ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೬೦
( ೩೦೬) 'ದೇವರು ಕೆಲಸದ ವಿವರದಲ್ಲಿದ್ದಾನೆ' ಎಂದು ವಾಸ್ತುಶಿಲ್ಪಿಯೊಬ್ಬ ಹೇಳಿದ್ದಾನೆ. ಆದರೆ ದೇವರ ವಿವರ ಮಾತ್ರ ಎಲ್ಲೆಡೆಯೂ ಇರುತ್ತದೆ, ಅದು ವಾಸ್ತುಶಿಲ್ಪಿವಾಗಿರಬಹುದು, ಅಲ್ಲದೆಯೂ ಇರಬಹುದು.
(೩೦೭) ಫಲಿತಾಂಶವು ಏನೇ ಆಗಿರಲಿ, ಔಷದೋಪಚಾರವೆಂಬುದು ಸಾವಿನ 'ಭಯವನ್ನೇ' ಮೀರಿನಿಲ್ಲುವ ಪರಿಣಾಮಕಾರಿ ಔಷದವಾಗಿದೆ.
(೩೦೮) ಮಾದಕ ವಸ್ತುವು ತನ್ನ ಅನುಪಸ್ಥಿತಿಯಲ್ಲಿ ಉಂಟುಮಾಡುವ ನಿರಂತರ ಸುಖದ ಭ್ರಮೆಯನ್ನೇ ಮೋಕ್ಷವೆನ್ನುತ್ತೇವೆ!
(೩೦೯) ದೀರ್ಘಾಯುಷಿಯಾಗಿರುವುದು ಎಂದರೆ ನಿಮ್ಮ ಸ್ನೇಹಿತರೆಲ್ಲ ನಿಮ್ಮ ಕಣ್ಣ ಮುಂದೆಯೇ ಸಾಯುತ್ತಾರೆ ಎಂದರ್ಥ. ಅಕಾಲಿಕ ಮೃತ್ಯುವನ್ನಪ್ಪುವುದು ಎಂದರೆ ನಿಮ್ಮ ಶತೃಗಳೆಲ್ಲರಿಂದಲೂ ಬಚಾವಾಗುವುದು ಎಂದರ್ಥ.
(೩೧೦) ಮಾಡಬೇಕಿರುವ ಕೆಲಸಗಳ ಪಟ್ಟಿ ಮಾಡುವುದೆಂದರೆ ಮಿಕ್ಕುಳಿದ ಕೆಲಸಗಳನ್ನೆಲ್ಲ ಮಾಡಿಮುಗಿಸಿದ್ದೇವೆ ಎಂದರ್ಥವಲ್ಲ.
Rating