ಅಮ್ಮ ನನ್ನ ಬಿಟ್ಟು

ಅಮ್ಮ ನನ್ನ ಬಿಟ್ಟು

ಅಮ್ಮ ನನ್ನ ಬಿಟ್ಟು
ವಿಧಿ ವಶವಾದಾಗ
ನನ್ನಗಿನ್ನು ಲೋಕ ಅರಿಯದ
ಹರೆಯ!
ಕೆಂಪು ಸೀರೆ, ತಲೆ ಮುಂದೆ
ಹೊಗೆ ಬತ್ತಿ
ಕಾಲ ಬುಡದಿ ದೀಪ
ಆಗ ಪೂಜೆಯ ನೆನಪು!
ಅಪ್ಪ, ಅಕ್ಕನ ಕಣ್ಣಿರು
ಅಮ್ಮನ ಮುಖದಿ ಕಿರುನಗು
ಆಗ ನನ್ನ ಹಠಕ್ಕೆ
ಅಮ್ಮ ಹೊಡೆದ
ನೆನಪು!
ಅಪ್ಪನ ಕೇಳಿದರೆ ಉತ್ತರವಿಲ್ಲ
ಅಕ್ಕನ ಕೇಳಿದರೆ ಕಣ್ಣೀರ ಉತ್ತರ!!
ಕೆಂಪು ಸೀರೆಯವರು ಬಂದರೆ
ನನ್ನ ಆಸೆಯ ಕಣ್ಣು ಹೊಸ್ತಿನತ್ತ!
ಕಾದೆನು ಹಗಳಿರಳು
ಬರಲಿಲ್ಲವೇಕೆ? ಮರೆತಳೆ??
ಇಲ್ಲ ಬರುತ್ತಾಳೆ ಇಂದಾಲ್ಲ
ನಾಳೆ! ನನ್ನ ೆಳೆ ಹೃದಯದ
ನಿರೀಕ್ಷೆ!!

Rating
No votes yet

Comments