ದೂರ ಎಲ್ಲಿಯೋ ಬೆಂಗಳೂರು

ದೂರ ಎಲ್ಲಿಯೋ ಬೆಂಗಳೂರು

ಹೀಗೆಲ್ಲಾ ನನ್ನ ಪ್ರೀತಿಯ ನಗರವನ್ನು ನೆನಪಿಸಿಕೊಳ್ಳುತ್ತೇನೆ-
"ನಿನ್ನ ಗಲ್ಲಿ ಬಯಲು ವನದಲ್ಲಿ ಪ್ರೀತಿಸಿದ್ದೆ
ನಿನ್ನ ಸಂಜೆ ಬೆಳಗು ನಡುಹಗಲ ಬಿಸಿಲಲ್ಲಿ ಪ್ರೀತಿಸಿದ್ದೆ
ನಿನ್ನ ಸೊಮಾರಿ ಹಾಗೂ ಗಡಿಬಿಡಿಯ ದಿನಗಳಲ್ಲಿ ಪ್ರೀತಿಸಿದ್ದೆ
ನಿನ್ನ ಜನ ನಿಬಿಡಗಳಲ್ಲಿ ಜನ ರಹಿತಗಳಲ್ಲಿ ಪ್ರೀತಿಸಿದ್ದೆ
ನಿನ್ನ ಬೆಳದಿಂಗಳಲ್ಲಿ ಕಗ್ಗತ್ತಲಲ್ಲಿ ಪ್ರೀತಿಸಿದ್ದೆ"

ಈಗ ಇಲ್ಲಿ ಕೂತು ಮತ್ತೆ ನನ್ನ ಹರಕು ನೆನಪಲ್ಲಿ
ಪ್ರೀತಿಸುತ್ತೇನೆ
ನಿನ್ನ
ಪ್ರೀತಿಯ ದಿನಗಳನ್ನು
ರಾತ್ರಿಗಳನ್ನು
ರಸ್ತೆ ಕಾಲುದಾರಿ ತಿಪ್ಪೆಗಳನ್ನು
ಬೆಟ್ಟ ಕೊಳ ಕೊಳಚೆಯನ್ನು
ಹಸಿರು ಹುಲ್ಲು ಮತ್ತು ಕೆಸರನ್ನು
ನನ್ನ ಹರಕು ನೆನಪಲ್ಲಿ
ಈಗಲೂ ಪ್ರೀತಿಸುತ್ತೇನೆ ಎಲ್ಲವನ್ನು.

Rating
No votes yet