ನನ್ನ ಸ್ನೇಹಿತರೊಬ್ಬರು ಇಂದು ಬೃಂದಾವನಕ್ಕೆ (ಇದು ಇಲ್ಲಿಯ ಒಂದು ಹೊಟೆಲ್ ) ಹೋಗಿ ಬರುವ ಅಂದರು. ಆಗ ಯೋಚಿಸಿದೆ - ಈ ಬೃಂದಾವನ ಅಂದರೆ ಏನು? ಇದು ಕಾಬಾ, ದರ್ಗಾ, ಸಮಾಧಿ, ಗದ್ದುಗೆಗಳಂತೆಯೇ, ಅಲ್ಲವೇ. ಇದರ ಬಗ್ಗೆ ನನ್ನ ಅನಿಸಿಕೆ ಹೀಗಿದೆ. ನೋಡಿ, ಓದಿ, ತಪ್ಪುಗಳನ್ನು ತಿಳಿಸಿ, ನಾನೂ ತಿಳಿಯುವುದು ಬಹಳಷ್ಟಿದೆ.

ನನ್ನ ಲೇಖನಗಳ ಯಾದಿ

ನಾನು ಲಾಗಿನ್ ಆದಾಗ ಬಲಗಡೆ recent posts ಎಂಬ ತಂತು ಇದೆ. ಅದನ್ನು ಕ್ಲಿಕ್ ಮಾಡಿದಾಗ ಅದು ಸಂಪದ ತಾಣದಲ್ಲಿ ಇತ್ತೀಚೆಗೆ ಸೇರಿಸಲಾದ ಲೇಖನಗಳ ಯಾದಿ ನೀಡುತ್ತದೆ. ಇದೇನೋ ಸರಿಯೇ. ನನ್ನ ಲೇಖನಗಳನ್ನು ಮತ್ತು ಅವುಗಳಿಗೆ ಇತರರು ನೀಡಿದ ಟೀಕೆಗಳನ್ನು ಓದಬೇಕಾದರೆ ನಾನು ಈ ಯಾದಿಯಲ್ಲಿ ಹುಡುಕಾಡಬೇಕಾಗುತ್ತದೆ. "My postings" ಎಂಬ ಇನ್ನೊಂದು ತಂತು ನೀಡಿದರೆ ಚೆನ್ನಾಗಿರುತ್ತದೆ. ಸಿಗೋಣ, ಪವನಜ

ವಚನ ಚಿಂತನ:೧೨: ನಾ ದೇವನಲ್ಲದೆ ನೀ ದೇವನೇ?

ನಾ ದೇವನಲ್ಲದೆ ನೀ ದೇವನೇ ನೀ ದೇವರಾದರೆ ಎನ್ನನೇಕೆ ಸಲಹೆ ಆರೈದು ಒಂದು ಕುಡಿತೆ ಉದಕವನೆರೆವೆ ಹಸಿದಾಗ ಒಂದು ತುತ್ತು ಓಗರವನಿಕ್ಕುವೆ ನಾ ದೇವ ಕಾಣಾ ಗುಹೇಶ್ವರ ನಾನೇ ದೇವರೇ ಹೊರತು ನೀನು ದೇವರಲ್ಲ. ನೀನು ದೇವರಾದರೆ ನನ್ನನ್ನು ಯಾಕೆ ಸಲಹುವುದಿಲ್ಲ? ನಿನಗೆ ಒಂದಿಷ್ಟು ನೀರೆರೆದು ಪ್ರೀತಿಯಿಂದ ಸ್ನಾನ ಮಾಡಿಸುವವನು ನಾನು, ಹಸಿವಾದಾಗ ನಿನಗೆ ತುತ್ತು ಅನ್ನ ನೀಡುವವನು ನಾನು. ನಾನೇ ದೇವರು.

ಝೆನ್ ಕತೆ: ೫: ಒಂದು ಕೈ ಚಪ್ಪಾಳೆ

ಕೆನಿನ್ ದೇವಾಲಯದಲ್ಲಿದ್ದ ಝೆನ್ ಗುರುವಿನ ಹೆಸರು ಮೊಕೌರಿ. ಮೊಕೌರಿ ಎಂದರೆ ಸದ್ದಿಲ್ಲದ ಗುಡುಗು ಎಂದರ್ಥ. ಹನ್ನೆರಡು ವಯಸ್ಸಿನ ಪ್ರತಿಭಾವಂತ ಹುಡುಗ ಟೊಯೊ ಎಂಬಾತ ಅವನ ಬಳಿ ಶಿಷ್ಯನಾಗಿದ್ದ. ಸ್ವಲ್ಪ ವಯಸ್ಸಾದ ಶಿಷ್ಯರು ದಿನವೂ ಬೆಳಗ್ಗೆ ಸಂಜೆ ಗುರುವಿನ ಬಳಿ ಬಂದು ಸಾನ್‌ಝೆನ್ ಪಡೆದುಕೊಳ್ಳುವುದನ್ನು ನೋಡುತ್ತಿದ್ದ. ಸಾನ್‌ಝೆನ್ ಎಂದರೆ ವೈಯಕ್ತಿಕ ಮಾರ್ಗದರ್ಶನ. ಗುರು ಒಬ್ಬರಿಗೂ ಅವರಿಗೆ ತಕ್ಕ ಮುಂಡಿಗೆಯನ್ನು ನೀಡುತ್ತಿದ್ದ. ಈ ಬೆಡಗಿನಂಥ ಮಾತುಗಳ ಮುಂಡಿಗೆಯನ್ನು ಕೋನ್ ಎನ್ನುತ್ತಾರೆ. ಟೊಯೊ ತನಗೂ ಇಂಥ ಒಂದು ಕೋನ್ ಹೇಳಿ ಎಂದು ಗುರುವನ್ನು ಕೇಳಿದ.

ಸಾಹಿತ್ಯ ಮೇಳ

ರವಿವಾರ, ಬೆಳಗಾಗುತ್ತಿದ್ದಂತೆ ಸ್ನೇಹಿತರೊಬ್ಬರ ಫೋನು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯವರು ನಡೆಸುತ್ತಿರುವ ಪುಟ್ಟ 'ಬುಕ್ ಶೋ'ಗೆ ಹೋಗುವುದೆಂದು ಹಿಂದಿನ ದಿನ ಮಾತನಾಡಿಕೊಂಡಿದ್ದೆವು. ಹಾಗೆಯೇ ನನ್ನ ಸ್ನೇಹಿತರಿಗೆ 'ಉಬುಂಟು' ಲಿನಕ್ಸ್ ನಲ್ಲಿರುವ ಕನ್ನಡ ಸಪೋರ್ಟ್ ತೋರಿಸುವುದಾಗಿ ಸ್ಕೆಚ್ ಹಾಕಿದ್ದೆ. ನಿಶಾಚರನ ನಿದ್ದೆಗೆ ಕತ್ತರಿ ಬಿದ್ದಿತು. :)

ಝೆನ್ ಕತೆ: ೪: ಪ್ರಥಮ ಸೂತ್ರ

ಕ್ಯೋಟೋದಲ್ಲಿರುವ ಒಬಾಕು ದೇವಾಲಯಕ್ಕೆ ಹೋದವರಿಗೆ ಅಲ್ಲಿನ ಮಹಾದ್ವಾರದ ಮೇಲೆ "ಪ್ರಥಮ ಸೂತ್ರ" ಎಂದು ಬರೆದಿರುವುದು ಕಾಣುತ್ತದೆ. ಅಕ್ಷರಗಳು ಬಲು ದೊಡ್ಡವು. ಕೈ ಬರಹದ ಕಲೆಯ ನಿಷ್ಣಾತರು ಈ ಬರವಣಿಗೆಯನ್ನು ಅತ್ಯುತ್ತಮ ಕಲಾಕೃತಿ ಎಂದು ಹೊಗಳುತ್ತಾರೆ. ಇದನ್ನು ಬರೆದವನು ಇನ್ನೂರು ವರ್ಷಗಳ ಹಿಂದೆ ಬದುಕಿದ್ದ ಕೊಸೆನ್ ಎಂಬ ಕಲಾವಿದ. ಕೊಸೆನ್ ಅಕ್ಷರಗಳನ್ನು ಹಾಳೆಯ ಮೇಲೆ ಬರೆಯುತ್ತಿದ್ದ. ಆಮೇಲೆ ಬಡಗಿಗಳು ಆ ಅಕ್ಷರಗಳನ್ನು ಮರದ ಮೇಲೆ ಕಾಪಿ ಮಾಡಿಕೊಂಡು ಕೆತ್ತುತ್ತಿದ್ದರು.

ವಚನಚಿಂತನ: ೧೧ : ಮಲಗುವುದು ಅರ್ಧ ಮಂಚ!

ಆನೆ ಕುದುರೆ ಭಂಡಾರವಿರ್ದಡೇನೋ ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು ಮಲಗುವುದರ್ಧ ಮಂಚ ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ ಒಡಲು ಭೂಮಿಯ ಸಂಗ ಒಡವೆ ತಾನೇನಪ್ಪುದೋ ಕೈವಿಡಿದ ಮಡದಿ ಪರರ ಸಂಗ ಪ್ರಾಣ ವಾಯುವಿನ ಸಂಗ ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ ನಿಃಕಳಂಕ ಮಲ್ಲಿಕಾರ್ಜುನಾ [ಪಡಿ-ಒಂದು ಅಳತೆ; ಆವು-ಹಸು] ಆನೆ ಕುದುರೆ ಸಂಪತ್ತು ಬೇಕಾದ್ದಕ್ಕಿಂತ ಸಾವಿರಪಟ್ಟು ಹೆಚ್ಚು ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ. ಉಣ್ಣುವುದು ಒಂದಳತೆ ಅನ್ನ, ಕುಡಿಯುವುದು ಒಂದು ಹಸು ಕರೆದ ಒಂದಿಷ್ಟು ಹಾಲು, ಮಲಗುವುದು ಅರ್ಧಮಂಚ. ನಾವು ಪಡಬಹುದಾದ ಸುಖಕ್ಕೆಲ್ಲ ಮಿತಿ ಇದೆ ಎಂಬುದನ್ನು ಮರೆತು ಸುಖಕ್ಕೆ ಮೂಲ ಎಂದು ನಾವು ತಿಳಿದ ವಸ್ತುಗಳನ್ನೆಲ್ಲ ಕೂಡಿಟ್ಟುಕೊಳ್ಳುವುದಕ್ಕೆ, ಅವು ಇಲ್ಲ ಎಂದು ತಹತಹಿಸುವುದಕ್ಕೆ ಅರ್ಥವಿದೆಯೇ?