ಬೋಳುತಲೆಯವನ ಪಾಡು

ಬೋಳುತಲೆಯವನ ಪಾಡು

[ ಕನ್ನಡ ಗ್ರಹದ ಓದುಗರಲ್ಲಿ ಕ್ಷಮೆ ಕೋರುತ್ತ, ಹಾಡಿದ್ದೆ ಹಾಡುವ ಕಿಸುಬಾಯಿ ದಾಸನ ಹಾಗೆ ಹಿಂದೆ ಬರೆದು ಬೇರಲ್ಲಿ ಹಾಕಿದ್ದನ್ನು ಮತ್ತೆ ಇಲ್ಲಿ ಹಾಕುತ್ತಿದ್ದೇನೆ - ವೆಂ. ]

ಬೋಳುತಲೆಯ ಪುರುಷನೊಬ್ಬ ತಲೆಗೆ ಬಿಸಿಲು ತಾಗಲು
ತಾಳೆಮರದ ಬುಡದಲ್ಲಿನ ನೆರಳಿನಲ್ಲಿ ನಿಲ್ಲಲು
ಬೀಳಲೊಂದು ದೊಡ್ಡ ಹಣ್ಣು ತಲೆಯು ಒಡೆದು ಸತ್ತನು;
ಹಾಳು ವಿಧಿಯು ಬೆನ್ನುಹಿಡಿದು ಹೋದಲ್ಲೆಲ್ಲ ಬರುವುದು.

ಭರ್ತೃಹರಿಯ 'ಖಲ್ವಾಟೋ ದಿವಸೇಶ್ವರಸ್ಯ ಕಿರಣೈಃ ...'ದ ಅನುವಾದ; ಎಲ್ಲಿಯೊ ಓದಿದ ನೆನಪು; ಮಿತ್ರರ 'ಛಂದೋಮಿತ್ರ'ದಲ್ಲಿಯೊ, ತೀನಂಶ್ರೀ ಅವರ 'ಬಿಡಿ ಮುತ್ತು'ವಿನಲ್ಲಯೊ, ಅಥವಾ ಬೇರೆಲ್ಲಿಯೊ, ಈಗ ನೆನಪಿಲ್ಲ

Rating
No votes yet