ಹರವಬೇಡ ಕೂದಲು

ಹರವಬೇಡ ಕೂದಲು

ಇದು ನಾನು ಬರೆದ ಶಾಯ್ರಿ ಅಲ್ಲ, ನನ್ನ ತಂದೆ ಬರೆದದ್ದು. ಅವರ ೭೦ನೇ ವರ್ಷದ ನೆನಪಿನಲ್ಲಿ ಅವರು ಆಗಾಗ ಬರೆದ ಸಾಲುಗಳನ್ನು ಜೋಡಿಸಿ ನನ್ನ ಅಣ್ಣ ಪುಸ್ತಕ ಮಾಡಿಸುತ್ತಿದ್ದಾನೆ. ಅದರಲ್ಲಿನ ಒಂದು ಶಾಯ್ರಿ ಇಲ್ಲಿದೆ, ನನಗೆ ಇಷ್ಟವಾಯಿತು.

ಹೀಗೆ ಹರವ ಬೇಡ ನಿನ್ನ ಕೇಶರಾಶಿ

ನಾಚಿ ರಾತ್ರಿ ಎಲ್ಲಿಗೆ ಹೋಗಬೇಕು?

ನಾನು ಯೋಚಿಸಿದೆ ಪಡ್ಡೆಹುಡುಗರ ಸ್ಥಿತಿ ಏನಾಗಬೇಕು
ಒಂದು ವೇಳೆ ನೀನು ಹೆರಳನ್ನು ಸಡಿಲಿಸಿದರೆ

ಯಾರಾದರೂ ಚಂದ್ರ ಉದಯಿಸುವ ರೀತಿ ಕೇಳಿದರೆ
ಕೇಶರಾಶಿಯನ್ನು ಮುಖದಿಂದ ಸರಿಸಿಬಿಡು

ಮುಂಜಾನೆ ಕೇಶವನ್ನು ಹೀಗೆ ಹರವಬೇಡ
ಜನರು ರಾತ್ರಿಯೆಂದು ಭ್ರಾಂತರಾದಾರು!

ನದಿಯಲ್ಲಿ ಮಿಂದು ಕೂದಲಿಗೆ ಗಂಟಾಕಿದೆ
ನನ್ನ ಮನದಲ್ಲಿ ಏನೋ ವಿಚಾರ ಬಿಚ್ಚುತ್ತಿದೆ"

Rating
No votes yet

Comments