ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೯೫೫)- ನೀನೇ

ನಾನು ಇನ್ನೊಂದಷ್ಟೇನೋ ಹೊಸತನ್ನು ಮಾಡಬೇಕು ಅಂದುಕೊಂಡಿದ್ದೇನೆ, ನನ್ನ ಜೊತೆಗೆ ಬರುವವರು ಯಾರು ಇಲ್ಲ, ನನ್ನಲ್ಲಿ ಬೇರೆ ಬೇರೆ ರೀತಿಯ ಕನಸುಗಳಿದ್ದಾವೇ, ಆ ಕನಸನ್ನ ಅರ್ಥ ಮಾಡಿಕೊಂಡು ಅದರಂತೆ ನಡೆ ಸರಿ ತಪ್ಪುಗಳನ್ನು ನಾವು ತಿಳಿಸುತ್ತೇವೆ ಅನ್ನುವವರು ಇಲ್ಲ.

Image

ಗದ್ದೆ ಗೊರವ ಹಕ್ಕಿ

ಬೇಸಗೆಯ ಬಿಸಿಲು ತಾರಕದಲ್ಲಿದೆ. ಬಿಸಿಲು ಏರಿದ ಮೇಲೆ ಹೊರಗೆ ಹೋಗುವುದೇ ಬೇಡ ಎನ್ನುವಷ್ಟು ಕಿರಿಕಿರಿ. ಕಳೆದ ವಾರ ಚುನಾವಣಾ ಕರ್ತವ್ಯ ಮುಗಿಸಿ ಬಂದು ಆರೋಗ್ಯವೂ ಸ್ವಲ್ಪ ಕೆಟ್ಟಿತ್ತು. ಎರಡು ದಿನ ಎಲ್ಲೂ ಹೋಗದೆ ಮನೆಯಲ್ಲೇ ವಿಶ್ರಾಂತಿ ಪಡೆದೆ. ರಜೆಯಲ್ಲಿ ಆಟ ಆಡಲು ಯಾರೂ ಇಲ್ಲದೆ ಮಗಳು ಮನೆಯಲ್ಲಿ ಚಡಪಡಿಸುತ್ತಿದ್ದಳು. ಅಪ್ಪಾ ಬೀಚ್ ಗೆ ಹೋಗಿ ಸ್ವಲ್ಪ ಆಟ ಆಡಿ ಬರೋಣ ಎಂದು ಪ್ರಸ್ತಾವನೆ ಇಟ್ಟಳು.

Image

ಕೋಪಕ್ಕೆ ಕತ್ತರಿ ಹಾಕಿ !

‘ಅನ್ನ ತಿನ್ನುವ ಪ್ರತಿಯೊಬ್ಬನಿಗೂ ಕೋಪ ಬರುತ್ತೆ' ಈ ಮಾತನ್ನು ನನ್ನ ಅಜ್ಜಿ ಯಾವಾಗಲೂ ಹೇಳುತ್ತಾ ಇರುತ್ತಿದ್ದರು. ಅವರಿಗೂ ಕೋಪ ಬರುತ್ತಿತ್ತು. ಆದರೆ ವಯಸ್ಸಿನ ಅನುಭವೋ ಏನೋ ಅದನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ದರು. ಅವರಿಗೆ ಬಹಳಷ್ಟು ತಾಳ್ಮೆ ಇತ್ತು. ಕೋಪ ಬಂದಾಗ ಬಹುತೇಕರು ತಮ್ಮ ತಾಳ್ಮೆಯನ್ನು ಕಳೆದುಕೊಂಡು ಬಿಡುತ್ತಾರೆ. ಕೋಪ ನೆತ್ತಿಗೇರಿದಾಗ ಬೇಡದ ಕಾರ್ಯಗಳನ್ನು ಮಾಡುತ್ತಾರೆ.

Image

ಅಮೀಬಾ

ಪುಸ್ತಕದ ಲೇಖಕ/ಕವಿಯ ಹೆಸರು
ಭಗೀರಥ
ಪ್ರಕಾಶಕರು
ಟೋಟಲ್ ಕನ್ನಡ, ಜಯನಗರ, ಬೆಂಗಳೂರು -೫೬೦೦೧೧
ಪುಸ್ತಕದ ಬೆಲೆ
ರೂ. ೩೫೦.೦೦, ಮುದ್ರಣ: ೨೦೨೪

‘ಅಮೀಬಾ’ ಎನ್ನುವ ರೋಚಕ ಕಾದಂಬರಿಯನ್ನು ಬರೆದದ್ದು ಉದಯೋನ್ಮುಖ ಕಾದಂಬರಿಕಾರರಾದ ಭಗೀರಥ. ಅವರು ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಪುಸ್ತಕದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಅದರ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

ಬ್ಲೇಡ್ ಕಂಪನಿಗಳ ಅಟ್ಟಹಾಸ...

ಕೇವಲ ನಾಲ್ಕು ತಿಂಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬ್ಲೇಡ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸುಮಾರು 20 ಕೋಟಿಗೂ ಹೆಚ್ಚು ಹಣ ವಂಚನೆಯಾಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೯೫೪)- ಕಾರ್ಮಿಕರ ದಿನ

ದೊಡ್ಡ ಕಟ್ಟಡದ ಒಳಗೆ ಕುಳಿತುಕೊಳ್ಳುವುದಕ್ಕೆ ಸಾವಕಾಶ ವ್ಯವಸ್ಥೆ ಇದೆ. ದಿನದ ಎಲ್ಲಾ ಹೊತ್ತು ತಿರುಗುವ ಫ್ಯಾನುಗಳಿದ್ದಾವೆ, ದೇಹವನ್ನು ತಂಪುಗೊಳಿಸುವುದಕ್ಕೆ ಎಸಿಗಳು ಕೆಲಸ ಮಾಡ್ತಾ ಇದ್ದಾವೆ. ಇವೆಲ್ಲವೂ ಆ ಕೊಠಡಿಯ ಒಳಗೆ ಬದುಕುತ್ತಿರುವವರಿಗೆ. ಇನ್ನೊಂದಷ್ಟು ಹೆಚ್ಚು ಹೊತ್ತು ಕೆಲಸ ಮಾಡುವುದಕ್ಕೆ ಪ್ರೇರಣೆಯನ್ನು ನೀಡುತ್ತಿದ್ದಾವೆ.

Image

ಪ್ರವಾಸ ಕಥನ : ಅಮೇರಿಕಾ... ಅಮೇರಿಕಾ... (ಭಾಗ 1)

(ಅಮೇರಿಕಾ ಪ್ರವಾಸ ಹೊರಡುವ ಮೊದಲು... ಬೆಂಗಳೂರಿನ ವಿಜ್ಞಾನ ಬರಹಗಾರ ಕೆ ನಟರಾಜ್ ಅವರು ತಮ್ಮ ಕುಟುಂಬದ ಜೊತೆ ಅಮೇರಿಕಾಗೆ ಪ್ರವಾಸ ಹೋಗಿದ್ದರು. ಆ ಪ್ರವಾಸದಲ್ಲಿ ಅವರು ಕಂಡ, ತಿರುಗಾಡಿದ ಸ್ಥಳಗಳ ಬಗ್ಗೆ ಪ್ರವಾಸ ಕಥನ ಬರೆದಿದ್ದಾರೆ. ಈ ಪ್ರವಾಸ ಕಥನವು ಧಾರವಾಹಿ ರೂಪದಲ್ಲಿ ಪ್ರತೀ ಶುಕ್ರವಾರ 'ಸಂಪದ' ದಲ್ಲಿ ಪ್ರಕಟವಾಗಲಿದೆ.

Image

ನೆನೆಯೋಣ ನರಸಿಂಹನ...

ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಉಗ್ರ ಮತ್ತು ಭಯಂಕರ ರೂಪಿನ ಅವತಾರವೇ ನರಸಿಂಹವವತಾರ ಎಂದು ಪುರಾಣಗಳಲ್ಲಿ ಓದಿದ ನೆನಪು. ವಿಷ್ಣು ಭಕ್ತನಾದ ಶಿಶು ಪ್ರ‌ಹ್ಲಾದನ ಕಷ್ಟವನ್ನು, ಪ್ರಜೆಗಳ ನಂಬಿಕೆಯನ್ನು ಉಳಿಸಲು, ಕಾಪಾಡಲು ದೇವ ನರಸಿಂಹ ಭೂಮಿಗಿಳಿದನಂತೆ. ಅಸುರರಾಜ ಹಿರಣ್ಯಕಶ್ಯಪುವನ್ನು ವಧಿಸಿ ಲೋಕಕ್ಷೇಮ ಉಂಟುಮಾಡಿದ ದೇವನೀತ.

Image