ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?
ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ
ದುಃಖವನು ನಾನರಿತರೂ ಹೇಗೆ ಹಂಚಿಕೊಳ್ಳಲಿ
ಅವರಿಗೆ ಅಲ್ಲಾದ ನಷ್ಟವನು ಅವರಷ್ಟೇ ಅರಿವರು
ನಮ್ಮ ನುಡಿಗಳಿಂದ ಆ ನೋವನೆಂತು ಮರೆವರು
ಆತ್ಮವಿಲ್ಲದ ದೇಹಕ್ಕೆ ಎಲ್ಲಾ ಮಂದಿ ನಮಿಸುವರು
ದೇಹಕ್ಕೆ ನಮಿಸಿದರೆ ಅಲ್ಲಿ ಇದ್ದವರಷ್ಟೇ ಅರಿವರು
ಶವ ಯಾರದ್ದೇ ಆದರೂ ಮನವ ಕರಗಿಸುವುದು
ನಮ್ಮಂತ್ಯದ ಚಿತ್ರವನು ಮನದಿ ಬಿಂಬಿಸುವುದು
ಆ ಅರೆಗಳಿಗೆ ಮನಸ್ಸು ಮುದುಡುವುದಷ್ಟೇ ನಿಜ
ಮತ್ತಿತ್ತ ಬಂದರೆ ಮರೆತು ಹೋಗುವುದೆಲ್ಲ ಸಹಜ
ಆ ಚಿತ್ರಗುಪ್ತನಿಗೆ ಈ ಸಾವುಗಳೆಲ್ಲ ಯಾವ ಲೆಕ್ಕ
ಆತನಿಗೋ ಈ ಹುಟ್ಟು ಸಾವುಗಳೆಲ್ಲ ಬರಿಯ ಲೆಕ್ಕ
ನಮ್ಮ ಈ ಜೀವನದಲ್ಲಿ ನಮ್ಮದೆಂದು ಏನಿಲ್ಲ ಪಕ್ಕಾ
ಶೂನ್ಯದಲೇ ಮುಗಿಯುವುದೀ ಕೂಡು ಕಳೆಯುವ ಲೆಕ್ಕ
*****
ಆತ್ರಾಡಿ ಸುರೇಶ ಹೆಗ್ಡೆ
"ನನ್ನ ಸಹೋದ್ಯೋಗಿಯೋರ್ವರ ತಾಯಿ ನಿನ್ನೆ ರಾತ್ರಿ ಸ್ವರ್ಗಸ್ಥರಾದರು.
ಇಂದು ಮುಂಜಾನೆ ಅಂತಿಮ ದರ್ಶನ ಪಡೆದು ಹಿಂತಿರುಗಿದಾಗ
ಆಸುಮನದಲ್ಲಿ ಮೂಡಿದ ಭಾವನೆಗಳು ಅಕ್ಷರರೂಪ ಪಡೆದದ್ದು ಹೀಗೆ"
Rating
Comments
ಉ: ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?
ಉ: ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?
ಉ: ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?
ಉ: ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?
ಉ: ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?
ಉ: ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?
ಉ: ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?