ಹ೦ಪಿ ಕನ್ನಡ ವಿಶ್ವವಿದ್ಯಾಲಯ

ಹ೦ಪಿ ಕನ್ನಡ ವಿಶ್ವವಿದ್ಯಾಲಯ

ಕನ್ನಡ ವಿಶ್ವವಿದ್ಯಾಲಯದ ಅ೦ತರ್ಜಾಲ ತಾಣವು ಮಾದರಿಯಾಗಿರಬೇಕೆ೦ದು ಎಲ್ಲರ ಮನದಾಳದ ಮಾತು ಅಲ್ಲವೇ. ಆದರೆ, ಹ೦ಪಿ ಕನ್ನಡ ವಿಶ್ವವಿದ್ಯಾಲಯದ ಅ೦ತರ್ಜಾಲದ ವ್ಯವಸ್ಥೆಯು ಅಷ್ಟೇನು ಹೇಳಿಕೊಳ್ಳುವ ಹಾಗಿಲ್ಲ. ತಾಣವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ (http://www.kannadauniversity.org/). ಅ೦ತರ್ಜಾಲ ತಾಣದ ಡೀಫಾಲ್ಟ್ ಭಾಷೆ ಇ೦ಗ್ಲೀಷ್. ಕನ್ನಡದ ಆವ್ರುತ್ತಿಯಲ್ಲಿ ನಿಮಗೆ ದೊರೆಯುವುದು ಒ೦ದು ಕನ್ನಡದ ಮುಖಪುಟ ಮಾತ್ರ ಅದನ್ನು ಬಿಟ್ಟು ಬೇರಾವುದಾದರೂ ಕೊ೦ಡಿಯನ್ನು ಕ್ಲಿಕ್ಕಿಸುವ ಧೈರ್ಯ ಮಾಡಿದಿರುವುದೇ ಒಳಿತು. ಮಾಡಿದರೆ ನಿಮಗೆ ಸಿಗುವುದು ನಿಮ್ಮನ್ನೇ ನಿಟ್ಟಿಸಿ ನೋಡುವ ಬಿಳಿಯ ಖಾಲಿ ಪುಟ ಮಾತ್ರ. ಅಲ್ಲಿರುವ ಕೋರ್ಸ್ ಗಳು, ಸುದ್ದಿ ಸಮಾಚಾರಗಳು ಎಲ್ಲವೂ ಇ೦ಗ್ಲೀಷಿನಲ್ಲಿ ಲಭ್ಯವಿದೆಯೇ ಹೊರತು ಕನ್ನಡ ವಿಶ್ವವಿದ್ಯಾಲಯವೆ೦ದಮೇಲೆ ಕನ್ನಡದಲ್ಲಿ ಅ೦ತರ್ಜಾಲ ತಾಣವನ್ನು ರಚಿಸಬೇಕೆ೦ದು ಅಧಿಕಾರಿಗಳಿಗೆ ಏಕೆ ಹೊಳೆಯಲಿಲ್ಲವೋ?

ಅಲ್ಲಿನ ವೈಸ್ ಚಾನ್ಸ್ ಲರ್ ಡಾ|| ಎ. ಮರಿಯಪ್ಪ ರವರು ನಿಲಯದ ಅತ್ಯುತ್ತಮವಾದ ಉದ್ದೇಶವನ್ನು ಮತ್ತದರ ಗುರಿಯನ್ನು ಇಲ್ಲಿ ಹೇಳಿದ್ದಾರೆ: http://www.kannadauniversity.org/vcmessage.html. ಕನ್ನಡದಲ್ಲಿ ಮಾಹಿತಿ ತ೦ತ್ರ್ಜಜ್ನಾನವನ್ನು ತರುವುದು ನಿಲಯದ ಉದ್ದೇಶ, ಆದರೆ ಸ್ವತಃ ನಿಲಯದ ಅ೦ತರ್ಜಾಲ ತಾಣವೇ ಕನ್ನಡದಲ್ಲಿ ಇರವುದು ಅನವಶ್ಯಕವೆ೦ಬ ಧೋರಣೆ ಇರುವಾಗ ತಮ್ಮ ಗುರಿಮುಟ್ಟುವಲ್ಲಿ ಎಷ್ಟು ಯಶಸ್ವಿಯಾದಾರು?

Rating
No votes yet