ಸ್ಲಂಡಾಗ್ ಬಗ್ಗೆ ನನ್ನ ಅನಿಸಿಕೆ ತಪ್ಪಾಯಿತು..

ಸ್ಲಂಡಾಗ್ ಬಗ್ಗೆ ನನ್ನ ಅನಿಸಿಕೆ ತಪ್ಪಾಯಿತು..

ಕೆಲವು ದಿನಗಳ ಹಿಂದೆ ಸಂಪದದಲ್ಲಿ slum dog ಬಗ್ಗೆ ಪ್ರಸಾದ್ ವಿಮರ್ಶೆ ಬರೆದಿದ್ದರು http://www.sampada.net/blog/rennie606/02/02/2009/16364

ಅದಕ್ಕೆ ನಾನೂ ಪ್ರತಿಕ್ರಿಯೆ ಸೇರಿಸಿ ನಮ್ಮ ಭಾರತವನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬುದಕ್ಕೆ ಸಹಮತವನ್ನೂ ವ್ಯಕ್ತಪಡಿಸಿದ್ದೆ...

ಆದರೆ ಆಗ ನಾನು ಈ ಸಿನಿಮಾ ನೋಡಿರಲಿಲ್ಲಾ..

ಆದರೆ ಈಗ ನೋಡಿದ ಮೇಲೆ ನನ್ನ ಅನಿಸಿಕೆ ತಪ್ಪು ಅಂತ ಅನ್ನಿಸುತ್ತಿದೆ. ಕಾರಣ ಆ ಸಿನಿಮಾ ನೋಡಿದಾಗ ಯಾವುದೇ ರೀತಿಯ ನಮ್ಮ ಭಾರತವನ್ನು ತೆಗಳಿರುವುದಾಗಲಿ, ಅಥವಾ ಅವಹೇಳನಾಕಾರಿಯಾಗಿ ಚಿತ್ರಿಸಿದ್ದಾರೆ ಅಂತ ಅನಿಸಲಿಲ್ಲಾ...

ನಾವು ಸಾಮಾನ್ಯವಾಗಿ ಕೇಳುವ ಗಾದೆ ಮಾತು "ದೇಶ ಸುತ್ತು ,ಕೋಶ ಓದು" ಹಾಗೆ ಇನ್ನೊಂದು ಗಾದೆ "ಐದು ವರ್ಷ ಓದಿರೋ ಡಾಕ್ಟರ್ ಗಿಂತ ಹತ್ತು ವರ್ಷ ಕೆಲಸ ಮಾಡಿರೋ ಕಾಂಪೌಂಡರ್ ಲೇಸು", ಅಂತ.

ಅಂದ್ರೆ ಜ್ನಾನ ಸಂಪಾದನೆಗೆ ಕೋಶ ಓದ್ ಬೇಕು, ಅದಿಲ್ಲಾ ಅಂದ್ರೆ ದೇಶನಾದ್ರೂ ಸುತ್ತಬೇಕು ಆಗ ಜ್ನಾನ ತನ್ನಷ್ಟಕ್ಕೆ ತಾನೆ ಸಿಗುತ್ತದೆ. ಭಾರತದಲ್ಲಿ ಅಕ್ಷರಸ್ಥರಿಗೆ ಕೊರತೆ ಇದ್ದರೂ ಸಹ ಅನುಭವಸ್ಥರಿಗೆ ಕೊರತೆ ಇಲ್ಲಾ... ಅನುಭವ ಇದ್ರೆ ಏನ್ ಬೇಕಾದ್ರೂ ಸಾದನೆ ಮಾಡಬಹುದು ಎಂಬುದು ಸಿನಿಮಾ ರೂಪ ಪಡೆದರೆ ಅದು ಸ್ಲಂಡಾಗ್.. ಅಷ್ಟೇ.

ಇದಕ್ಕೆ ಉದಾಹರಣೆ ನಮ್ಮದೇ ದೇಶದ ಲಗಾನ್ ಸಿನಿಮಾ.. ಕೋಳಿ ಕಳ್ಳ ಚೆಂಡು ಕ್ಯಾಚ್ ಹಿಡಿಯೋದ್ರಲ್ಲಿ ಪರಿಣಿತನಾಗುತ್ತಾನೆ.. ಡೊಳ್ಳು ಬಾರಿಸುವವ ಸಿಕ್ಸ್ ಹೊಡಿತಾನೆ...ಒಟ್ಟಾರೆ ಅರ್ಥ ಅನುಭವ..

ಹಾಗೇ ಸ್ಲಂನಿಂದ ಪ್ರಾರಂಬವಾಗುವ ಹುಡುಗನ ಪಯಣ ಕಾಲ್ ಸೆಂಟರ್ ನಲ್ಲಿ ಟಿ ಸಪ್ಲೈ ಮಾಡೋ ಹಂತ ಮುಟ್ಟುವ ಹೊತ್ತಿಗೆ ಪಡೆಯುವ ಅನುಭವ ,ತನ್ನ ಗೆಳತಿಯನ್ನು ಪಡೆಯಲು ಮಾಡುವ ಪ್ರಯತ್ನದಲ್ಲಿ ಅವನನ್ನು ಕೋಟ್ಯಾದೀಶನನ್ನಾಗಿಸುತ್ತದೆ.
ಅದರಲ್ಲೂ ಈ ಸಿನಿಮಾದಲ್ಲಿ ಚರ್ಚಿತವಾಗಿರುವ ಹುಡುಗ ಅಮಿತಾಬ್ ನ ಆಟೋಗ್ರಾಫ್ ಪಡೆಯಲು ಅವನು ಆಯ್ದುಕೊಳ್ಳುವ ಹಾದಿ, ಸಿನಿಮಾದಲ್ಲಿ ಹುಡುಗನ ಅಮಾಯಕತೆ ಎತ್ತಿ ತೋರಿಸುತ್ತದೆ ಹೊರತು ಅಸಹ್ಯವನ್ನಲ್ಲಾ...ಅವನು ಹೊಂಡಕ್ಕೆ ಬಿದ್ದರೂ ಅಮಿತಾಬ್ ನ ಫೋಟೋ ಎತ್ತಿ ಹಿಡಿದಿಡುವ ದ್ರುಶ್ಯ ಭಾರತದಲ್ಲಿನ hero ಗಳ ಬಗ್ಗೆ ಸಾಮಾನ್ಯರಲ್ಲಿರೋ craze ಗೆ ಕನ್ನಡಿ...

ಇನ್ನುಳಿದಂತೆ ರೆಹಮಾನ್ ಬಗ್ಗೆ ಹೇಳಬೆಕೆಂದರೆ ಒಟ್ಟಾರೆ ಭಾರತದ ಸಿನಿಮಾಗಳ contemporary visual movement ನಲ್ಲಿರುವ contemporary Indian ಪ್ರೇಕ್ಷಕನ ಅಬಿರುಚಿಯನ್ನ್ನು ರಹಮಾನ್ ನ ಸಂಗೀತ ಅನುಕರಿಸಿದೆ ಎಂದೆನಿಸಿತು.ಸಕಾರಾತ್ಮಕವಾಗಿ.

ಇಡೀ ಸಿನಿಮಾವನ್ನು potrate ಮಾಡಿರುವ ರೀತಿ ಹಾಗು ಇದಕ್ಕೆ ಒದಗಿಸಿರುವ ಹಿನ್ನಲೆ ಸಂಗೀತ ಎಲ್ಲೂ ನಮಗೆ ಇದು ಪಾಷ್ಚಿಮಾತ್ಯ ದ್ರುಷ್ಟಿಕೋನವನ್ನು ಪ್ರತಿನಿದಿಸುತ್ತಿದೆ ಎಂದು ಅನಿಸುವುದಿಲ್ಲಾ.

ಜೈ ಹೋ ಸ್ಲಂಡಾಗ್ ...

Rating
No votes yet

Comments