ಮಜ್ಜಿಗೆ ರಾಮಾಯಣ

ಮಜ್ಜಿಗೆ ರಾಮಾಯಣ

ಬಾಲ್ಯದಲ್ಲಿ ನಾನು ಕೇಳಿದ ಕುತೂಹಕರ ಪದ್ಯಗಳಲ್ಲಿ ಎರಡು ಪದ್ಯಗಳನ್ನು ಇಲ್ಲಿ ಬರೆಯುತ್ತಿದ್ದೇನೆ.

ಇವುಗಳ ರಚನೆಯ ಹಿಂದೆ ಒಂದು ಕಥೆ ಇದೆ ಎನ್ನುತ್ತಾರೆ.

ಒಮ್ಮೆ ದಾಸರೊಬ್ಬರು ಭಿಕ್ಷೆಗಾಗಿ ಒಮ್ದು ಅಜ್ಜಿಯ ಮನೆಗೆ ಹೋಗುತ್ತಾರೆ. ಆಕೆ ಭಿಕ್ಷೆ ಏನೂ ಇಲ್ಲವೆನ್ನುತ್ತಾಳೆ. ಕೊನೆಗೆ ಹೋಗಲಿ ಸ್ವಲ್ಪ ಮಜ್ಜಿಗೆಯಿದೆ ಕೊಡಲೇ ಎನ್ನುತ್ತಾಳೆ. ದಾಸರು ಆಗಲಿ ಎನ್ನುತ್ತಾರೆ. ಅರೆಲೋಟದಷ್ಟಿದ್ದ ಮಜ್ಜಿಗೆಯನ್ನು ಕೊಡಬೇಕಾದರೆ ನೀನು ರಾಮಾಯಣವನ್ನೋ, ಭಾಗವತವನ್ನೋ ಇಲ್ಲ ಮಹಾಭಾರತವನ್ನೋ ಹೇಳಬೇಕು ಎನ್ನುತ್ತಾಳೆ. ಆಗ ದಾಸರು ಈ ಕೆಳಗಿನ ನಾಲ್ಕು ಸಾಲುಗಳ ರಾಮಾಯಣ ವಾಚನವನ್ನು ಮಾಡುತ್ತಾರೆ. ಅವಳ ಅರೆಲೋಟಮಜ್ಜಿಗೆಯಷ್ಟೇ ಪುಟ್ಟದಾದ ರಾಮಾಯಣ-ಮಜ್ಜಿಗೆ ರಾಮಾಯಣ!

ಇಂತಹುದೇ ಸಂಕ್ಷಿಪ್ತ ಮಹಾಭಾರತ ಹಾಗೂ ಭಾಗವತಗಳಿವೆಯಂತೆ. ಭಾಗವತವನ್ನು ಇಲ್ಲಿ ಕೊಟ್ಟಿದ್ದೇನೆ. ಮಹಾಭಾರತ ಇದ್ದರೆ, ಅದನ್ನು ತಿಳಿದವರು ದಯವಿಟ್ಟು ಇಲ್ಲಿ ಬರೆದು ತಿಳಿಸಿ.

ಮಜ್ಜಿಗೆ ರಾಮಾಯಣವನ್ನು ಅನುವಾದ ಮಾಡಲು ಹೊರಟೆ. ಆದರೆ ಅನುವಾದವಾಗಲೇ ಇಲ್ಲ. ಕೇವಲ ಸಂಸ್ಕೃತ ಶಬ್ಧಗಳಲ್ಲಿದ್ದ ಅನುಸ್ವಾರವನ್ನು ತೆಗೆದು, ಅವನ್ನು ಕನ್ನಡ ಪದಗಳೆನ್ನಲು ಮನಸ್ಸು ಬಾರದಾಗಿದೆ. ಯಾರಾದರೂ ಇವನ್ನು ಅಚ್ಚ ಕನ್ನಡದಲ್ಲಿ ಅನುವಾದ ಮಾಡಿದರೆ ಸಂತೋಷ. 

ಮಜ್ಜಿಗೆ ರಾಮಾಯಣ 

ರಾಮತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ|
ವಾಲೀ ನಿರ್ದಲನಂ ಸಮುದ್ರ ತರಣಂ ಲಂಕಾಪುರೇ ದಾಹನಂ
ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ಧಿ ರಾಮಾಯಣಂ||

ರಾಮ ತಪೋವನದೆಡೆಗಭಿಗಮನ ಕಾಂಚನ ಮೃಗ ಹನನ 
ವೈದೇಹೀ ಹರಣ ಜಟಾಯು ಮರಣ ಸುಗ್ರೀವ ಸಂಭಾಷಣ 
ವಾಲಿಯ ಮಾರಣ ಸಮುದ್ರ ಲಂಘನ ಲಂಕಾನಗರ ದಹನ 
ನಂತರ ರಾವಣ ಕುಂಭಕರ್ಣ ನಾಶನ ಇದುವೇ ರಾಮಾಯಣ 

ದೇವಕಿದೇವಿ ಗರ್ಭ ಜನನಂ ಗೋಪಿ ಗೃಹೇ ವರ್ಧನಂ
ಮಾಯಾಪೂತನೀ ಜೀವಿತಾಪಹಾರಣಂ ಗೋವರ್ಧನೋದ್ಧಾರಣಂ|
ಕಂಸಕ್ಷೇಧನ ಕೌರವಾದಿ ಹನನಂ ಕುಂತೀಸುತ ಪಾಲನಂ
ಏತದ್ಧಿ ಮಹಾಭಾಗವತ ಪುರಾಣ ಪುಣ್ಯ ಖಚಿತಂ ಶ್ರೀಕೃಷ್ಣ ಲೀಲಾಮೃತಂ||

ದೇವಕಿ ಗರ್ಭದಿ ಜನನ ಗೋಪಿಯರ ಮನೆಯಲಿ ವರ್ಧನ
ಮಾಯಾ ಪೂತನಿಯ ಜೀವಿತಾಹರಣ ಗೋವರ್ಧನ ಉದ್ಧರಣ
ಕಂಸನ ಮಾರಣ ಕೌರವಾದಿ ಹನನ ಕುಂತೀಸುತರ ಪಾಲನ
ಇದುವೇ ಮಹಾ ಭಾಗವತ ಪುರಾಣ ಪುಣ್ಯ ಖಚಿತ ಶ್ರೀಕೃಷ್ಣಲೀಲಾಮೃತ

ಸಂಗ್ರಹ 

-ನಾಸೋ

www.yakshaprashne.org 

http://hompag.tripod.com/rama02.jpg 

Rating
No votes yet

Comments