ನವ ಸಂವತ್ಸರ ಭೂಮಿಗೆ ಬಂದು......................

ನವ ಸಂವತ್ಸರ ಭೂಮಿಗೆ ಬಂದು......................

ಬೇಂದ್ರೆಯವರ ಸುಪ್ರಸಿದ್ಧ "ಯುಗ ಯುಗಾದಿ ಕಳೆದರೂ........" ಕವನದ ಜೊತೆಗೆ, ಕುವೆಂಪು ಅವರ ಈ ಕವನವೂ ತುಂಬಾ ಸುಂದರವಾದ (ನನ್ನ ಮೆಚ್ಚಿನ) ಕವಿತೆಯಾಗಿದೆ. ಅದನ್ನು ಹಂಚಿಕೊಳ್ಳುತ್ತಿದ್ದೇನೆ ಸಂಪದಿಗರಲ್ಲಿ.......... ಎಲ್ಲರಿಗೂ ವಿರೋಧಿ ನಾಮ ಸಂವತ್ಸರದ ಯುಗಾದಿಯ ಶುಭಾಶಯಗಳು!!!!!

ಸುರಲೋಕದ ಸುರನದಿಯಲಿ ಮಿಂದು
ಸುರಲೋಕದ ಸಂಪದವನು ತಂದು
ನವ ಸಂವತ್ಸರ ಭೂಮಿಗೆ ಬಂದು
ಕರೆಯುತ್ತಿದೆ ನಮ್ಮನು ಇಂದು...ಪ....

ಮಾವಿನ ಬೇವಿನ ತೋರಣ ಕಟ್ಟು
ಬೇವು ಬೆಲ್ಲಗಳನೊಟ್ಟಿಗೆ ಕುಟ್ಟು
ಜೀವನವೆಲ್ಲ ಬೇವು-ಬೆಲ್ಲ
ಎರಡೂ ಸವಿಯನಿತ್ತವಿಯಲ್ಲ........೧

ಹೊಸಮರದಲಿ ಹೂವ್ ತುಂಬಿದೆ ನೋಡು
ಆಲಿಸು, ಆಲಿಸು ಆಲಿಸು ಆಲಿಸು
ಜೇನಿನ ಹಬ್ಬದ ಹಾಡು, ಹಾಡೂ, ಹಾಡೂ
ಜೀವನವೆಂಬುದು ಹೂವಿನ ಬೀಡು
ಕವಿಯದೆ ಹೆಜ್ಜೆ ನಿನಗೂಡು..........೨

ಕವಿಯೊಲ್ಮೆಯಕೋ ಧನ್ಯ ಯುಗಾದಿ
ಮರಳಲಿ ಇಂತಹ ನೂರು ಯುಗಾದಿ
ಇದೆಕೋ ಹೊಸವರುಷದ ಸವಿ ಮುತ್ತು
ಅದಕೊಂದಾಲಿಂಗನ ತುತ್ತು.........೩

ಈ ಹಾಡನ್ನು ಕೆಳಗಿನ ಕೊಂಡಿಯನ್ನು ಉಪಯೋಗಿಸಿ ಕೇಳಬಹುದು.
http://www.kannadaaudio.com/Songs/Bhaavageethe/home/AanandamayaEeJagahrudaya.php

Rating
No votes yet

Comments