ನಾವು ಕನ್ನಡಿಗರು ಯಾಕೆ ವಿಲನ್ ಆಗುತ್ತಿವಿ ಪ್ರತಿಬಾರಿ ??
ಇದು ನನಗೆ ಬಹಳ ಯಕ್ಷಪ್ರಶ್ನೆಯಾಗಿ ಕಾಡಿದೆ, ಮುಖ್ಯವಾಗಿ ಯಾರಿಗಾದರು ಉತ್ತರ ಕೊಡುವಾಗ.
ನಾವು ಏನು ಮಾಡಿದರು ಇತರರಿಗೆ ತಪ್ಪಾಗಿ ಕಾಣುತ್ತದೆ. ನಮ್ಮ ನೆಲ-ಜಲದ ಸಂರಕ್ಷಣೆ ನಮ್ಮ ಹಕ್ಕು ಅಲ್ಲವೇ ??. ನಾವು ಯಾಕೆ ಪ್ರತಿಯೊಬ್ಬರಿಗೂ ಉತ್ತರ ಕೊಡಬೇಕು ಅಂತ ನನ್ನನ್ನೆ ನಾನು ಕೇಳಿಕೊಂಡಿರುವೆ. ಇತರರಿಗೆ ಪರವಾಗಿಲ್ಲ, ಮಾಧ್ಯಮದ ಪ್ರಭಾವ ಇಲ್ಲಾ ಸುದ್ದಿಗಳ ತಪ್ಪು ತಿಳುವಳಿಕೆಗಳಿಂದ ಒಂದು ಅಭಿಪ್ರಾಯಕ್ಕೆ ಬರುತ್ತಾರೆ. ಆದರೆ ನಮ್ಮ ಕನ್ನಡಿಗರಿಗೆ ಏನಾಗಿದೆ, ನಮ್ಮ ಜನರೇ ನಮ್ಮ ಕಾಲು ಎಳೆದರೆ ಹೇಗೆ.
ಕಾವೇರಿ ವಿಷಯ ಇರಬಹುದು, ನಮ್ಮ ರೈತರಿಗೆ ನೀರಿಲ್ಲ, ಒಂದು ಬೆಳೆಯು ತೆಗೆದಿಲ್ಲ ನೀರು ಹೇಗೆ ಬಿಡುವುದು ಅಂತ ಕೇಳಿದರೆ ವಿಲನ್ ಆದೆವು. ಎಲ್ಲರು ನಮಗೆ ಬುದ್ದಿವಾದ ಹೇಳುವವರೆ.
ಚಿತ್ರಾವತಿ ಆಣೆಕಟ್ಟಿನ ವಿಷಯ ಬಂದಾಗ, ಅನಂತಪುರ ಎಂ.ಎಲ್.ಎ ದಿ|| ಪೆರಕಾಲ್ ರವಿ ದೌರ್ಜನ್ಯವಿದ್ದರು ಲೆಕ್ಕಿಸದೆ ಹೊರಾಡಿದರು, ಎಲ್ಲರ ದೃಷ್ಟಿಯಲ್ಲಿ ವಿಲನ್ ಆದೆವು.
ಕಳೆದ ವರ್ಷ ಚಿತ್ರೊದ್ಯಮ ಸಮಸ್ಯೆ ಬಂದಾಗಲು ಅಷ್ಟೆ, ಪಿ.ಎಂ ಕೂಡ ನಮಗೆ ಬುದ್ಧಿವಾದ ಹೇಳುವ ಮಟ್ಟಿಗೆ ಬಂದರು.
ಒ.ಎನ್.ಜಿ.ಸಿ ಸಿಗಬೇಕಾದರೆ ಇನ್ನು ಬವಣೆ ತಪ್ಪಿಲ್ಲ,
ನೆರೆಪರಿಹಾರ ಸರಿಯಾಗಿ ಸಿಕ್ಕಿಲ್ಲ,
ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಕ್ಕಿಲ್ಲ ..ಹೀಗೆ ಪಟ್ಟಿ ಬೆಳೆಯುತ್ತಲೆ ಇದೆ.
ಯಾಕೆ ಈ ಮಲತಾಯಿ ಧೊರಣೆ ??
ಹೀಗೆ ಆಗಲು ನನ್ನ ಅನಿಸಿಕೆ ..
೧) ಕೇಂದ್ರದಲ್ಲಿ ನಮ್ಮ ಹಿಡಿತ ಇಲ್ಲದಿರುವುದು
೨) ಕನ್ನಡಿಗರ ರೊಷ ಇಲ್ಲದಿರುವುದು.
೩) ಕನ್ನಡಿಗರು ತಮ್ಮನ್ನು ತಾವು ಶಾಂತಿ ಪ್ರಿಯರು,ಸಹಿಷ್ಣುರು ಅಂತ ಭಾವಿಸಿ ಹೇಡಿಗಳಾಗಿರುವುದು.
೪) ನಮ್ಮ ಸಂಸ್ಕೄತಿ ಬಗ್ಗೆ ನಿರಾಭಿಮಾನ.
೫) ನಮ್ಮ ನಾಯಕರ ರಾಜಕೀಯ ಇಚ್ಚಾಶಕ್ತಿ.
"ಅಳುವ ಮಗುವಿಗೆ ಹಾಲು" ಎಂಬುದನ್ನು ಮರೆಯಬಾರದು. ಅದರೆ ಹೋರಾಟವೇ ಜೀವನ ಆಗಬಾರದು ಅಷ್ಟೆ.
Comments
ಉ: ನಾವು ಕನ್ನಡಿಗರು ಯಾಕೆ ವಿಲನ್ ಆಗುತ್ತಿವಿ ಪ್ರತಿಬಾರಿ ??