ನೇತ್ರ ಚಿಕಿತ್ಸೆಯಲ್ಲೂ ಐಫೋನ್ ಬಳಕೆ !

ನೇತ್ರ ಚಿಕಿತ್ಸೆಯಲ್ಲೂ ಐಫೋನ್ ಬಳಕೆ !

ಐಫೋನ್‌    


ಮಾಹಿತಿ ತಂತ್ರಜ್ಞಾನ ಬಳಕೆಯಾಗದ ಕ್ಷೇತ್ರಗಳೇ ಉಳಿದಿಲ್ಲ. ಆರೋಗ್ಯ ಕ್ಷೇತ್ರದಲ್ಲಂತೂ ಒಂದಿಲ್ಲೊಂದು ಹಂತದಲ್ಲಿ ತಂತ್ರಜ್ಞಾನದ ಬಳಕೆ ನಡೆಯುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಐಫೋನ್ ತಂತ್ರಜ್ಞಾನ.
ಇದು ಐಟುಐ ಟೆಲಿಸೊಲ್ಯುಷನ್ಸ್ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ. ಆರೋಗ್ಯ ಕ್ಷೇತ್ರದ ನೇತ್ರ ಚಿಕಿತ್ಸಾ ವಿಭಾಗದಲ್ಲಿ ಈ ತಂತ್ರಜ್ಞಾನ ಬಳಕೆಯಾಗಲಿದೆ. ಟೆಲಿಮೆಡಿಸಿನ್ ತಂತ್ರಜ್ಞಾನದ ಮುಂದುವರಿದ ಭಾಗ ಇದು. ಇದಕ್ಕೆ ಇಂಟರ್‌ನೆಟ್ ಅಥವಾ ಲ್ಯಾಪ್‌ಟಾಪ್ ಬಳಕೆ ಅವಶ್ಯಕತೆ ಇಲ್ಲ. ವೈದ್ಯರ ಮೊಬೈಲ್ ಫೋನ್‌ಗೆ ಈ ತಂತ್ರಜ್ಞಾನ ಅಳವಡಿಸಿಕೊಂಡರೆ ಸಾಕು. ಎಲ್ಲೇ ಇದ್ದರೂ ರೋಗಿಗಳ ಚಿಕಿತ್ಸೆಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡಬಹುದು.
ಐಟುಐ ಟೆಲಿಸೊಲ್ಯುಷನ್ಸ್‌ನ ಈ ಐಫೋನ್ ತಂತ್ರಜ್ಞಾನವನ್ನು ಮೊದಲು ಬಳಕೆ ಮಾಡ್ತಿರೋದು ಬೆಂಗಳೂರಿನ ನಾರಾಯಣ ನೇತ್ರಾಲಯ. ಟೆಲಿಮೆಡಿಸಿನ್ ತಂತ್ರಜ್ಞಾನಕ್ಕಿಂತ ಇದು ಬಹಳ ಸುಲಭವಾಗಿ ಬಳಸಬಹುದು. ರೋಗಿಗಳನ್ನು ಬಹಳ ಹೊತ್ತು ಕಾಯಿಸಬೇಕಾಗಲ್ಲ. ಗ್ರಾಮೀಣ ಮಕ್ಕಳ ನೇತ್ರ ಚಿಕಿತ್ಸೆ, ಅದರಲ್ಲೂ ಚಿಕ್ಕಮಕ್ಕಳ ನೇತ್ರದೋಷ ಅಂದ್ರೆ ರೆಟಿನೋಪತಿ ಆಫ್ ಪ್ರೀಮೆಚುರಿಟಿ ಮತ್ತು ಇತರೆ ಸಮಸ್ಯೆ ನಿಭಾಯಿಸಲು ಈ ತಂತ್ರಜ್ಞಾನ ಸಹಕಾರಿ ಆಗಲಿದೆ.
ನಾರಾಯಣ ನೇತ್ರಾಲಯದ ತಜ್ಞರು ಇದುವರೆಗೆ ಸ್ಟೋರ್ ಅಂಡ್ ಫಾರ್ವಡ್ ತಂತ್ರಜ್ಞಾನ ಬಳಸುತ್ತಿದ್ದರು. ಇದು ಬಹಳ ನಿಧಾನಗತಿಯ ಪ್ರೋಸಸ್. ಐಫೋನ್ ತಂತ್ರಜ್ಞಾನ ಇದಕ್ಕೆ ಪರಿಹಾರ ಒದಗಿಸಿದೆ. ಇನ್ಮೇಲೆ ತಜ್ಞ ನೇತ್ರ ವೈದ್ಯರ ಲೈವ್ ಸೇವೆಯನ್ನು ಗ್ರಾಮೀಣ ವೈದ್ಯಕೀಯ ಸೇವಾವಲಯ ಪಡೆಯಬಹುದು. ಇಂತಹ ಐಫೋನ್ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರದ ಇತರೆ ವಿಭಾಗದಲ್ಲೂ ಬಳಕೆಯಾಗಬೇಕು ಅನ್ನೋದು ಎಲ್ಲರ ಅಭಿಲಾಷೆ.

Rating
No votes yet