ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು

ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು

ನಾವು ಕನ್ನಡದಲ್ಲಿ ಸಾಮಾನ್ಯವಾಗಿ ಬಳಸುವ ಕೆಲವು ಸಂಸ್ಕೃತ ಶಬ್ದಗಳ ಬದಲಾಗಿ ಕೆಲವು ಅಪ್ಪಟ ಕನ್ನಡದ ಶಬ್ದಗಳನ್ನು ಆಗಸ್ಟ್ ಕಸ್ತೂರಿಯ ಪುಸ್ತಕವಿಭಾಗದಲ್ಲಿ ಬಂದಿರುವ ಭಾರತಿಸುತ ಅವರ ಕಾದಂಬರಿ ಸಂಗ್ರಹದಿಂದ ಆಯ್ದುಕೊಂಡು ಇಲ್ಲಿ ಕೊಡುತ್ತಿರುವೆ .
ಒಂದು ಸಲ ಈ ಪಟ್ಟಿ ನೋಡಿ . ಅಚ್ಚ ಕನ್ನಡ ಶಬ್ದಗಳನ್ನು ಬಳಸಿ .

ಶಿರಸಾ ವಹಿಸಿ - ನೆತ್ತಿಯಲ್ಲಿ ಹೊತ್ತು
ಆಲಿಂಗನ - ಅಪ್ಪುಗೆ
ಚುಂಬನ - ಮುತ್ತು
ಗರ್ವ - ಸೊಕ್ಕು
ಮಧ್ಯರಾತ್ರಿ - ನಟ್ಟಿರುಳು
ವೃದ್ಧಾಪ್ಯ - ಮುಪ್ಪು
ಸೈನ್ಯ - ದಂಡು
ಅಧರ -ತುಟಿ
ಮಧುರ - ಸಿಹಿ
ಸ್ನಾನ ಮಾಡುವದು - ಮೀಯುವದು
( ಜಳಕ ಮಾಡುವದು - ಜಳ ಜಳ ಸ್ವಚ್ಚ ಆಗುವದು!)
ಜೀವನ - ಬದುಕು , ಬಾಳುವೆ
ವಸ್ತ್ರಾಭರಣ - ಉಡಿಗೆ ತೊಡಿಗೆ
ರಾಜ - ಅರಸ
ರಾಣಿ - ಅರಸಿ
ಸಮುದ್ರ - ಕಡಲು
ಜವಾಬ್ದಾರಿ ( ಇದು ಸಂಸ್ಕೃತ ಅಲ್ಲ) - ಹೊಣೆ
ಖರ್ಚು - ವೆಚ್ಚ
ಶೌರ್ಯ - ಕಲಿತನ - ಕೆಚ್ಚು
ದುಃಖ ,ಶೋಕ - ಅಳಲು ( ಅಳುವಿಗೆ ಸಂಬಂಧಿಸಿದ್ದು)
ಔಷಧ -ಮದ್ದು
ಮಂದಹಾಸ - ಕಿರುನಗೆ , ನಸುನಗೆ

ಹಾಗೆಯೇ ಬಳಕೆಯಲ್ಲಿರುವ ಕೆಲ ಇಂಗ್ಲೀಷ ಪದಗಳಿಗೆ ಕನ್ನಡ ಪದಗಳು
ಪ್ರೆಸೆಂಟು - ಉಡುಗೊರೆ
ಪ್ಯಾಂಟ್ - ಕಾಲು ಕುಪ್ಪಸ
ಸೆಂಡಾಫ್ - ಬೀಳ್ಕೊಡುಗೆ
ಟೆನ್ಶನ್- ದುಗುಡ
ವಿಶ್ - ಹಾರೈಕೆ
ಬರ್ಥಡೇ - ಹುಟ್ಟಿದ ಹಬ್ಬ
ಮ್ಯಾರೇಜು - ಮದುವೆ
ಲಿಸ್ಟ್ - ಪಟ್ಟಿ , ಯಾದಿ ..... ಅಯ್ಯೋ , ಬಳಕೆಯಲ್ಲಿರುವ ಇಂಗ್ಲೀಷ ಪದಗಳಿಗೆ ಕನ್ನಡ ಪದಗಳನ್ನು ಕೊಡ್ತಾ ಹೋದರೆ ಪಟ್ಟಿ ದೊಡ್ಡದಾಗುವದು .... !

ಯುರೇಕಾ ! ಬಡಿಗೆ - ಬಡಿಯಲು ಬಳಸುವ ಸಾಧನ :)

Rating
No votes yet

Comments