ನನ್ನವರಿಗೆ ಕನ್ನಡ ಕಲಿಸಿದ್ದು

ನನ್ನವರಿಗೆ ಕನ್ನಡ ಕಲಿಸಿದ್ದು

ನಾನು ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಅಪ್ಪಟ ಕನ್ನಡತಿ.
ನನ್ನವರೋ ಉಡುಪಿಯಿಂದ ವಲಸೆ ಹೋಗಿ ತಮಿಳುನಾಡಿಗೆ ಸೇರಿದ್ದ ಮಾಧ್ವರ ಸಂತತಿಯ ತುಂಡು.
ಅಲ್ಲಿಯೇ ಹುಟ್ಟಿ ಬೆಳೆದದ್ದರಿಂದ ತಮಿಳಿನ ಗಾಳಿ ಚೆನ್ನಾಗಿ ಆವರಿಗೆ ಚೆನ್ನಾಗಿಯೆ ಹೊಡೆದಿತ್ತು.
ನಮ್ಮದು ಪ್ರೇಮ ವಿವಾಹ.

ಪ್ರೀತಿಸುವಾಗ ಅವರ ತಮಿಳು ಮಿಶ್ರಿತ ಕನ್ನಡ ನನಗೆ ಏನೂ ಅನ್ನಿಸುತ್ತಿರಲಿಲ್ಲ.

ಮದುವೆಗೆ ಮುಂಚೆಯೇ ನಮ್ಮ ಅಮ್ಮ ಹೇಳಿದ್ದರು . ನಿನಗೆ ಅವರಿಗೆ ಕನ್ನಡದ ಬಗ್ಗೆ ಜಗಳ ಜಾಸ್ತಿ ಆಗುತ್ತದೆ ಎಂದು. ಆದರೆ ನಾನು ಒಪ್ಪಿರಲಿಲ್ಲ.

ಹಾಗೂ ಹೀಗೂ ಮದುವೆ ಮುಗಿದು ಅವರ ಮನೆಗೆ ಹೋದಾಗ ಪರಿಸ್ಠಿತಿಯ ಅರಿವು ಆಗಿತ್ತು. ಬರೀ ತಮಿಳು ಚಾನೆಲ್ , ತಮಿಳ್ ಹಾಡು .

ತಮಿಳಿನಲ್ಲಿ ಮಾತಾಡುತ್ತಿದ್ದಾರೊ ಅಥವ ಕನ್ನಡವೋ ಎಂದು ಅರಿವಾಗದ ಸ್ಥಿತಿ. ತಮಿಳು ನಾಡಿಗೆ ಬಂದುಬಿಟ್ಟೆನೋ ಎಂಬ ಗಾಭರಿ

"ಅಲ್ಲಿಗೊಂದು ವರೆ ಇಟ್ಟುಬಿಡು" ಎಂದರು ನಮ್ಮ ಅತ್ತೆ ಹಾಗೆಂದರೇನು ? ತಿಳಿಯಲಿಲ್ಲ ಆಮೇಲೆ ಅದು ಬಟ್ಟೆ ಎಂದು ಗೊತ್ತಯಿತು

"ನಂಗೆ ಹುಳಿ ಸಾರಲ್ಲ" ನಮ್ಮ ಭಾವ ಹೇಳಿದಾಗ ಗೊಂದಲ . "ನಮಗೂ ಅಷ್ಟೆ ಹುಳಿ ಸಾರಲ್ಲ ಅದೇ ಬೇರೆ ಇದೇ ಬೇರೆ " ಎಂದಿದ್ದೆ ನಾನು.
ನಮ್ಮ ವರು ಸಾರಲ್ಲ ಎಂದರೆ ಸೇರೊದಿಲ್ಲ ಎಂದು ಹೇಳಿದಾಗ ನಗು

ಸ್ವಲ್ಪ ಕಾಫಿ ಧೂಳು ಕಡಿಮೆ ಹಾಕು ಎಂದಿದ್ದರು ಇವರು. ಧೂಳು ಎಂದರೆ ಪುಡಿ ಎಂದು ತಿಳಿಯಿತು

ಹಾಗೆ ಗೂಡೆ, ವಾಟೆ ಏನೇನೂ ವಿಚಿತ್ರವದ ಕೇಳರಿಯದ ಶಬ್ದಗಳು.

ಮಾತು ಮಾತಿಗೆ ರಜನಿ, ಜಯಲಲಿತ, ಕರುಣಾನಿಧಿಯ ಮೆರೆಸುವಿಕೆ

ಆಗಲೇ ನಿರ್ಧರಿಸಿದೆ . ಹೇಗಾದರೂ ಮಾಡಿ ಇವರನ್ನು ಕನ್ನಡಿಗರನ್ನಾಗಿ ಮಾಡಬೇಕೆಂದು

ಒಮ್ಮೆ ಹಟ ಮಾಡಿ ಎರೆಡು ಕನ್ನಡ ಚಿತ್ರಗಳಿಗೆ ಕರೆದುಕೊಂಡು ಹೋಗಿದ್ದೆ. ನಂತರ ಮನೆಯಲ್ಲಿ ಗಲಾಟೆ ಮಾಡಿ ಉದಯ ಟಿ.ವಿ ಹಾಕುವಂತೆ ಮಾಡಿದ್ದೆ.
ನನ್ನ ಮಗಳು ಹುಟ್ಟಿದ ನಂತರ ಸ್ವಚ್ಚ ಕನ್ನಡ ಕಲಿತರೇ ಮನೆಗೆ ಬರುವುದಾಗಿ ಹೆದರಿಸಿದೆ.

ನಮ್ಮವರು ನಮ್ಮ ಅಮ್ಮನ ಬಳಿಯಲ್ಲಿ ಕನ್ನಡ ಕಲಿಯಲು ಬರುತ್ತಿದ್ದ ದಿನಗಳು ಈಗಲೂ ನೆನೆಪಿದೆ. ಆಗಲೇ ’ಮುಂಗಾರು ಮಳೆ’ ಯಾಗಿ ಕನ್ನಡದ ಹಾಡುಗಳು ಅತೀ ಮಧುರವಾಗತೊಡಗಿದವು. ಅವರ ಕನ್ನಡ ಆಸಕ್ತಿ ತೀವ್ರವಾಗತೊಡಗಿತು

ಈಗ ನನಗೆ ಆಶ್ಛರ್ಯವಾಗುವಂತೆ ಸ್ವಚ್ಚ ಕನ್ನಡದಲ್ಲಿ ದೊಡ್ಡ ದೊಡ್ಡ ಪದಗಳನ್ನು ನನ್ನ ಮುಂದಷ್ಟೆ ಅಲ್ಲ ಅವರ ನೆಂಟರ ಬಳಿಯೂ ಆಡುತ್ತಾರೆ.

ಅವರು ಕನ್ನಡ ಓದಲೂ ಬರೆಯಲೂ ಕಲಿತಿದ್ದಾರೆಂದು ತಿಳಿದಾಗ ತುಂಬ ಹೆಮ್ಮೆಯಾಯಿತು
ನಾನು ಕನ್ನಡದವನು ನಮ್ಮ ವಂಶದವರು ಇಲ್ಲೇ ಉಡುಪಿಯವರು ಎಂದು ಎದೆ ತಟ್ಟಿ ನುಡಿಯುವಾಗಲೆಲ್ಲಾ ನಾ ಹಿಡಿದ ಪಟ್ಟು ವ್ಯರ್ಥವಾಗಲಿಲ್ಲ ಎಂಬ ನೆಮ್ಮದಿ.
ಒಮ್ಮೊಮ್ಮೆ ನಾನೆ ಹಿಂದಿ ಸಿನಿಮಾ ನೋಡಿದಾಗಲೆಲ್ಲ " ನೀನು ಕನ್ನಡದವಳಾಗಲು ಲಾಯಕಿಲ್ಲ " ಎಂದು ರೇಗಿಸುತ್ತಾರೆ.
ಮೊನ್ನಿನ ಹೊಗೇನ್‌ಕಲ್ ಗಲಾಟೆ ಯಲ್ಲಿ ಅವರು ಸಮರ್ಥಿಸಿದ್ದು ನಮ್ಮನ್ನೇ.

Rating
No votes yet

Comments