ಲಿನಕ್ಸಾಯಣ - ೪೩ - ಚಿತ್ರ ಬಿಡಿಸುತ ಕಲಿತ ಗ್ನು/ಲಿನಕ್ಸ್

ಲಿನಕ್ಸಾಯಣ - ೪೩ - ಚಿತ್ರ ಬಿಡಿಸುತ ಕಲಿತ ಗ್ನು/ಲಿನಕ್ಸ್

ಗ್ನು/ಲಿನಕ್ಸ್ ಹೇಳ್ಕೊಡ್ಬೇಕಾದ್ರೆ, ತಲೆಯಿಂದ ಬುಡದವರೆಗೆ ಎಲ್ಲವನ್ನೂ ಸರಿಯಾಗಿ ಜೋಡಿಸ್ಲಿಕ್ಕೆ ಇತರರಿಗೂ ಸಾಧ್ಯವಾಗುವಂತೆ ಮಾಡ್ಬೇಕು. 

ಯಾಕೆ ಕಂಪ್ಯೂಟರ್ ಶುರುವಾಗೋದನ್ನ ಬೂಟಿಂಗ್ ಅಂತಾರೆ, ಬಯೋಸ್ ಅಂದ್ರೆ ಏನು? ಅದಾದ ನಂತರ ಸಿಸ್ಟಂನಲ್ಲಿರೋ ಹಾರ್ಡ್ ಡಿಸ್ಕ್ ಹ್ಯಾಗೆ ಕೆಲಸ ಮಾಡತ್ತೆ ಇಂದ, ಮನೇಲೆ ಅನೇಕ ಕೆಲಸಗಳನ್ನ ಮಾಡ್ಕೊಳ್ಲಿಕ್ಕೆ ಸರ್ವರ್ಗಳನ್ನು ಹೇಗೆ ಗ್ನು/ಲಿನಕ್ಸ್  ಮೇಲೆ ಇನ್ಸ್ಟಾಲ್ ಮಾಡಿ ಉಪಯೋಗಿಸೋದು ಅಂತ ತೋರಿಸೋವರ್ಗೆ ಎಲ್ಲದಕ್ಕೂ ಎಲ್ಲವೂ ಸಂಭಂದಿತವಾಗಿಯೇ ಇರುತ್ತೆ. ನಿಮ್ಮ ಬ್ರೌಸರ್ ನಲ್ಲಿ sampada.neಟೈಪ್ ಮಾಡಿ ಅದು ನಿಮಗೆ ಬೇಕಾದ ಸಂಪದದ ಪೇಜ್ ಓಪನ್ ಆಗ್ಬೇಕಾದ್ರೂ ನಿಮ್ಮ ಗ್ನು/ಲಿನಕ್ಸ್ ಸಿಸ್ಟಂನ ಕರ್ನೆಲ್, ಅದ್ರಲ್ಲಿನ ನೆಟ್ವರ್ಕ್ ಅನ್ನೋ ಸಬ್ ಸಿಸ್ಟಂ, ನೆಟ್ವರ್ಕ್ ಕಾನ್ಫಿಗರೇಷನ್, ಡಿ.ಎನ್.ಎಸ್ ಎಂಬ ಐ.ಪಿ ಅಡ್ರೆಸ್ ಅನ್ನು ಹೆಸರಿಗೆ, ಹೆಸರನ್ನು ಐ.ಪಿ ಅಡ್ರೆಸ್ ಗೆ ತಿರುವಿ ಕೊಡುವ ಸರ್ವರ್, ವೆಬ್ ಪೇಜ್ ಕೊಡುವ ಅಪಾಚೆ (Apache) ಹೀಗೆ ನೂರೊಂದು ವಿಷಯಗಳನ್ನ ಗ್ನು/ಲಿನಕ್ಸ್ ಬಗ್ಗೆ ಹೇಳ್ಬೇಕಾದ್ರೆ ತಿಳ್ಕೊಬಹುದು.

ಕಲಿಯುವವರ ತಲೆಗೆ ತುಂಬಿದ ನಂತರ, ಏನು ಕಲಿತಿರಿ ಅಂತೊಮ್ಮೆ ತಿಳಿಸ್ಕೊಡುವ ನನ್ನ ಕೆಲಸದ ಮಧ್ಯೆ ಉದ್ಭವಿಸಿದ ಈ ಚಿತ್ರ.

 

img_2595

 

ಇದರಲ್ಲಿ ನನ್ನ ಕಂಪನಿಗೆ ಕೆಲಸ ಮಾಡಲು ಶುರು ಮಾಡುವ ಮುನ್ನ ತಿಳಿದಿರಬೇಕಾದ ಎಲ್ಲ ವಿಷಯಗಳ ಪಟ್ಟಿ, ಯಾವುದಕ್ಕೆ ಯಾವುದು ಸಂಭಂದಿಸಿದೆ ಅನ್ನೋದನ್ನ ಹೇಳಲಿಕ್ಕೆ ಪ್ರಯತ್ನ ಪಟ್ಟೆ.

 ನೀವೂ ಇತರರಿಗೆ ಗ್ನು/ಲಿನಕ್ಸ್ ಹೇಳ್ಕೊಡ್ಬೇಕಾದ್ರೆ ಇಂತಹದ್ದೇನಾದ್ರೂ ಕಂಡಿತ್ತಾ ತಿಳಿಸಿ. 

Rating
No votes yet