ಕೊನೆಗೂ ಸಿಕ್ಕ ಜಯ

ಕೊನೆಗೂ ಸಿಕ್ಕ ಜಯ

ಎಲ್ಲಾ ಹೇಗಿದ್ದೀರಾ?
ಸಂಪದ ನೋಡದೆ ತುಂಬಾ ದಿನಗಳಾಗಿದ್ದವು , ಸಂಪದ ಗೀಳಿದ್ದರೂ ಈ ದಿನಗಳಲ್ಲಿ ಮನಸಿಗೆ ಏನೂ ಒಂದು ಬಗೆಯ ತೃಪ್ತಿಯಂತೂ ಸಿಕ್ಕಿತು.

ನಮ್ಮಲ್ಲಿ ಧನರಾಜ ಎಂಬ ಗುಲ್ಬರ್ಗಾದ ಹುಡುಗನೊಬ್ಬ ಬಿಸಿಎ(BCA)ಗೆ ಸೇರಿದ್ದ.
ಆತನನ್ನು ಶುಲ್ಕ ಪಾವತಿಗಾಗಿ ವಿಚಾರಿಸಿದಾಗ ಎರೆಡು ತಿಂಗಳಿಂದ ಆತನಿಗೆ ಸಂಬಳವೇ ಸಿಕ್ಕಿಲ್ಲದಿರುವುದು ತಿಳಿಯಿತು. ಆತ ಸಂಬಳ ಕೇಳಿದರೆ ಆತನನ್ನು ಅಲ್ಲಿಗೆ ಗುತ್ತಿಗೆಗೆ ನೀಡಿರುವ ಏಜೆನ್ಸಿಗೆ ಪಾವತಿಸಿದ್ದಾಗಿ ಅವನ ಕಂಪನಿಯಲ್ಲಿ ತಿಳಿಸಿದರು. ಆತನೋ ಪೆದ್ದರಲ್ಲಿ ಪೆದ್ದ . ಮುಗ್ದತೆಯೂ ಅನ್ನಿ . ಮಾತೇ ಆಡೊಲ್ಲ
ಆ ಏಜೆನ್ಸಿಯೋ ಬಹಳ ದೊಡ್ಡದು ಗ್ಲೊಬಲ್ಲಿ ಗುರುತಿಸಿಕೊಂಡಿರುವಂತಹದ್ದು
ಇವನ ಸಂಬಳವನ್ನು ಅಲ್ಲಿನ ಅಕೌಂಟ್ಸ್ ಆಫೀಸರುಗಳು ಏನು ಮಾಡಿದ್ದರೋ ಗೊತ್ತಿಲ್ಲ . ಅವನಿಗೆ ಕೊಡಲು ನಿರಾಕರಿಸಿದರು. ಕೇಳಿದ್ದಕ್ಕೆ ಯಾವ ಯಾವುದೋ ಸಬೂಬು.
ಧನರಾಜ ದಿನಾ ಕೋರಮಂಗಲಕ್ಕೆ ಬರುವುದು ಇಲ್ಲ ಅನ್ನಿಸಿಕೊಂಡು ಹೋಗುವುದು ಆಗಿತ್ತು
ಹುಡುಗನ ಸ್ಟಿತಿ ಯಾವರೀತಿಯಾಗಿತ್ತೆಂದರೆ ಅವನ ರೂಮ ಮೇಟ್ಸ್ ಅವನು ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಅವನನ್ನು ರೂಮಿಂದ ಹೊರಗಡೆ ಹಾಕಿದ್ದರು . ಅಂದು ಬೆಳಗಿನಿಂದ ಆತ ಏನೂ ತಿಂದಿರಲಿಲ್ಲ . ಹುಡುಗ ಬಹಳ ಬೇಸರವಾಗಿದ್ದ .
"ಮೇಡಮ್ ಈ ಊರು ಬರೀ ಮೋಸ ಇಲ್ಲಿನ ಸಾವಾಸಾನೇ ಬೇಡ ನಾನು ಊರಿಗೆ ಹೋಗಿಬಿಡ್ತೀನಿ" ಎಂದು ಅತ್ತ
"ನನ್ನ ಮೇಲೆ ನಂಬಿಕೆ ಇದ್ದರೆ ಇನ್ನು ಎರೆಡು ದಿನ ಇಲ್ಲೇ ಇರು . ನಾನು ಟ್ರ್ಯ್ ಮಾಡ್ತೀನಿ. ಅಕಸ್ಮಾತ್ ಆಗಿಲ್ಲ ಅಂದ್ರೆ ನೀನು ಊರಿಗೆ ಹೋಗೊಕೆ ನಾನು ದುಡ್ಡು ಕೊಡ್ತೀನಿ ಆಮೇಲೆ ಹೋಗು "ಎಂದು ಹೇಳಿದೆ
ಆತನ ರೂಮ ಮೇಟ್ಸ್ ಜೊತೆ ಮಾತಾಡಿ ಆತನಿಗೆ ಇನ್ನೊಂದೆರೆಡು ದಿನ ಜಾಗ ಕೊಡಲು ಹೇಳಿದೆವು.
ಮಾರನೆಯ ದಿನ ಆ ಅಕೌಂಟ್ಸ್ ಆಫೀಸ್‌ರ್ ಜೊತೆ ಫೋನಿನಲ್ಲಿ ಮಾತಾಡಿದೆ
"ತಮ್ಮಲ್ಲಿ ಧನರಾಜ್ ಎಂಬ ಯಾವುದೇ ಕೆಲಸದವರಿಲ್ಲ . ಯಾರ ಸಂಬಳವನ್ನು ತಾನು ಬಾಕಿ ಉಳಿಸಿಕೊಂಡಿಲ್ಲ . ಎಲ್ಲರೂ ಸಂಬಳ ಪಡೆದಿದ್ದಾರೆ " ಎಂದೆಲ್ಲಾ ಆತ ಬಡಬಡಿಸಿದ
ಜೊತೆಗೆ ಇದು ನಮ್ಮ internal ವಿಷಯ ತಲೆ ಹಾಕಿದರೆ ಸುಮ್ಮನಿರುವ್ವುದಿಲ್ಲ ಎಂದೂ ಬೆದರಿಸಿದ
ನಮ್ಮ ಮುಂದಿನ ಗುರಿ ಆ ಬ್ರಾಂಚ್‌ನ ಹೆಡ್‍. ಆತ ತಲೆಯೇ ಕೆಡಿಸಿಕೊಳ್ಳಲಿಲ್ಲ
ಆತ ನಮ್ಮ ಎಂಪ್ಲಾಯಿ ಎನ್ನುವುದಕ್ಕೆ ಏನು ಪುರಾವೆ ಎಂದು ನನ್ನನ್ನೇ ಪ್ರಶ್ನಿಸಿದ . ಆ ಹುಡುಗನಿಗೆ ಐಡಿ ಕಾರ್ಡ್ ಸಹಾ ಕೊಟ್ಟಿರಲಿಲ್ಲ

ಕೊನೆಗೆ ನನ್ನ ಕೊನೆಯ ಅಸ್ತ್ರ ಪ್ರಯೋಗಿಸಿದೆ
"ಇದು ಹೀಗೆ ಮುಂದುವರೆದರೆ ನಿಮ್ಮ ಹೆಡ್ ಆಫೀಸಿಗೆ ಮೈಲ್ ಮಾಡ್ತೀನಿ. ಇಲ್ಲವಾದರೆ ಧನರಾಜ ಕೆಲಸ ಮಾಡಿದ ಕಂಪೆನಿಗೆ ದೂರು ಕೊಡುತ್ತೇನೆ" ಎಂಬ ಬಾಣ ಪ್ರಯೋಗಿಸಿದೆ
ಆತ ಕೊನೆಗೂ ಸುಸ್ತಾದ
"ಅಲ್ಲ ಮೇಡಮ್ ಈ ಐದು ಸಾವಿರಕ್ಕೆಲ್ಲಾ ಯಾಕೆ ಅಷ್ಟು ದೂರ ಹೋಗ್ತೀರಾ? ಸಾಲ್ವ್ ಮಾಡೋಣ ಬನ್ನಿ " ಎಂದ
"ನಾನು ಬರೋದಿಲ್ಲ ನಾಳೆ ಅವನ ಕೈಗೆ ಸಂಬಳ ಸೇರಬೇಕು ಇಲ್ಲವಾದರೆ ನಾನು ಹೇಳಿದ ಹಾಗೆ ಮಾಡೋಳೇ " ಎಂದು ಹೇಳಿ ಧನರಾಜನನ್ನು ನಮ್ಮ ಹುಡುಗನ ಜೊತೆ ಮಾಡಿ ಕಳಿಸಿದೆ.
ನಂತರದ ಅಎರೆಡು ದಿನದಲ್ಲಿ ಅವನ ಸಂಬಳ ಅವನಿಗೆ ಸಿಕ್ಕಿತು.

ಬೆಂಗಳೂರಿನಿಂದ ಬೇಸತ್ತಿದ್ದ ಧನರಾಜ್ ‍ನಿಗೆ ಮತ್ತೊಂದು ಕೆಲಸ ಕೊಡಿಸಿದೆ .
ಆತ ಬೆಂಗಳೂರು ಮೋಸ ಎನ್ನುವುದಿಲ್ಲ. ಮೇಡಮ್‍ನಿಂದ ಹೊಸ ಬದುಕು ದೊರೆಯಿತು ಎನ್ನುತ್ತಾನೆ .
ನಮ್ಮಲ್ಲಿ ಕೋರ್ಸ್ ಮುಂದುವರೆಸುತ್ತಿದ್ದಾನೆ.

ನಾನು ಹೀಗೆ ಮಾಡಿದೆ ಎನ್ನುವುದಕ್ಕಿಂತ ಬೆಂಗಳೂರಿನಲ್ಲಿ ಯಾವ್ಯಾವ ರೀತಿಯ ವಂಚನೆಗಳು ನಡೆಯುತ್ತಿವೆ ಎನ್ನುವುದು ಮುಖ್ಯ
ಈ ರೀತಿಯ ಅನ್ಯಾಯಗಳನ್ನು ಸಹಿಸುತ್ತಾ ಕೂರುವ ಧನರಾಜನಂತಹ ಹುಡುಗರನ್ನು ಎಚ್ಚರಗೊಳಿಸುವ ಕೆಲಸವಾಗಬೇಕಷ್ಟೆ.
ಗಮನಕ್ಕೆ ಬಾರದ ಘಟನೆಗಳೆಷ್ಟೋ ಇವೆ
ಒಂದೆಡೆ ಮುಂದುವರೆದ್ದಿದ್ದೇವೆ ಎನ್ನುವ ನಾವುಗಳು ಸಮಾಜದ ಆ ಇನ್ನೊಂದು ವರ್ಗ ಪಡುತ್ತಿರುವ ಕಷ್ಟವನ್ನು ಗ್ರಹಿಸುವುದು ಹೇಗೆ.

ನಿಮ್ಮೆಡೆ ಯಾರಾದರೂ ಈ ರೀತಿಯ ಸಮಸ್ಯೆಗಳನ್ನು ತಂದರೆ ದಯವಿಟ್ಟು ಪರಿಹರಿಸಿ ಇಲ್ಲವಾದಲ್ಲಿ roopablrao AT gmail DOT com ಗೆ ಮೈಲ್ ಮಾಡಿ ಎಲ್ಲರೂ ಒಟ್ತಿಗೆ ಪರಿಹರಿಸೋಣ

Rating
No votes yet

Comments