ಮುಖವಾಡ ಧರಿಸಿದ ಹೇಡಿ ನಾ
ಮುಖವಾಡ ಧರಿಸಿರುವೆ ನಾ
ಮೇಲಿನ ಮುಖ ಅಪರಿಚಿತ
ಒಳಗೆ ನಡೆದಿದ್ದೆಲ್ಲಾ ಚಿರಪರಿಚಿತ
ಹೇಡಿ ನಾ , ವಿಷ ಸತ್ಯದ ಅರಿವಿದ್ದೂ
ಬಾಯಿ ಬಿಡಲಾರದ ಮತಿಗೇಡಿ ನಾ
ವಿಷ ಸತ್ಯ ಗಂಟಲಲ್ಲಿ ಸುಡುತಿದೆ
ಹೊರ ಹೋಗಲಾರದೆ ಒಳ ನುಂಗಲಾರದೆ
ಕಣ್ಣೀರಾಚೆ ಅಡಗಿದ ಸಾವಿರ ನಿಜ
ಬಯಲಾಗುವುದಾದರದು ಹೇಗೆ?
ದುರಳರ ಅಟ್ಟಹಾಸದ ಮೇಲಿನ
ವೇಷವೇ ಈ ಭೋರ್ಗರೆವ ರೋಧನ
ತಿಳಿದರೂ ತಿಳಿಯದ ನಟನೆಯ ಲೇಪನ
ಹೀನ ಬಾಳಿದು ಎಲ್ಲಕೂ ಅಳುಕಿ
ಮತ್ತೊಮ್ಮೆ ಹೆದರಿ ಬೆದರಿ
ಬದುಕುವ ಈ ಜೀವಕೆ ಧಿಕ್ಕಾರ
ವೀರಾವೇಶದ ಮಾತೆಲ್ಲಾ
ಈಗೆಲ್ಲಿ ಬರೀ ಶೂನ್ಯ
ಎಲ್ಲರಿಗೂ ತಿಳಿದಿರುವ ರಹಸ್ಯ
ಬಾಯಿ ಬಿಟ್ಟರೆ ಬದುಕೇ ಘೋರ
ಇದು ಬರೀ ಸಾವಲ್ಲ ಸತ್ಯದ ಜೀವಂತ ದಹನ
ದುಷ್ಟರ ಆಟಕೆ ಮತ್ತೂಂದಿಷ್ಟು ಆಹ್ವಾನ
ಹೇಳುವುದಾರಿಗೆ , ಹೇಳಿದರೂ
ಬೆಲೆಯುಂಟೆ , ನಮ್ಮ ಕೂಗಿಗೆ
ಮೇಲೆ ನಗುವಿನ ಮುಖವಾಡ
ಅರಿವಿದ್ದರೂ ಹಂತಕರ ಕೈವಾಡ
Rating
Comments
ಉ: ಮುಖವಾಡ ಧರಿಸಿದ ಹೇಡಿ ನಾ
In reply to ಉ: ಮುಖವಾಡ ಧರಿಸಿದ ಹೇಡಿ ನಾ by asuhegde
ಉ: ಮುಖವಾಡ ಧರಿಸಿದ ಹೇಡಿ ನಾ
In reply to ಉ: ಮುಖವಾಡ ಧರಿಸಿದ ಹೇಡಿ ನಾ by roopablrao
ಉ: ಮುಖವಾಡ ಧರಿಸಿದ ಹೇಡಿ ನಾ
In reply to ಉ: ಮುಖವಾಡ ಧರಿಸಿದ ಹೇಡಿ ನಾ by asuhegde
ಉ: ಮುಖವಾಡ ಧರಿಸಿದ ಹೇಡಿ ನಾ