ದೇವಿ ಉಡುಸಲಮ್ಮನವರ ಜಾತ್ರೆ

ದೇವಿ ಉಡುಸಲಮ್ಮನವರ ಜಾತ್ರೆ

 

ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಹರಿಹರಪುರ ಗ್ರಾಮದ ದೇವಿ ಉಡುಸಲಮ್ಮ ದುರ್ಗಾಪರಮೇಶ್ವರಿಯ ಬಗ್ಗೆ  ಒಂದಿಷ್ಟು ಮಾಹಿತಿಗಳನ್ನು ಈ ಹಿಂದೆ ಸಂಪದದಲ್ಲಿ ಬರೆದಿದ್ದೆ. ಮೊನ್ನೆ ಹರಿಹರಪುರಕ್ಕೆ ಹೋಗಿದ್ದಾಗ ದೇವಿಯ ಮುಂದೆ ಹತ್ತಿರದಲ್ಲಿ ಕುಳಿತು ಪಂಚಾಮೃತಾಭಿಶೇಕ, ಕುಂಕುಮಾರ್ಚನೆ, ಮಂಗಳಾರತಿಯನ್ನು ನೋಡಿ ಆನಂದಿಸಿದ್ದೇನೆ. ಏರ್ ಫೋರ್ಸ್ ನ ನಿವೃತ್ತ ಅಧಿಕಾರಿಶೇಷಾದ್ರಿ ಅವರ ಪತ್ನಿಯೊಡನೆ ಬೆಂಗಳೂರಿನಿಂದ  ಬಂದಿದ್ದರು.ಅವರ ಪತ್ನಿ ರತ್ನ ಅವರ ಬಾಯಲ್ಲಿ ದೇವಿಯ ಮಹಿಮೆ ಬಗ್ಗೆ ಕೇಳಿದರೆ ಅವರು ಹೇಳುತ್ತಾ ಹೇಳುತ್ತಾ ಕಣ್ಣಲ್ಲಿ ನೀರುತುಂಬಿಕೊಳ್ಳುತ್ತಾರೆ. ಅವರ ಜೀವನದಲ್ಲಿ ಎಲ್ಲಾ ಉನ್ನತಿಗೂ ದೇವಿಯಕೃಪೆಯೇ ಕಾರಣವೆಂದು ಅವರ ದೃಢ ನಂಬಿಕೆ.ಶೇಷಾದ್ರಿ ಯವರು ಡಿಪ್ಲೊಮೊ ಮಾಡಿ ಟೆಕ್ನೀಶಿಯನ್ ಆಗಿ ಏರ್ ಫೋರ್ಸ್ ಸೇರಿದ್ದರಂತೆ. ನಂತರ ಏ.ಎಮ್.ಐ,ಇ ಮಾಡಿದ ಮೇಲೆ ಒಂದು ಉನ್ನತ ಹುದ್ಧೆಗೆ ನಡೆದ ಇಂಟರ್ ವ್ಯೂನಲ್ಲಿ ೧೦೪ ಅಭ್ಯರ್ಥಿಗಳಲ್ಲಿ ನಾಲ್ವರು ಆಯ್ಕೆಯಾಗುವಾಗ ಇವರಿಗೆ ಅದೊಂದು ಪವಾಡ ವೆಂದು ಹೇಳುತ್ತಾರೆ.ಕಾರಣ ಇವರಿಗಿಂತ ಅರ್ಹತೆ ಜಾಸ್ತಿ ಇರುವ ಅಭ್ಯರ್ಥಿಗಳಿದ್ದರೂ ಇವರಿಗೆ ಆ ಹುದ್ಧೆ ದಕ್ಕಿದ್ದು ದೇವಿಯ ಕೃಪೆಯೇ ಸರಿ ಎನ್ನುತ್ತಾರೆ. ಇವರ ಇಬ್ಬರು ಮಕ್ಕಳು ಅಮೇರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರುಗಳು. ಮನೆಮಂದಿಗೆಲ್ಲಾ ದೇವಿಯ ಮೇಲೆ ಅಗಾಧ ವಿಶ್ವಾಸ. ಅವರಿಂದ ಕೇಳಿದ್ದನ್ನು ಸಂಕೊಚವಿಲ್ಲದೆ  ಹೇಳಬೇಕಾದ್ದು ನನ್ನ ಧರ್ಮ. ಅಂತೂ ದೇವಿಯನ್ನು ನಂಬಿರುವ ಸಾವಿರಾರುಭಕ್ತರಿಗೆ ದೇವಿಯ ಜಾತ್ರೆ ನೋಡುವಾಸೆ. ಇದೇ ೨೧ ನೇ ತಾರೀಕು ಶನಿವಾರ.ಬೆಳಿಗ್ಗೆ ೮ ಕ್ಕೆಶುರುವಾಗುವ ಕೆಂಡ ಕೆಂಡೋತ್ಸವ, ಸಿಡಿಯಾಟ, ತೇರು, ಚೋಮನ ಕುಣಿತ, ಉತ್ಸವ,ಎಲ್ಲವೂ ಮುಗಿಯುವಾಗ ಮದ್ಯಾಹ್ನ ೧.೦೦ ಗಂಟೆ ಯಾಗಿರುತ್ತದೆ.

ಇದೊಂದು ಜಾನಪದ ಸೊಬಗು. ಭಕ್ತಿಯಮೆರಗು.ಹಳ್ಳಿಜನರಿಗೆ ಊರ ಹಬ್ಬ.ಹರಿಹರಪುರಕ್ಕೆ ಸೇರಿದ ಏಳುಹಳ್ಳಿಗಳ ಜನರಊರಹಬ್ಬ. ಮೂರು ಹಳ್ಳಿಗಳಿಂದ ಎಳೆದು ತರುವ ತೇರುಗಳು, ಏಳು ಬಂಡಿಗಳು, ಅವುಗಳ ಜೊತೆಗೂಡಿ ಬರುವ ಭಕ್ತಜನಸಾಗರ.

ಹರಿಹರಪುರ ತಲುಪುವುದು ಹೇಗೆ?

೧]ಬೆಂಗಳೂರಿನಿಂದ ಮದ್ಯಾಹ್ನ ೨.೦೦ ಗಂಟೆಗೆ ಹೊರಡುವ ಬೆಂಗಳೂರು-ಗೊರೂರು ಸರ್ಕಾರಿ ಬಸ್ ಹರಿಹರಪುರವನ್ನು ಸಂಜೆ ೭.೦೦ ಗಂಟೆಗೆ ಸೇರುತ್ತೆ.

೨] ಹೊಳೇನರಸೀಪುರಕ್ಕೆ ಎಮ್ಟು ಕಿಲೋಮೀಟರ್ ದೂರ. ಸಾಕಷ್ಟು ಬಸ್ಸುಗಳು, ಟೆಂಪೋಗಳು ಲಭ್ಯ

೩] ಹಾಸನದಿಂದ ೩೦ ಕಿಲೋಮೀಟರ್ ದೂರ. ಹೆಚ್ಚು ಸೌಕರ್ಯ ಬಯಸುವವರು ಹಾಸನದಲ್ಲಿ ತಂಗಿದ್ದು ಬೆಳಿಗ್ಗೆ ಸ್ನಾನ ಮುಗಿಸಿ ೭.೦೦ ಗಂಟೆಗೆ ಹಾಸನ ಬಿಟ್ಟರೂ ಸಕಾಲಕ್ಕೆ ಹರಿಹರಪುರ ತಲುಪ ಬಹುದು. ಹಾಸನದಿಂದ ಹೊಳೇನರಸೀಪುರ ಹೆದ್ದಾರಿಯಲ್ಲಿ ಹೊರಟಾಗ ಹಳೇಕೋಟೆ ಎಂಬಊರು ದಾಟುತ್ತಿರುವಾಗ ಎಡಕ್ಕೆ ಮಾವಿನಕೆರೆ ರಂಗನಾಥನ ಬೆಟ್ಟ ಕಾಣುತ್ತೆ.ಅದರ ಪಕ್ಕದಲ್ಲಿ ಅಂದರೆ ಹೆದ್ದಾರಿಯಿಂದ ಎಡಕ್ಕೆ ತಿರುಗಿದರೆ ಅದೂ ಒಂದು ಹೆದ್ದಾರಿಯೇ. ಅದು ದೇವೇಗೌಡರ ಹುಟ್ಟೂರಾದ ಹರದನಹಳ್ಳಿ ಮಾರ್ಗವಾಗಿ ಹರಿಹರಪುರ ತಲಪುತ್ತೆ.

ಬೆಂಗಳೂರು ಮತ್ತು ಹೊರ ಊರು ಗಳಿಂದ ಬರಲು ಅಪೇಕ್ಷಿಸುವವರು ಇದೇ ಬರಹದಡಿ ಪ್ರತಿಕ್ರಿಯೆ ಕಾಲಮ್ ನಲ್ಲಿ  ಬರೆದರೆ ಸೂಕ್ತ ವ್ಯವಸ್ತೆ ಮಾಡಲಾಗುವುದು.

ಸಿಡಿಜಾತ್ರೆ, ದೇವಿಯ ಮತ್ತು ಕೆಂಡಕೊಂಡ ಚಿತ್ರಗಳನ್ನು ಕೆಳಗಿನ ಕೊಂಡಿಯಲ್ಲಿ ನೋಡಬಹುದು.[ವರ್ಡ್ ಪ್ರೆಸ್ ಡಾಟ್ ಕಾಮ್ ನಲ್ಲಿ ಚಿತ್ರಗಳಿವೆ.]

http://sampada.net/user/hariharapurasridhar/content
www.hariharapurasridhar.wordpress.com
www.hariharapurasridhar.blogspot.com

http://sampada.net/files/images/100_1454.thumbnail.jpg

 

 

 

 

 

Rating
No votes yet

Comments