ನನ್ಗೂ ಹೀಗನ್ಸತಿದೆ ಇದೆ... ನಿಮ್ಗೆ ಏನನ್ಸುತ್ತೆ..?

ನನ್ಗೂ ಹೀಗನ್ಸತಿದೆ ಇದೆ... ನಿಮ್ಗೆ ಏನನ್ಸುತ್ತೆ..?

ಪತ್ರಿಕೆಗಳನ್ನು ನೋಡೋದಿಕ್ಕೆ ಭಯವಾಗ್ತಾ ಇದೆ.... ಟಿ.ವಿ. ನ್ಯೂಸ್ ಅಂದ್ರೆ ರೇಜಿಗೆ ಹುಟ್ತಾ ಇದೆ....

ಈ ವಿಷಯಗಳ ಬಗ್ಗೆ ತಲೆ ಕೆಡಿಸ್ಕೋ ಬಾರ್ದು ಅಂತಾನೆ ಇದ್ದೆ..

ಮೊನ್ನೆ ಹಳ್ಳಿಗೆ ಹೋಗೋವರ್ಗು...
ನಮ್ಮ ಹಳ್ಳಿಯ ಯುವ ನಾಯಕ್ರೊಬ್ಬರು ತಲೆಗೆ ಹುಳ ಬಿಡೋವರ್ಗೂ...

೫೦ ವರ್ಷಗಳ ಕರ್ನಾಟಕದ ಇತಿಹಾಸದಲ್ಲಿ ಯಾವ ಸರ್ಕಾರದ ಸಮಯದಲ್ಲೂ ಆಗದ ಇಂತಹ ಘಟನೆಗಳು ಬಿ.ಜೆ.ಪಿ. ಸರ್ಕಾರ ಮೊದಲ ಬಾರಿಗೆ ಪೂರ್ಣ ಪ್ರಮಾಣವಾಗಿ ಅದಿಕಾರ ವಹಿಸಿಕೊಂಡಾಗಲೇ ಯಾಕೆ ..? ಅಷ್ಟು ಕೋಮುವಾದಿಗಳೇ ಈ ಬಿ.ಜೆ.ಪಿ. ಯವರು...? ಭಾರತದ ಇನ್ನಿತರ ರಾಜ್ಯಗಳಲ್ಲಿ ಬಿ.ಜೆ.ಪಿ. ಸರ್ಕಾರಗಳು ಇದ್ರೂ .. ಅಲ್ಲಿ ನಡೆಯದ ಇಂತಹ ಘಟನೆಗಳು, ಕರ್ನಾಟಕದಲ್ಲೇ ಯಾಕೆ..?

ಬೇರೆ ರಾಜ್ಯದ ಬಿ.ಜೆ.ಪಿ ಗಳಲ್ಲಿರುವವರು ಬಹುತೇಕರು ಮೂಲ ಪಕ್ಷದವರು.. ಆದರೆ ಅಲ್ಲಿ ನಡೆಯದ ತಾಲೀಬಾನಿಕರಣ, ಕರ್ನಾಟಕದ ಬಿ.ಜೆ.ಪಿ ಯಲ್ಲಿ ಎಲ್ಲಾ ಪಕ್ಷಗಳ ಹೊಲಸನ್ನು ಸೇರಿಸಿಕೊಂಡು ಗಬ್ಬೆದ್ದು ಹೋಗಿದ್ದರೂ ಇಲ್ಲಿ ಮಾತ್ರ ತಾಲೀಬಾನೀಕರಣ ಹೇಗೆ ಸಾದ್ಯ...?

ಈ ಪ್ರಶ್ನೆಗಳ ಜೊತೆಗೆ ಆ ಯುವ ನಾಯಕ್ರು ಹೇಳಿದ್ದು ಇಷ್ಟು ತಲೆ ಕೆಡಿಸ್ಕೊಳ್ಳೊದಿಕ್ಕೆ ಕಾರಣ... ಅವ್ರು ಹೇಳಿದ್ದು ಬಿ.ಜೆ.ಪಿ ಯವರು ಅದಿಕಾರ ವಹಿಸಿಕೊಂಡಾಗ ಕೊಟ್ಟ ಒಂದು ಹೇಳಿಕೆ ಇಷ್ಟೆಲ್ಲಾ ಆಗುವುದಕ್ಕೆ ಕಾರಣ.
"ಗುಜರಾತ್ ಮಾದರಿಯಲ್ಲಿ ರಾಜ್ಯವನ್ನು ಅಬಿವ್ರುದ್ದಿ ಪಡಿಸುತ್ತೇನೆ."
ಇದರ ಜೊತೆಗೆ ಅಂದು ಮೋದಿಯ ಹಾಜರಾತಿ...
ಈ ಹೇಳಿಕೆ ಕಾರ್ಯ ರೂಪಕ್ಕೆ ಬಂದರೆ ಮುಂದೆ ಇನ್ಯಾವುದೇ ಪಕ್ಷಗಳು ಅದಿಕಾರದ ಹತ್ತಿರಕ್ಕೆ ಬರಲು ಸಾದ್ಯವಾಗುವುದಿಲ್ಲ. ಗುಜರಾತಿನಲ್ಲಿ ಆದಂತೆ.
so ಇಂತಹ ಅನಾಹುತ ತಪ್ಪಿಸಬೇಕೆಂದರೆ ಏನ್ ಮಾಡಬೇಕು...? ಸರ್ಕಾರಕ್ಕೆ ಅಬಿವ್ರುದ್ದಿಯ ಬಗ್ಗೆ ಯೋಚಿಸಲು ಬಿಡಬಾರದು.... ಸರ್ಕಾರ ಉಳಿಯಬಾರದು... ಅಂತಂದ್ರು.
ಬಿ.ಜೆ.ಪಿ ಅದಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದ ವಿದ್ಯಮಾನಗಳನ್ನು ಗಮನಿಸಿದಾಗ ನನ್ಗೂ ಹಾಗೆ ಅನ್ನಿಸ್ತಾ ಇದೆ.
ನಿಮ್ಗೆ ಏನ್ ಅನ್ಸುತ್ತೆ...

Rating
No votes yet