ಹೊಸ ಚಿಗುರು-ಹಳೆ ಬೇರು
ನಿರಂತರ ಬದಲಾವಣೆಗೆ ತುಡಿಯುವ ಮಾನವನ ಜಗತ್ತಿನಲ್ಲಿ ಪ್ರಕೃತಿಯೊ ಸೇರಿದಂತೆ ಕಾಲದ ಪ್ರವಹಿಸುವಿಕೆ ತನ್ನ ಪ್ರಭಾವ ಬೀರುತ್ತಲೇ ಇರುತ್ತದೆ. ಹೊಸ ನೀರು ಹಳೆಯದರೊಂದಿಗೆ ಬೆರೆತು ಕೆಂಪು ಕೆಂಪಾಗಿ ಕಾಣುತ್ತ ಹಳ್ಳ ಕೊಳ್ಳಗಳಿಂದ ತಳಾತಳದಿಂದ ಕಸಕಡ್ಡಿ ಕೊಳೆಯನೆಲ್ಲ ಮೇಲೆತ್ತಿ ತೆಗೆದು ಕೊಂಡೇ ಹರಿಯತೊಡಗುತ್ತದೆ. ಈ ಅಬ್ಬರ-ಉಬ್ಬರ-ಇಳಿತ ಅಲ್ಪಕಾಲ ಮಾತ್ರ. ಆದರೂ ಪ್ರಾಕೃತಿಕವಾಗಿ ಆಗಲೇಬೇಕಾದ ಪ್ರಕ್ರಿಯೆ. ಯಾವಾಗಲೂ ಜೀವನದಿಯ ಮೊಲ ಸೆಲೆ ಹಳೆಯದೇ. ಅದೇ ಬತ್ತಿ ಹೋದರೆ? ಹೊಸ ಹೊಲಬಿಗೆ ಹರಿದು ಬರಬೇಕಾದ ನೀರು ನಿಂತ ನೀರಾದೀತು! ಹೌದು, ವರ್ಷ ಋತುವಿನಲೊಂದಾದ ಮಳೆಗಾಲದಲಿ ನಮಗೆ ಹೊಸ ನೀರು ಬೇಕು. ಹಾಗೆಯೆ, ವಸಂತ ಮಾಸದಲಿ ಹೊಸ ಚಿಗುರು ಬರಬೇಕು. ಎಲ್ಲಕಾಲಕ್ಕೂ ನಮ್ಮ ಜನ ಜೀವನದ ಗತಿ ಹೀಗೆಯೆ ಮುನ್ನೆಡೆದು ಬರಬೇಕು. ಬದಲಾವಣೆ ಕಾಣಬೇಕು;ಕಾಣುತ್ತಿರಬೇಕು. ಮಾನವ ಹಳೆಯ ಬೇಸರ ದುಃಖ ಮರೆತು ಮತ್ತೆ ಚೈತನ್ಯಶೀಲನಾಗಿ ಹೊಸ ಬೆಳಕಿನೆಡೆಗೆ ಸಾಗಬೇಕು. ಇಲ್ಲ, ಹಾಗಾಗುತ್ತಿಲ್ಲ; ಹಳೆಯದನ್ನೆಲ್ಲ ತೆಗಳುವುದಿರಲಿ,ಅದರಿಂದ ಕಲಿಯುವುದಿರಲಿ,ಚಿಗುರಾಗಿ ಬೆಳೆಯುವುದಿರಲಿ ಅದರಗೊಡವೆಯೆ ಬೇಡ, ಅದಕ್ಕೆಲ್ಲ ಕಿವಿಗೊಡುವುದೂ ಬೇಡವೆಂಬ ನಿರ್ಲಕ್ಷ್ಯ!...ಮುಂದೆ ಓದಲು ಇಲ್ಲಿ ಕ್ಲಿಕ್ಕಿಸಿ
[http://ritertimes.com|ಹೊಸಬೆಳಕು;ಹೊಸತಿರುವು]